ಹಚ್ಚೋಣ ಹಣತೆ
ಹಚ್ಚೋಣ ಹಣತೆ ಪ್ರೀತಿ ತೈಲವ ಎರೆದು
ಬೆಳಗೊಣ ಬದುಕ ಬೆಳೆದ ಹತ್ತಿ ವಸೆದು
ಹೃದಯ ಸಂಗಮಕೆ ಹಬ್ಬಗಳ ಹಾವಳಿ
ಆಚರಿಸೋಣ ಬನ್ನಿ ಒಲವಿನ ದೀಪಾವಳಿ
.
ಪಟ್ ಪಟ್ ಪಟಾಕಿ ಸುಟ್ಟು ಸಿಡಿಸದೆ
ಪಟ್ ಪಟ್ ಪಟಾಕಿ ಸುಟ್ಟು ಸಿಡಿಸದೆ
ಚೆಂದದ ಪರಿಸರ ಶೋಕಿಗೆ ಕೆಡಿಸದೆ
ಹಟ್ಟಿಲಕ್ಕವ್ವನ ಹೂಗಿಡದಲಿ ಶೃಂಗರಿಸಿ
ಸಾಲುದೀಪದಿ ಮನೆ ಮನಗಳ ಬೆಳಗಿ
ಆಚರಿಸೋಣ ಬನ್ನಿ ಒಲವಿನ ದೀಪಾವಳಿ
.
ಹಿರಿಯರ ಪೂಜಿಸಿ ಭಕ್ತಿಯಲಿ ನೆನೆಯೋಣ
ಹಿರಿಯರ ಪೂಜಿಸಿ ಭಕ್ತಿಯಲಿ ನೆನೆಯೋಣ
ಸಂಸ್ಕೃತಿಗಳನು ಮುನ್ನೆಡೆಸಿ ಉಳಿಸೋಣ
ಜ್ಞಾನಕ್ಕೆ ಸುಜ್ಞಾನದ ಬೆಳಕನ್ನು ಬೆಳಗೋಣ
ಕತ್ತಲೆಯ ಜಗಕೆ ಜ್ಯೋತಿಯೇ ಆಗೋಣ
ಆಚರಿಸೋಣ ಬನ್ನಿ ಒಲವಿನ ದೀಪಾವಳಿ
.
ಬದುಕೆಂಬುದು ಬಹುಸುಂದರ ಪಯಣ
ಬದುಕೆಂಬುದು ಬಹುಸುಂದರ ಪಯಣ
ಅನುಭವವ ಪಡೆದೆಲ್ಲಾರು ನಡೆಯೋಣ
ಕಷ್ಟ ಕಾರ್ಪಣ್ಯಗಳನೆಲ್ಲಾ ಮೆಟ್ಟಿ ನಿಲ್ಲೋಣ
ಸುಖದಿ ನೂರ್ಕಾಲ ಒಟ್ಟಾಗಿ ಬದುಕೋಣ
ಆಚರಿಸೋಣ ಬನ್ನಿ ಒಲವಿನ ದೀಪಾವಳಿ
.
-ಶಿವಾನಂದ್ ಕರೂರ್ ಮಠ್ , ದಾವಣಗೆರೆ.
ಅರ್ಥಪೂರ್ಣ ಕವಿತೆ ಸರ್
ತುಂಬ ಸ್ಫೂರ್ತಿ ಸಿಗಲಿದೆ ಈ ಕವಿತೆಯಲಿ
Superb sir it’s very nice sir
ಬದುಕೆಂಬುದು ಸುಂದರ ಪಯಣ,
ನಗು ನಗುತ್ತಾ ಎಲ್ಲರ ಜೊತೆ ಅದನ್ನು ಕಳೆಯೋಣ ,
ಚೆನ್ನಾಗಿದೆ ಸರ್ ಕವನದ ಸಾರ
ದೀಪಾವಳಿ ಆಚರಣೆಗೆ ಸೊಗಸಾದ ಕವನ.