ನಮ್ಮ ನಾಡು
.
ನಮ್ಮ ನಾಡ ಕಟ್ಟಬೇಕು
ಬನ್ನಿ ನಮ್ಮ ಸಂಗಡ
ನಮ್ಮ ಭಾಷೆ ಬೆಳೆಯಬೇಕು
ಹೇಳಬೇಕು ಕನ್ನಡ
.
ವೃಕ್ಷಗಳನು ಬೆಳೆಸಬೇಕು
ಹಚ್ಚಿರೆಲ್ಲಾ ಸಸಿಗಳಾ
ಉಸಿರುಸಿರಿಗೆ ಹಸಿರು ಬೇಕು
ಬೀಸಲೊಮ್ಮೆ ಮರಗಳ
.
ಹೊಟ್ಟೆ ತುಂಬ ಅನ್ನ ಬೇಕು
ಇರುವುದೊಂದೆ ಆಸರ
ಭೂಮಿ ತುಂಬ ಹರಗಬೇಕು
ಮಳೆ ಬರದೆ ಬೇಸರ
,
ಕಾಡ ಮೃಗಗಳ ನಾಡ ಖಗಗಳ
ಇರಲಿ ನಮ್ಮ ಪರಿಸರ
ಭೂಮಿ ಬೆಳೆಯಲಿ ಮಡಿಲ ತೆನೆಗಳ
ಮಳೆಯು ಬರಲಿ ಸರಸರ
.
ನಮ್ಮ ನಾಡ ಕಟ್ಟಬೇಕು
ಬನ್ನಿ ನಮ್ಮ ಸಂಗಡ
ಎಲ್ಲೆಡೆಗು ಹರಡಬೇಕು
ಕನ್ನಡ ಕನ್ನಡ
.
–ಮಧುಮತಿ ರಮೇಶ್ ಪಾಟೀಲ್
ತುಂಬ ಅರ್ಥಪೂರ್ಣ ಕವನ ಮೇಡಂ
ಚೆನ್ನಾಗಿದೆ ಮೇಡಂ ಕವನ
ಕನ್ನಡ ಬೆಳಸೋಣ
ಕನ್ನಡದ ಸವಿಯೇ ಬೇರೆ . ಚೆನ್ನಾಗಿದೆ
ಸಕಾಲಿಕವಾದ ಚೆಂದದ ಕವನ..
ಸುಂದರ ಕವನ ಮೇಡಂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಕನ್ನಡ ರಾಜ್ಯೋತ್ಸವಕ್ಕಾಗಿ ಸುಂದರ ಕವನ…ಚೆನ್ನಾಗಿದೆ.