ದೀಪಾವಳಿ
‘
ದೀಪಾವಳಿಯು ಹತ್ತಿರ ಬಂದಿತು
ಸಡಗರವನ್ನು ಮೆಲ್ಲನೆ ತಂದಿತು
ಸಂತಸದಿಂದ ಜನರೆಲ್ಲಾ
ದೀಪ ಹಚ್ಚಿದರು ದಿನವೆಲ್ಲ
ಹಬ್ಬದ ಅಡುಗೆಯ ಮಾಡಿದರು
ಪೂಜೆಯೊಂದಿಗೆ ನಮಿಸಿದರು
ಎಲ್ಲರೊಂದಿಗೆ ಸಿಹಿತಿಂದು
ಪಟಾಕಿ ಹೊಡೆದರು ಹರುಷದಲಿ
ಹೊಸ ಹೊಸ ಬಟ್ಟೆ ಧರಿಸಿದರು
ತರತರ ದೀಪವ ಹಚ್ಚಿದರು
ದಿನವಿಡಿ ದೀಪದ ಬೆಳಕಿನಲಿ
ಹರುಷವು ತುಂಬಿತು ಮನದಲ್ಲಿ
ವಿಧ ವಿಧ ರಂಗೋಲಿ ಅಂಗಳದಲ್ಲಿ
ಬಣ್ಣದ ಹಣತೆಯು ಎಡಬಲದಲ್ಲಿ
ಆಕಾಶ ಬುಟ್ಟಿಯ ಬಾಗಿಲದಲ್ಲಿ
ಸಂಭ್ರಮ ಸಡಗರ ಎಲ್ಲೆಡೆಯಲ್ಲಿ
-ಮಧುಮತಿ ರಮೇಶ್ ಪಾಟೀಲ್
ಬರುವ ದೀಪಾವಳಿಗೆ ಕವನದ ಸ್ವಾಗತ..ಚೆನ್ನಾಗಿದೆ.
ಸಂಭ್ರಮದ ದೀಪಾವಳಿ ,
ಮನೆ , ಮನಗಳ ಬೆಳಗಲಿ . nice madam
ತುಂಬ ಚೆನ್ನಾಗಿದೆ ಕವಿತೆ ಮೇಡಂ
Beautiful madam
ಧನ್ಯವಾದಗಳು ಸರ್
ಧನ್ಯವಾದಗಳು ಸರ್.