ಚಹ
ಚಹ ಎನ್ನುವುದು ಬರೀ ಒಂದು
ಹೆಸರಂತು ಅಲ್ಲವೇ ಅಲ್ಲ
ಏನೋ ಒಂದು ಆತ್ಮೀಯತೆಯ ಪ್ರತೀಕ
ಮನಸ್ಸಿನ ಪ್ರಫುಲ್ಲತೆಯ ಸಂಕೇತ
.
ಮನೆಗೆ ಬಂದ ನೆಂಟರಿಷ್ಟರಿಗೆ
ಮನೆಗೆ ಬಂದ ನೆಂಟರಿಷ್ಟರಿಗೆ
ಈ ಚಹ ಒಂದೇ ಮನದ
ಬೀಗ ತೆಗೆಯಲು ಇರುವ ಕೀಲಿ ಕೈ
.
ಒಗರು ಈ ಚಹದ ಪುಡಿ
ಒಗರು ಈ ಚಹದ ಪುಡಿ
ತನ್ನ ಒಗರೆಲ್ಲ ಕುದಿಸಿ
ಸಿಹಿಯಾದ ಸಕ್ಕರೆ ಜೊತೆ ಬೆರೆತು
ಹದವಾದ ರುಚಿ ಹೊಂದಿ
ಸಂಬಂಧಗಳ ಮಾದಕತೆ ತೋರುವ
ಚೆಲುವು ಬಣ್ಣದ ಬೆರಗು ಈ ಚಹಾಕ್ಕೆ
.
ಹಗೆತನವಿದ್ದವರು ಎದಿರು- ಬದಿರ
ಹಗೆತನವಿದ್ದವರು ಎದಿರು- ಬದಿರ
ಕುಳಿತು ಈ ಚಹವ ಹೀರುತ್ತಿದ್ದರೆ
ಹಬೆಯಲ್ಲೇ ಹಗೆಯು ಆವಿಯಾಗಿ
ಬಿಸಿಯಾದ ಚಹ ಗಂಟಲೊಳಗಿಂದ
ಹೊಕ್ಕಳ ಸೇರಿತೆಂದರೆ, ಎಲ್ಲರೂ
ತನ್ನ ಹೊಕ್ಕಳ ಸಂಬಂಧಿಗಳೇ
ಆಗಿಬಿಡುವರು ಈ ಚಹದ ಮೋಡಿಗೆ
.
-ಬೀನಾ ಶಿವಪ್ರಸಾದ
.
ಚಹಾದಷ್ಟೇ ಚೆಂದದ ಘಮಲು ನಿಮ್ಮ ಈ ಕವನ
Thank you mam…
ಮಳೆ ಬರುವಾಗ ಬಿಸಿ ಬಿಸಿ ಚಹಾ ಹೀರುವುದೂ ಮಜಾವಾಗಿರುತ್ತೆ . ಹಂತ ಹಂತವಾಗಿ ಟೀ ಮಾಡೋದನ್ನು ಕಲಿಸಿ ಕೊಟ್ರಿ ಅಲ್ರಿ. ಚೆನ್ನಾಗಿದೆ .
ಚಹ ಪ್ರಿಯರಿಗಾಗಿ ಚಂದದ ಕವನ.