ಕರುನಾಡ ಮನೆಮನದ ಹಬ್ಬ
ವಿಜಯನಗರ ಅರಸರ ಕಾಲದ ನವಮಿ ದಿಬ್ಬವು
ಮೈಸೂರ ರಾಜ ಒಡೆಯರ್ ಕಾಲದಿ ದಸರವು
ಆಶ್ವಯುಜ ಮಾಸದಿ ದಶದಿನಗಳಲ್ಲಿ ಸಂಭ್ರಮವು
ಕರುನಾಡ ಮನೆ ಮನಗಳಂಗಳದಿ ಸಡಗರವು.
ಕನ್ನಡ ನಾಡಿನ ಕುಲದೇವತೆ ಚಾಮುಂಡೇಶ್ವರಿ
ಅಟ್ಟಹಾಸದಿ ಮೆರೆದ ಮಹಿಷಾಸುರನ ಸಂಹಾರಿ
ಕಪ್ಪು ಮಣ್ಣಿನ ಜನರ ಭಕ್ತಿಗೆ ಒಲಿದ ಮಹಾಮಾಯಿ
ಕನ್ನಡಿಗರ ಅನಾವರತ ಪೊರೆಯುವ ಕರುಣಾಮಯಿ.
ವಿಜಯ ದಶಮಿಯ ವೈಭವವ ಸವಿಯುವ ಕಾತುರ
ವಿಶ್ವದ ಮೂಲೆ ಮೂಲೆಯಿಂದ ಬರುವ ಜನಸಾಗರ
ಕಣ್ಮನಗಳ ಮೂಕ ವಿಸ್ಮಿತಗೊಳಿಸುವ ಸ್ತಬ್ಧ ಚಿತ್ರಗಳು
ಹೃನ್ಮನಗಳ ತಣಿಸುವ ಜನಪದ ಕಲಾ ತಂಡಗಳು.
ಬನ್ನಿ ಬನ್ನಿ ಮಂಟಪದ ಮುಂದೆ ನಾವೆಲ್ಲರೂ ಸೇರುವ
ಚಿನ್ನದ ಅಂಬಾರಿಯಲ್ಲಿಯ ಚಾಮುಂಡಿಯ ನೋಡುವ
ಜಂಬೂ ಸವಾರಿಯ ಗತ್ತಿನ ಗಮ್ಮತ್ತುನು ಸವಿಯುವ
ಜನರ ಬದುಕು ಹಸನಾಗಲೆಂದು ತಾಯಿಯ ಬೇಡುವ.
-ಶಿವಮೂರ್ತಿ.ಹೆಚ್, ದಾವಣಗೆರೆ
Nice sir. ಇಡೀ ದಸರದ ಚಿತ್ರಣವಿದೆ ನಿಮ್ಮ ಕವನದಲ್ಲಿ
ನಿಮ್ಮ ಸಹೃದಯ ಪ್ರೋತ್ಸಾಹಕ್ಕೆ ಧನ್ಯವಾದಗಳು.
ಮೈಸೂರು ದಸರಾ.. ವರ್ಣನೆ ಚೆನ್ನಾಗಿದೆ.. ಧನ್ಯವಾದಗಳು.
ನಿಮ್ಮ ಸಹೃದಯ ಪ್ರೋತ್ಸಾಹಕ್ಕೆ ಅನಂತ ಧನ್ಯವಾದಗಳು
ನಮ್ಮಂತಹ ಎಲೆಮರೆಯ ಕವಿಗಳನ್ನು ಗುರುತಿಸಿ ಪ್ರೋತ್ಸಾಹಿಸಿ, ಹುರಿದುಂಬಿಸುತ್ತಿರುವ ಸುರಹೊನ್ನೆ ಪತ್ರಿಕೆಯ ಸಂಪಾದಕರಿಗೆ ಹೃನ್ಮನದ ಕೃತಜ್ಞತೆಗಳು