ನವಿಲು ಗರಿ ಮರಿ ಹಾಕಿದೆ
ಮುದ್ದು ಮಾಡಿ ಕೊಟ್ಟೆ ನೀನು
ಚಂದದ ನವಿಲಗರಿಯೊಂದನು
ನೀಲ ಮೇಘ ಶ್ಯಾಮನೊಲುಮೆಯ
ರಾದಾಮಾಧವನ ಕೊಳಲಲಿ
ಜೋಕಾಲಿಯಾಡುತ್ತಿದ್ದ ನವಿಲಗರಿಯೊಂದನು
.
ಬಣ್ಣಬಣ್ಣದಿ ಕಂಗೊಳಿಸುತ್ತಿದ್ದ
ಬಣ್ಣಬಣ್ಣದಿ ಕಂಗೊಳಿಸುತ್ತಿದ್ದ
ಅತ್ಯಮೂಲ್ಯ ಬಳುವಳಿಯೊಂದನು
ದೇಹದೊಳಗೆ ಜೀವವಿರುವ ಹಾಗೆ
ಜತನದಿಂದ ತನುಮನದೊಳಗೆ
ಕಾಪಿಟ್ಟುಕೊಂಡೆ ನಲ್ಲ ನಾನದನು
.
ಆಗೊಮ್ಮೆ ಈಗೊಮ್ಮೆ ಮೃದುವಾಗಿ
ಆಗೊಮ್ಮೆ ಈಗೊಮ್ಮೆ ಮೃದುವಾಗಿ
ಮೈದಡುವುತ್ತಿದ್ದೆ ನಿನ್ನದೇ ನೆನಪುಗಳನು
ಬಾಳಹಾದಿಯ ಏಳು ಬೀಳುಗಳಲೂ
ಕಳೆದುಕೊಳ್ಳಲಿಲ್ಲ ನಂಬಿಕೆಯನು
ನಾ ನಿನ್ನ ಮೇಲಿಟ್ಟ ಭರವಸೆಯೊಂದನು
.
ನೋಡೀಗ ವಿಸ್ಮಯವೊಂದನು
ನೋಡೀಗ ವಿಸ್ಮಯವೊಂದನು
ನೀ ಕೊಟ್ಟ ಒಲವ ನವಿಲಗರಿಯದು
ಮುದ್ದಾಗಿ ಹಾಕಿದೆ ಕೂಸೊಂದನು
ನಲಿದಿದೆ ಕುಣಿವ ನವಿಲಂದದಿ,
ನೋಡು ಬಾ ಗೆಳೆಯಾ ಹೇಳಿದೆ,
ನೂರು ಜನ್ಮದ ನಮ್ಮ ಪ್ರೇಮದ ಕಥೆಯೊಂದನು
.
-ಸವಿತಾ ಎಸ್ ಪಿ , ತುಮಕೂರು
-ಸವಿತಾ ಎಸ್ ಪಿ , ತುಮಕೂರು
ಬಾಲ್ಯದಲ್ಲಿ ಪುಸ್ತಕ ದೊಳಗೆ ನವಿಲುಗರಿ ಇಡುತ್ತಿದ್ದ ದಿನಗಳ ನೆನಪು ಮರುಕಳುಸಿತು.
ಧನ್ಯವಾದಗಳು ಮೇಡಂ…
ಅಬ್ಬಾ, ಬಾಲ್ಯದ ದಿನಗಳಿಂದ ಇಟ್ಟು ಕಾಯುತಿದ್ದ ನವಿಲು ಗರಿ ಕೊನೆಗೂ ಮರಿ ಹಾಕಿತು . ಸುಂದರ ಕವಿತೆ ಸವಿತಾ ಜಿ . ಈ ನವಿಲು ಗರಿಯ ಜೊತೆಗಿನ ಮೃದು ಮಧುರ ನೆನಪುಗಳು ಸುಂದರ .
ಧನ್ಯವಾದಗಳು ಡಿಯರ್……
ನೆನಪಿನ ನವಿಲಗರಿ ಮರಿ ಇಟ್ಟ ಕವನ ಚೆನ್ನಾಗಿದೆ. ಬಾಲ್ಯದಲ್ಲಿ ಪುಸ್ತಕದ ಮಧ್ಯೆ ನವಿಲಗರಿ ಇಟ್ಟು ದಿನಕ್ಕೆ ನೂರು ಸಲ ಅದು ಮರಿ ಇಟ್ಟಿದೆಯಾ ಎಂದು ನೋಡ್ತಿದ್ದುದು ನೆನಪಾಯ್ತು.
Thank you for publishing my poem
ಅಬ್ಬಬ್ಬಾ!! ಇದೊಂದು ಅಮೋಘವಾದ ಶಬ್ದಚಾತುರ್ಯಗಳಿಂದ . ಬಹಳ ಸುಂದರವಾಗಿ ರಚಿಸಲಾದ ಕವನ. ಪ್ರೀತಿಯೆಂಬ ನವಿಲುಗರಿಯು ಬೆಳೆದು ನಿಂತು ಮರಿಹಾಕಿದೆ ಎಂದು ಉತ್ಪ್ರೇಕ್ಷಿಸಿದ್ದೀರಿ. ನಿಜಕ್ಕೂ ನೀವು ಪ್ರತಿಭಾನ್ವಿತ ಕವಯತ್ರಿ. ಶಿರಬಾಗಿ ನಮಿಸುವೆ
ಚೆಂದ
Tumba sundaravaagi barediruviri. Khushi aaytu odi. Heege bareetaa iri.