ಪ್ರಿಯದರ್ಶಿನಿ

Share Button

ಸಾಗಬೇಕೆಂದರೂ ನಿನ್ನ ಸ್ನೇಹಕ್ಕೆ ಮುಖ ತಿರುವಿ ,
ಬಿಡದೆ ಸೆಳೆಯುವೆಯಲ್ಲ  ಮಾಯಾವಿ?,
ನೀ ತೋರಿದ ಸ್ನೇಹದ ಸವಿ ,
ಮಾಡಿಹುದಿಂದು ಈ ಹೃದಯವ ಕವಿ .

ಬೀಸಿ ಸುಂದರ ನಗುವಿನ ಮಾಯಾಜಾಲ,
ಏಕೆ ಸೆಳೆದೆ ನೀ ಹೀಗೆ ಮೆಲ್ಲ ?,
ಕಣ್ಗಳೊ ಪ್ರೀತಿಯಿಂದಾವೃತ ಕೊಳ ,
ಬಂಧಿಸಿಹುದು ಅರಿವಾಗುವ ಮುನ್ನವೇ ತೊಡಿಸಿ ಕಾಣದ ಕೋಳ.

ಹೂ ಮನದ ಸಹೃದಯ ಗೆಳತಿ ,
ಬಲು ಇಷ್ಟ ನಿನ್ನ ಜೀವನ ಪ್ರೀತಿ ,
ಬದುಕು ಹೋರಾಟವೆಂಬಂತೆ  ನೀ ಸಾಗೋ ರೀತಿ ,
ತುಂಬುವುದು ನನ್ನಲ್ಲೂ ಛಲ ಹೊಡೆದೋಡಿಸಿ ಮನದಾಳದ ಭೀತಿ.

ಅರೆ ಬಿರಿದ ತುಟಿಗಳ ನಡುವೆ ಅರಳಿರೋ ನಗು , ತಂಗಾಳಿ ,
ನೂರಾರು ಭಾವ ಅವಿತಿರೋ ಅನುಭವ ಕಣ್ಣಲ್ಲಿ,
ಹಿಡಿದಿಡಲಿ ನಿನ್ನ ನಾ ಇನ್ನಾವ ಪದಗಳಲ್ಲಿ ?,
ಬಿಡಿಸಿರುವೆ ಈ ಹೃದಯದ ತುಂಬಾ ಬಣ್ಣದ ರಂಗೋಲಿ ,
ಕಾಣದ ಒಲವೆಂಬ ಕೈಗಳಲ್ಲಿ.

– ನಯನ ಬಜಕೂಡ್ಲು

6 Responses

  1. Krishnaprabha says:

    ಸರಳ, ಸುಂದರ ಕವಿತೆ

  2. Hema says:

    ಪ್ರೀತಿ ತುಂಬಿದ ಚೆಂದದ ಕವನ

  3. Shankari Sharma says:

    ಭಾವನಾತ್ಮಕ ಸುಂದರ ಕವನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: