ಹೊಸವರುಷ
ಅಬ್ಬರಿಸುತಲಿದೆ
ಹೊಸ ವರುಷದ ಹರುಷ ದಶ ದಿಕ್ಕುಗಳಲಿ
ಮುಗಿಲೆತ್ತರಕ್ಕೆ ಸೌಂದರ್ಯದ
ಸಿಡಿ ಮದ್ದುಗಳ ಬಣ್ಣ ಬಣ್ಣದ ಕಲರವ.
.
ಮೂಡುತ್ತಲಿದೆ ಜನರ
ಮೂಡುತ್ತಲಿದೆ ಜನರ
ಮನದ ಬೃಂದಾವನದಲಿ
ಭರವಸೆಯ ಉತ್ಸಾಹ..
.
ಹೊಸ ಕನಸುಗಳ ರಾಶಿ
ಹೊಸ ಕನಸುಗಳ ರಾಶಿ
ಗರಿಕೆದರುತಿವೆ ಹೊಸ ವರುಷದ ರಸಗಳಿಗೆಗೆ.
ನಗರದ ಸಡಗರ ಸಂಭ್ರಮ
ನೃತ್ಯದ ನವ ನಾವೀನ್ಯತೆ ಯುವ ವರ್ಗದಲಿ .
.
ಮೂಡಲಿ ಉತ್ಸಾಹ
ಮೂಡಲಿ ಉತ್ಸಾಹ
ಪ್ರಕೃತಿಯ ಮಡಿಲ ರಕ್ಷಣೆಗೆ
ಬರಲಿ ಹೊಸವರುಷಕ್ಕೆ
ಪ್ಲಾಸ್ಟಿಕ್ ದ್ವೇಷದ ರೋಷ ಸರ್ವರಲಿ.
.
ಬರಲಿ ಹೊಸ ವರುಷದ ಹರುಷ ಜೀವರಾಶಿಯಲಿ
ಬರಲಿ ಹೊಸ ವರುಷದ ಹರುಷ ಜೀವರಾಶಿಯಲಿ
ಪ್ರೀತಿಯ ಹೊಸ ವರುಷದ ಹೊಸ ಚಿಗುರು
ಕರಗಲಿ ಜನ-ದ್ವೇಷದ ಅಗ್ನಿಕುಂಡ.
.
-ರಾಘವ ರಾವ್
.
.
Super continue on your work & all the best
Thank you Nandithaji
ಚೆನ್ನಾಗಿದೆ .ಹೊಸ ವರ್ಷದ ಕವನ
ನೈಸ್ . ಹೊಸ ವರುಷದ ಶುಭ ಹಾರೈಕೆಯೊಂದಿಗೆ ಪ್ರಕೃತಿಯನ್ನು ಪ್ಲಾಸ್ಟಿಕ್ ಮುಕ್ತ ಗೊಳಿಸುವಂತೆ ನೀಡಿದ ಸಂದೇಶ ಚೆನ್ನಾಗಿದೆ
ನವ ವರುಷದ ಸ್ವಾಗತಕ್ಕೆ ಸುಂದರ ಕವನ.