ನಾವೇ ಭೇಟಿ ಆದದ್ದೇ ಆದರೆ… 

Share Button

1
ಬದುಕಿನ ಸೀಳುದಾರಿಗಳಲ್ಲಿ ತಲೆಗೊಂದು ದಾರಿ
ಸಂಧಿಸಿದಷ್ಟು ಹೊತ್ತು ಹಿಡಿಯುವುದಿಲ್ಲ ಬಿಡು ಬೇರೆಯಾಗಲು
2
ಒಂದು ನಿಷ್ಕ್ರಮಣದ ಬಳಿಕ
ಒಂದು ಸಂಭಾಷಣೆಯ ಕಡೆಯ ಸಾಲಿನ ನಂತರ
ಏನುಳಿಯುತ್ತದೆ ಎಂದು ಆಲೋಚಿಸುತ್ತಿರುತ್ತೇನೆ
ಒಂದು ನೆರಳಾ?
ಮತ್ತೊಂದು ಕಿರುನಗೆಯಾ?
ಇನ್ನೊಂದು ಹೇಳದೆ ಉಳಿದ ಮಾತಾ?
3
ಹೇಗಿದ್ದರೂ ಹೊರಟುಬಿಡುತ್ತೇವೆ
ಇಲ್ಲಿ ಮರಗಳಲ್ಲಿ ಕೆಲವು ಕೊಂಬೆಗಳಾದ ಮೇಲೆ
ಹೇಗೋ ಹಾಗೆ ಹೊರಟುಬಿಡುತ್ತೇವೆ
ಇಲ್ಲಿನ ಗಾಳಿಯಲ್ಲಿ ಒಂದಿಷ್ಟು ಸದ್ದನ್ನು ಮೂಡಿಸಿದ ಮೇಲೆ
ಹೇಗಿದ್ದರೂ…
ಹೇಗಿದ್ದರೂ ಹೊರಟುಬಿಡುತ್ತೇವೆ
ಇಲ್ಲಿ ನಾಲ್ಕುಜನರ ಮಾತಿನಲ್ಲಿ
ಒಂದಿಷ್ಟು ಉದುರಿ…
ಮತ್ತೆ ಮತ್ತೆ ಬರಲಾಗದೆ!
4
ಮತ್ತೊಂದು ಜಾಗದಲ್ಲಿ ಎಲ್ಲೊ
ಮತ್ತೊಂದು ಭೇಟಿಯನ್ನು ಕನಸು ಕಾಣುತ್ತೇವೆ
ನಿಶ್ಚಿತವಾಗಿ ಮರೆಯುತ್ತೇವೆ ಗಾಯವಾಗುವಷ್ಟು ತೀವ್ರವಾಗಿ
ಈ ಹಿರಿದಾದ ಪ್ರಪಂಚದ ಕಾಡಿನಲ್ಲಿ
ಎಲ್ಲೊ ಯಾರೂ ಗುರುತಿಸದಂತೆ ಇಂಗಿಹೋಗುತ್ತೇವೆ
5
ಆದರೇ…
ನಾವೇ ಸಂಧಿಸಿದ್ದೇ ಆದರೆ
ಈ ದೊಡ್ಡ ಪ್ರಪಂಚ ಸೋತುಹೋಗುತ್ತೆ
ನಾವೇ ಮತ್ತೆ ಮಾತನಾಡಲಾರಂಭಿಸಿದರೆ
ಈ ಕಾಲ ಸ್ವಲ್ಪ ಹೊತ್ತಾದರೂ ನಿಂತುಹೋಗುತ್ತೆ
ಎಲ್ಲಾದರೂ ಭೇಟಿಯಾಗೋಣ ಕನಸುಗಗಳಲ್ಲೇ ಅಲ್ಲದೆ,
ನನಸಾಗಿಯೂ!
ಸಂತಸದಲ್ಲಿ ಅಲ್ಲದಿದ್ದರೂ ಒಂದಿಷ್ಟು ದಿಗಿಲಿನಲ್ಲಿ
ದಿಗಿಲಿನಲ್ಲಿ ಅಲ್ಲದಿದ್ದರು
ಒಂದಿಷ್ಟು ಬಚ್ಚಿಟ್ಟ ಕಿರುನಗೆಯಲ್ಲಿ
6
ಯಾವಾಗಲಾದರೂ ಮತ್ತೆ ಸಂಧಿಸೋಣ…
ಕಾಲವನ್ನು ಸೋಲಿಸುವುದಕ್ಕೋ ,
ಜೀವನವನ್ನು
ಒಂದು ಕ್ಷಣವಾದರೂ
ಗೆಲ್ಲಿಸುವುದಕ್ಕೋ!

,

ತೆಲುಗು ಮೂಲ : ಆಫ್ಸರ್ ಮೊಹಮ್ಮದ್
ಅನುವಾದ : ರೋಹಿಣಿ ಸತ್ಯ
.

8 Responses

  1. km vasundhara says:

    ಚೆಂದ

  2. ನಯನ ಬಜಕೂಡ್ಲು says:

    ಒಂದೇ ಕವನದೊಳಗೆ ಹಲವಾರು ಅರ್ಥಗಳು. Nice

  3. Hema says:

    ಚೆಂದದ ಕವನ. ಕೊನೆಯ ಪ್ಯಾರಾ ಆಪ್ತವೆನಿಸಿತು.

  4. ASHA nooji says:

    ಸುಪರ್

  5. Shankari Sharma says:

    ಚಂದದ ಕವನ

Leave a Reply to Shankari Sharma Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: