ಕನ್ನಡ ಉಳಿಸಿ ಬೆಳೆಸಿ..
ಕನ್ನಡ ಪ್ರಿಯರೆ ನಮ್ಮ ನೆಲ ಕನ್ನಡ, ಹಸಿರು ಉಸಿರು ಹರಿಯುವ ನದಿ, ಎಲ್ಲವೂ ಕನ್ನಡ. ಹೀಗಿರುವಾಗ, ನಾವೇಕೆ ಕನ್ನಡವನ್ನು ಇನ್ನೂ ಎತ್ತರಕ್ಕೆ ಕರೆದೊಯ್ಯಬಾರದು. ಮಾತನಾಡುವಾಗ ಕನ್ನಡ ಪದ ಬಳಕೆ ಹೆಚ್ಚಾಗಲಿ. ಕನ್ನಡವನ್ನು ಅಭಿಮಾನದಿಂದ ಮಾತನಾಡೋಣ. ಕನ್ನಡ ನುಡಿಯನ್ನು ನಾಡಿನ ಗಲ್ಲಿಗಲ್ಲಿಯೂ ಕಂಫು ಸೂಸುವಂತೆ ಮಾಡೋಣ. ಕನ್ನಡ ಅಭಿವೃದ್ಧಿಯತ್ತ ಸಾಗೋಣ.
.
ನಾವು ಆಂಗ್ಲ ಭಾಷೆಯಲ್ಲಿ ಕಲಿತಿದ್ದೇವೆಂದ ಮಾತ್ರಕ್ಕೆ ಕನ್ನಡದ ಸೊಗಡನ್ನು ಮರೆಯಲಾದೀತೆ. ಆಂಗ್ಲ ಭಾಷೆಗೆ ಮಾರು ಹೋಗಿ ಕನ್ನಡಭಿಮಾನವನ್ನು ಕಡಿಮೆಗೊಳಿಸಲಾಗುತ್ತಿದೆ. ನಮ್ಮ ನಾಡು, ಸಂಸ್ಕೃತಿಯ ಬಗ್ಗೆ ನಮಗೆ ಹೆಮ್ಮೆ ಇರಬೇಕು. ಆಂಗ್ಲ ಭಾಷಾ ಬಳಕೆ ನಮಗೆ ಯಾಕೆ ಬೇಕು. ಬೇರೆ ರಾಜ್ಯ ಮತ್ತು ರಾಷ್ಟ್ರದ ಜನತೆಯೊಂದಿಗೆ ಮಾತನಾಡಲು, ಉದ್ಯೋಗದಲ್ಲಿ ಅನಿವಾರ್ಯತೆಯಿದ್ದಾಗ, ಮಾತನಾಡಲು ಮಾತ್ರ ಬೇಕು. ಅನ್ಯ ಭಾಷೆ ಊಟದ ಜೊತೆಗಿನ ಉಪ್ಪಿನ ಕಾಯಿಯಂತಿರಬೇಕು, *ಆದರೆ ಉಪ್ಪಿನಕಾಯಿಯೆ ಊಟವಾಗಬಾರದಲ್ಲವೆ. ಹೊರ ರಾಜ್ಯದವರು ಉದ್ಯೋಗಕ್ಕಾಗಿ ಬಂದು ಕನ್ನಡಮ್ಮನ ನಾಡಿನಲ್ಲಿಯೆ ಉಳಿದಿರುತ್ತಾರೆಂದರೆ, ನಮ್ಮ ತಾಯಿ ನಾಡು ಅವರನ್ನೂ ತನ್ನ ಮಕ್ಕಳಂತೆ ಅಪ್ಪಿಕೊಂಡು ಉದ್ಯೋಗವನ್ನು ಕಲ್ಪಿಸಿಕೊಟ್ಟಿರುತ್ತಾಳೆ. ಅವರೊಂದಿಗೆ ಕನ್ನಡ ಮಾತನಾಡಿ ಅವರಿಗೂ ಕನ್ನಡ ಕಲಿಸಬಹುದಲ್ಲವೆ. ನಮ್ಮ ಭಾಷೆಯನ್ನು ಹೊರ ರಾಜ್ಯದವರಿಗೂ ಕಲಿಸೋಣ. ಅಲ್ಲದೆ ಪೂರ್ವ ಪ್ರಾಥಮಿಕದಿಂದ ಪದವಿವರೆಗೂ ಕನ್ನಡ ಭಾಷೆ ಕಡ್ಡಾಯವಾಗಿರಬೇಕು. ಕನ್ನಡ ಮಾಧ್ಯಮದ ಶಾಲೆಗಳು ಹೆಚ್ಚಾಗಬೇಕು. ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಉದ್ಯೋಗಾವಕಾಶಗಳು ಹೆಚ್ಚಾಗಿರಬೇಕು. ಇದರಿಂದ ಕನ್ನಡದ ಕಲಿಕೆ, ಬಳಕೆ ತಾನಾಗಿಯೆ ಹರಡುತ್ತದೆ.

