ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ
ಸಂಭ್ರಮದಿಂದ ಆಚರಿಸುವ ಹಬ್ಬ ದೀಪಾವಳಿ. ಎಷ್ಟೋ ತಲೆಮಾರಿಂದಲೂ ಆಚರಣೆಯಲ್ಲಿರುವ ಹಬ್ಬವನ್ನು ನಾವು ಸಂತೋಷದಿಂದ ಆಚರಣೆ ಮಾಡಬೇಕಲ್ಲವೇ? ಅವರವರ ಶಕ್ತಿಗನುಸಾರವಾಗಿ ಆಚರಿಸಿದರೆ ಅದರಲ್ಲಿ ಲೋಪದೋಷಗಳಿಲ್ಲ. ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲೂ ಆಗದು ಬಿಡಲೂ ಆಗದು ಎಂಬಂತಹ ಪರಿಸ್ಥಿತಿಯಲ್ಲಿ ತೊಳಲುವಂತಾಗುತ್ತದೆ. ದೀಪಗಳ ಹಬ್ಬವಾದ ದೀಪಾವಳಿಯು .ಹಿಂದೂಗಳಿಗೆ ಒಂದು ಮುಖ್ಯವಾದ ಹಬ್ಬ.ಹಬ್ಬದಪೂಜೆ ಕಿವಿಗಡಚುವ ಪಟಾಕಿ ಶಬ್ಧ. ಕಿರಿಯರಿಗೆಲ್ಲ ಸಂತಸದ ವಾತಾವರಣ. ಹಬ್ಬದಸಂದರ್ಭದಲ್ಲಿ ಅಂಗಡಿ ಮಾರುಕಟ್ಟೆಗಳು ಜನರಿಂದಕೂಡಿ ಗಿಜುಗುಟ್ಟುತ್ತವೆ. ಆದರೆ ಎಲ್ಲರಿಗೂ ಹಬ್ಬ ಆಚರಿಸಲು ಸಾಧ್ಯವೇ?ಎಂಬುದು .ನನ್ನ ಪ್ರಶ್ನೆ .,ಆಗೊಲ್ಲ ಅಲ್ಲವೇ?,
ಹಬ್ಬ ಬರುವ ಮೊದಲೆ ಹಬ್ಬಕ್ಕಾಗಿ ಹಣ ರೂಡಿ ಮಾಡಿಡುವವರು ,ಇನ್ನುಕೆಲವರುಹಣವಿದ್ದೂ ಸಮಯದ ಅಭಾವದಿಂದ ಹಬ್ಬವನ್ನು ಆಚರಿಸಲಾರರು. ಪತಿಪತ್ನಿ ಇಬ್ಬರೂ ಉದ್ಯೋಗಸ್ಥರಾಗಿದ್ದರೆಅವರಿಗೆ ಬಿಡುವೆಲ್ಲಿ. ಮಕ್ಕಳ ಬೇಡಿಕೆಗಳು ಹಲವಾರು. ಅದನ್ನೆಲ್ಲಾ ನಮ್ಮ ಆದಾಯಕ್ಕೆ ತಕ್ಕಂತೆ ಸರಿ ದೂಗಿಸಿಕೊಂಡು ಹೋಗಬೇಕು .ಮನೆಯ ಯಜಮಾನ ,ಹೊಸ ಬಟ್ಟೆ .ಮನೆಗೆ ಸುತ್ತಲೂಹಚ್ಚಲು ಹಣತೆ ..