‘ಸತ್ಯ ಮತ್ತು ಅಗತ್ಯ..?!’
.
ಗಾಂಧೀ ಎಂದರೆ ಮುಗಿಯದ
ಅಂತರ್ಗತ ಯುದ್ಧ ; ನನಗೆ ನನ್ನೊಡನೆ
ನಿಮಗೆ ನಿಮ್ಮೊಡನೆ. ಅಲ್ಲಿಯ ಗೆಲವು
-ಸೋಲು ಗಾಂಧಿಗೆ ಮುಖ್ಯವಾಗುವುದು.
ನಮಗಲ್ಲ.
.
ಪ್ರತೀ ದಿನ ಎದುರಾಗುತ್ತೀವಿ, ಮುಖಾ
-ಮುಖಿಯಾಗುತ್ತೀವಿ, ಮೀಸಲು
ಮುರಿಯುತ್ತೀವಿ ನಾವು. ಆತ ಅಚಲ.
ನಾವು ಚಂಚಲರೇ…
,
ಗಾಂಧೀ ಎಂದರೆ ಮುಗಿಯದ
ಅಂತರ್ಗತ ಯುದ್ಧ ; ನನಗೆ ನನ್ನೊಡನೆ
ನಿಮಗೆ ನಿಮ್ಮೊಡನೆ. ಅಲ್ಲಿಯ ಗೆಲವು
-ಸೋಲು ಗಾಂಧಿಗೆ ಮುಖ್ಯವಾಗುವುದು.
ನಮಗಲ್ಲ.
.
ಪ್ರತೀ ದಿನ ಎದುರಾಗುತ್ತೀವಿ, ಮುಖಾ
-ಮುಖಿಯಾಗುತ್ತೀವಿ, ಮೀಸಲು
ಮುರಿಯುತ್ತೀವಿ ನಾವು. ಆತ ಅಚಲ.
ನಾವು ಚಂಚಲರೇ…
,
ಮಗುವ ಹಾಗೆ, ಮರದ ಹಾಗೆ, ಹೂ-ಹಸಿರು
ಕಾನನ, ಮರಳು-ಬಂಡೆ , ನೆರಳು-
ಬಿಸಿಲ ಹಾಗೆ, ಹಗೆಗೆ ಹೇಗೂ ತಾವುಕೊಡದ,
ಕಿವಿಗೊಡದ, ಗೊಡವೆಗಳಿಗೆ ಎಡೆಗೊಡದ
ಗಾಂಧಿಯ ಹಾಗೆ ಆಗುವುದೇ ನಮಗೆ..?
ಹಾಗೆ ಆಗಲಾವುದೇ..?!
ಇದೊಂದು ನೆಪವಷ್ಟೇ, ಗಾಂಧಿಯೆಂಬ
ನೆರಳ ಮರೆಯಲ್ಲಿ ದಣಿವಾರಿಸಿಕೊಳಲು,
ನಾಟಕಕೆ ಮುಖವಾಡ ಧರಿಸಲು, ಕಲೆ
ಕಾಣದಂತೆ ಬಣ್ಣ ಮೆತ್ತಿಕೊಳಲು..
ನಮಗಿದು ಭಜನೆ ಜಪದ ನೆನಪು.
ಗಾಂಧಿಯ ಬಗ್ಗೆ ತಿಳಿಯದೆಯೂ ನಾವು
ನೆಮ್ಮದಿಯಿಂದಿರುತ್ತಿದ್ದೆವು ಎನ್ನುವುದೇ
ನೆಮ್ಮದಿಯಿಂದಿರುತ್ತಿದ್ದೆವು ಎನ್ನುವುದೇ
ಇಂದಿನ ಅಂತಿಮ ಸತ್ಯ .., ಮತ್ತೂ
ಹಲವರಿಗೆ ಅತೀ ಜರೂರತ್ತಿನ ಅಗತ್ಯ..
,
– ವಸುಂಧರಾ ಕೆ ಎಂ., ಬೆಂಗಳೂರು..
,
,
ಚಂಚಲ ಮನದ ನಮಗೆ ಗಾಂದೀಜಿ ಇವತ್ತಿಗೂ ಪ್ರಸ್ತುತವಾಗುವುದು ಅವರ ಅಚಲತೆಗೆಯೇ.ಎಲ್ಲವನ್ನು ತನ್ನೊಳಗೆ ತುಂಬಿಕೊಂಡು. ತಾನೇನೂ ಅಲ್ಲ ಎಂಬ ಮಗುವಿನಂತ ಮನಸಿನ ಬಾಪೂಜಿಯವರ ಕುರಿತು ಚೆಂದದ ಕವಿತೆ ಹೆಣೆದಿರುವಿರಿ ವಸುಂಧರ. ಗಾಂಧೀ ತತ್ವ ನಮ್ಮೊಳಗೂ ಇಳಿಯಲಿ
Beautiful. ಗಾಂಧಿಯ ಬಗ್ಗೆ ತಿಳಿಯದಿದ್ದರೂ ನಾವು ನೆಮ್ಮದಿಯಾಗಿರುತಿದ್ದೆವು-ಈ ಸಾಲುಗಳು ಇಷ್ಟವಾಯಿತು