ನಮ್ಮ ನಾಡ ಸಂಸ್ಕೃತಿಯ ಸೊಬಗು, ನಮ್ಮ ಪೂರ್ವಿಕರು ನಮಗಾಗಿ ಬಿಟ್ಟು ಹೋದ ಬಹು ದೊಡ್ಡ ಆಸ್ತಿ ಉತ್ತಮ ಅಂಶಗಳನ್ನೊಳಗೊಂಡ ಸಾಹಿತ್ಯ. ಇಂತಹ ಸಾಹಿತ್ಯದಲ್ಲಿ ಜನರ ಅನುಭವದಿಂದ ಹುಟ್ಟಿಕೊಂಡ ಜನಪದ ಸಾಹಿತ್ಯ, ದಾಸರ ಸಾಹಿತ್ಯ, ಮಹಾ ಕವಿಗಳ ಅತ್ಯದ್ಭುತವಾದ ಕಥೆ, ಕವನ, ಕಾದಂಬರಿ, ಜೀವನ ಚರಿತ್ರೆ, ಹಿತೋಪದೇಶಗಳ ಕೃತಿಗಳು, ಇಂತಹ ಬಹು ದೊಡ್ಡ ಆಸ್ತಿಗಳ ಬಳಕೆಯಿಂದ ಕನ್ನಡದ ಆಸ್ತಿ ಅಭಿವೃದ್ಧಿ ಹೊಂದುತ್ತದೆ. ನಮ್ಮ ಮಕ್ಕಳಿಗೆ ಹೆಸರಾಂತ ಕವಿಗಳ, ಮಹಾತ್ಮರ ಹೆಸರುಗಳ ಪರಿಕಲ್ಪನೆ ಮಾಡಿಕೊಡಬೇಕು. ಅಷ್ಟೆ ಅಲ್ಲ ನಮ್ಮ ದೇವಾಲಯಗಳು ಶಿಲ್ಪ ಕಲೆಗೆ ಹೆಸರುವಾಸಿಯಾಗಿದೆ.

ಯಕ್ಷಗಾನ, ನೃತ್ಯ, ತೊಗಲು ಬೊಂಬೆಯಾಟ, ನಾಟಕ, ಚಲನ ಚಿತ್ರ, ಕಲಾಕೃತಿಗಳನ್ನು ಮೆಚ್ಚಿ ಪ್ರೋತ್ಸಾಹಿಸೋಣ. ಕನ್ನಡ ಭಾಷೆಯ ಮೆರುಗನ್ನು ಹೆಚ್ಚಿಸೋಣ. ನಮ್ಮ ಇತ್ತೀಚೆಗೆ ಕನ್ನಡ ಚಲನಚಿತ್ರಗಳನ್ನು ನೋಡುವುದು ಕಡಿಮೆ ಮಾಡಿದ್ದಾರೆ. ಹಾಗಾಗಬಾರದು. *ಕನ್ನಡ ಚಲನ ಚಿತ್ರಗಳಿಗೆ* ಹೆಚ್ವು ಒಲವನ್ನು ಕೊಡೋಣ.

ನಮ್ಮ ನಾಡು ಕಲಾಕೃತಿಗಳ ಬೀಡು. ಸಾಧಕರ ನೆಲೆವೀಡು, ಕಲೆಗಳ ಸುಗಂಧ ಬೀರುವ ಹೆಮ್ಮೆಯ ನಾಡು, ಇಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆಯ ಕಲಾವಂತಿಕೆಯ ಸಂಭ್ರಮ, ಹಲವು ಮಜಲುಗಳನ್ನು ಹೊಂದಿದ ಸಂಸ್ಕೃತಿ ನಮ್ಮದು. ಇಂತಹ ಪುಣ್ಯದ ನೆಲದಲ್ಲಿ ವಾಸಿಸುತ್ತಿರುವ ನಾವುಗಳು, ಕನ್ನಡವನ್ನು ಮರೆಯಬಾರದಲ್ವೆ. ಕನ್ನಡವನ್ನು ಬೆಳೆಸಿರಿ ಕನ್ನಡವನ್ನು ಉಳಿಸಿರಿ.

*ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ*
-ಮಧುಮತಿ ರಮೇಶ್ ಪಾಟೀಲ್
ನಿಜವಾದ ಮಾತುಗಳನ್ನು ಹೇಳಿದ್ದೀರಿ.. ಕನ್ನಡ ಬಳಸಿದರೇ ಕನ್ನಡ ಉಳಿಯೋದು..
ಕನ್ನಡದ ಕಂಪನ್ನು ಸೂಸುವಂತಹ ಬರಹ . ಇಲ್ಲಿ ಕೇರಳದಲ್ಲಿ ಮಲಯಾಳಿಗಳು ಸ್ವಲ್ಪವೂ ಅವರ ಭಾಷೆಯನ್ನು ಬಿಟ್ಟು ಕೊಡುವುದಿಲ್ಲ, ಎಲ್ಲಿ ಹೋದರೂ ಅವರ ಭಾಷೆಯನ್ನೇ ಮಾತನಾಡುತ್ತಾರೆ ಹಾಗಿರುವಾಗ ನಾವು ಕನ್ನಡಿಗರು ನಮ್ಮತನವನ್ನು ಯಾಕೆ ಬಿಟ್ಟು ಕೊಡಬೇಕು ? ನಮ್ಮ ಮನೆಗೆ ಒಂದು ದಿನ ಒಬ್ಬ ಮಲಯಾಳಿ ಆಫೀಸರ್ ಏನೋ ವಿವರಗಳನ್ನು ಪಡೆಯಲು ಬಂದಿದ್ದ . ಅವನಿಗೆ ಕನ್ನಡ ಅರ್ಥವಾಗುತಿದ್ದರೂ ಮಲಯಾಳಂ ಅಲ್ಲೇ ಮಾತನಾಡುತಿದ್ದ. ನಾನು ಅಷ್ಟೇ ನನಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ ನಿಮಗೆ ಎಷ್ಟು ಅರ್ಥ ಆಗುತ್ತದೋ ಅಷ್ಟು ವಿವರ ಬರೆದುಕೊಂಡು ಹೋಗಿ ಅಂದೇ . ಅವನು ಮಲಯಾಳಂ ನಲ್ಲಿ ಪ್ರಶ್ನೆ ಕೇಳುತಿದ್ದ, ನಾನು ಕನ್ನಡದಲ್ಲೇ ಉತ್ತರಿಸಿದೆ. ಇನ್ನೊಬ್ಬರು ನಮ್ಮ ನಡುವೆಯೇ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿರುವವರು ನನ್ನ ದೃಷ್ಟಿಯಲ್ಲಿ ಸುರಹೊನ್ನೆ ಅಂತರ್ಜಾಲ ಪತ್ರಿಕೆಯ ಮೂಲಕ ಹೊಸ ಹಾಗು ಎಲ್ಲಾ ಬರಹಗಾರರಿಗೂ ಅವಕಾಶ ನೀಡುತ್ತಾ ಪ್ರೋತ್ಸಾಹಿಸುವ ಹೇಮಾ ಮಾಲಾ ಅವರು .
ನಮ್ಮ ಹೆಮ್ಮೆಯ ಕನ್ನಡ…ಸ್ಫೂರ್ತಿದಾಯಕ ಲೇಖನ.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