ಇದೆಲ್ಲವನ್ನು ಜೋಡಿಸಬೇಕು. ರುಚಿಯಾದ ಸಿಹಿ ತಿಂಡಿ ಮಾಡಿ ತಿನ್ನಬೇಕು,ಇದಕ್ಕೆಲ್ಲಾ ಪೂರ್ವ ತಯಾರಿ ಮಾಡಬೇಕು ಅಲ್ಲವೇ? ಪೂರ್ವತಯಾರಿ ಮಾಡದೆ ಇದ್ದಲ್ಲಿ ಮನೆಯಾಕೆಯು ಸಮಯಕ್ಕೆ ಸರಿಯಾಗಿ ಪೂಜೆ .ಅಡುಗೆ ಮುಗಿಸಲು .ಹರಸಾಹಸ ಪಡಬೇಕಾಗುತ್ತದೆ. ಇದರಿಂದ ಅವಳ ಮನಸ್ಸು ಕೆಡುವುದಲ್ಲದೆ ಮನೆಯವರಲ್ಲರ ಮನಸ್ಸು ಮುದುಡುವುದು.ಇದಕ್ಕಾಗಿ ಕೆಲವು ಸಲಹೆಗಳು:
ನಮ್ಮ ಹಿರಿಯರು ಹಬ್ಬವೆಂದರೆಪೂಜೆ .ಹೊಸಬಟ್ಟೆ .ಸಿಹಿ ಊಟಮಾಡುವರು. ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸಿ ಮಕ್ಕಳು ಸಂಭ್ರಮಿಸುವರು. ಹೀಗೆಲ್ಲ ಶಾಪಿಂಗ್ಗೆ ಮಹತ್ವ ಬಂದಿದೆ .ಶಾಪಿಂಗೆ ಹೋಗುವ ಮೊದಲು ಪಟ್ಟಿ ಮಾಡಿಕೊಳ್ಳಬೇಕು. ನಮ್ಮ ಅವಶ್ಯಕತೆಗೆ ತಕ್ಕಂತೆ ಖರೀದಿ ಮಾಡಬೇಕು. ನಮ್ಮ ನರೆಹೊರೆಯವರು ಕೊಂಡಿರುವರು ಎಂದು ನಾವು ಕೊಳ್ಳಬಾರದು .ಅನಾವಶ್ಯಕ ಕೊಳ್ಳುವುದರಿಂದ ದುಂದುವೆಚ್ಚ ಹಾಗೂ ಕೊಂಡ ವಸ್ತುವೂ ವ್ಯರ್ಥ ಎಂಬಂತಾಗುತ್ತದೆ.
ಉಡುಪುಗಳನ್ನು ಕೊಳ್ಳುವಾಗಲು .ಜಾಗರೂಕತೆಯಿಂದ ಕೊಳ್ಳಬೇಕು. ದುಬಾರಿಗೆ ಕೊಳ್ಳಲು ಹೋದರೆ ಕಷ್ಟ ,ಹಾಸಿಗೆ ಇದ್ದಷ್ಟೆ ಕಾಲು ಚಾಚಬೇಕಲ್ಲವೇ? ಈಗ ಮಾರುಕಟ್ಟೆಯಲ್ಲಿ ಕೈಗೆಟಕುವ ಬೆಲೆಯಲ್ಲಿ ಬಟ್ಟೆಗಳು ಸಿಗುತ್ತವೆ. .ಅದು ಎಲ್ಲಾವರ್ಗದ ಜನರ ಬಜೆಟ್ ಗೂ ಹೊಂದಿಕೆ ಆಗುತ್ತದೆ. ದೀಪಾವಳಿ ಬಂತೆಂದರೆ ಮನೆಯನ್ನು .ಸಿಂಗರಿಸಿಲು .ಬಲು ಹಿಗ್ಗು .ನಮ್ಮ ರಚಾನಾತ್ಮಕ ಕಲಾ ಕೌಶಲ್ಯದಿಂದ ಪ್ರತಿ ಹಬ್ಬವು ಸದಾ ನೆನಪಲ್ಲಿ ಉಳಿಯುವಂತೆ ಮಾಡಬೇಕು.
ಹಬ್ಬದ ಸಮಯದಲ್ಲಿ ಉಡುಗೊರೆ ಕೊಡುವುದು ಈಗಿನಔಪಚಾರಿಕ ಪದ್ಧತಿಯಾಗಿ ಬೆಳೆಯುತ್ತಿದೆ. ಹಿಂದೆಲ್ಲ ಹೊಸದಾಗಿ ಮದುವೆ ಆದ ಅಳಿಯ ಮಗಳಿಗೆ ಉಡುಗೊರೆ ಕೊಡುವ ಪದ್ಧತಿ ಇತ್ತು. ಇಂದು ಸ್ನೇಹಿತರು ಬಂಧುಗಳು, ಆಫೀಸ್ ಸಿಬ್ಬಂಧಿಗಳು ..ಹೀಗೆ ಪರಿಧಿ ವಿಸ್ತಾರವಾಗಿದೆ. ಎಷ್ಟೊ ಸಲ ನಾವು ಕೊಡುವ ಹೆಚ್ಚು ಬೆಲೆಬಾಳುವ ಉಡುಗೊರೆ ಆ ವ್ಯಕ್ತಿಗೆ ಉಪಯೋಗವಾಗಲಾರದು. ಎಂದು ಗೊತ್ತಿದ್ದರೂ, ಅಂಗಡಿಯಿಂದ ಅಂಗಡಿಗೆ ಸುತ್ತಿ ನಮ್ಮ ಸಮಯ ಹಾಳು ಮಾಡುವೆವು. ಅವರಿಗೆ ಆ ಉಡುಗೊರೆ ಇಷ್ಟವಾಗದಿದ್ದರೆ ಅದನ್ನು ಬೇರೆಯವರಿಗೆ ಕೊಡುವ ಸಾಧ್ಯತೆಯಿದೆ. ದೀಪಾವಳಿಗಾಗಿ ಉಡುಗೊರೆ ಕೊಡುವುದು ಕೇವಲ ಒಂದು ಶಿಷ್ಟಾಚಾರದ ಸಂಪ್ರದಾಯವಾಗಿ ಉಳಿಯುವ ಬದಲು, ನೀವು ಯಾರಿಗೆ ಉಡುಗೊರೆ ಕೊಡಬೇಕೆಂದಿರುವಿರೋ, ನಿಮ್ಮ ಹಾಗೂ ಅವರ ನಡುವಿನ ಬಾಂಧವ್ಯವನ್ನು ಸದಾಹಸಿರಾಗಿ ಉಳಿಸುವಂತೆ ಯೋಚಿಸಿ.
-ಆಶಾ ನೂಜಿ
ತುಂಬ ಚೆನ್ನಾಗಿ ಬರೆದಿದ್ದೀರಿ ಮೇಡಂ
ಲೇಖನ ಚನ್ನಾಗಿ ಮೂಡಿದೆ…
ನಿಮ್ಮೆಲ್ಲರ ಪ್ರೋತ್ಸಾಕ್ಕೆ ನಾನು ಚಿರರೃಣಿ
ನೈಸ್ . ಹಬ್ಬ ಎಂದೊಡನೆ ಬರಿ ಸಡಗರ , ಸಂಭ್ರಮವಷ್ಟೇ ನೆನಪಿಗೆ ಬರೋದು . ಆದರೆ ಈ ಬರಹದಲ್ಲಿ ವಾಸ್ತವ ಸಂಗತಿಗಳ ಮೇಲೆ ಬೆಳಕು ಚೆಲ್ಲಲಾಗಿದೆ.ಜೊತೆಗೆ ಹಬ್ಬದ ತಯಾರಿ ಹೇಗಿರಬೇಕೆಂಬ ಮಾಹಿತಿ, ಕಿವಿ ಮಾತು , ವೆರಿ ನೀವೇ ಮೇಡಂ .
ಸುಂದರ ನಿರೂಪಣೆ, ಸೊಗಸಾಗಿದೆ
ದೀಪಾವಳಿಯ ಆಚರಣೆ ಬಗೆಗಿನ ಲೇಖನ ಚೆನ್ನಾಗಿದೆ.