ನೀರು..ನೀರು..ನೀರು..

Share Button

 

ನೀರು ನೀರು ನೀರ ಜೊತೆ
ಸಂಬಂಧ ಅವಿನಾಭಾವ
ಹಾಹಾಕಾರ ನೀರಿಗೆ
ಎಲ್ಲೆಲ್ಲೂ ನೀರ ಅಭಾವ,,
.
ನಗರಗಳಲಿ ಕಾವೇರಿದಾಗ
ಕಾವೇರಿ, ಜಲಮಂಡಳಿಯ ಸಿಹಿನೀರು,
ತೊಳೆಯಲು ಕೊಳವೆ
ಬಾವಿಯ ಉಪ್ಪು ನೀರು,,
.
ಬಯಲ ನಾಡಲ್ಲಿ
ನದೀಪಾತ್ರದ, ಗುಂಡಿಗೆ
ಅದುರುವಂತೆ ಗುಂಡಿ
ತೋಡಿದರೂ ಬರದ ನೀರು,,
.
ಬಾಯಾರಿ ಬಂದವರಿಗೆ
ಬೆಲ್ಲದ ಜೊತೆ ನೀಡಲು ನೀರಿಲ್ಲ
ಬರಿದೇ ಬಾಯಿ ಮಾತಿನ
ಹಲ್ಲು ತೋರುವ ಕಾರುಬಾರೆಲ್ಲ,,
.
ಬಗೆಬಗೆದು ತೆಗೆಯೆ ಅಂತರ್ಜಲ,
ಜಲವನೂಡಿಸುವ ಭೂಮಿಯೇ ಬತ್ತಿರುವಳು
ಭೂಮಿ ತಾಯಿಯೇ ಬಾಯಾರಿರಲು
ಕೊಡುವರಾರು ನೀರೆಮಗೆ?
.
ಗಂಗೆ,ತುಂಗೆ,ಕಾವೇರಿಯರು
ವರುಣನಿರದೇ ಒಂಟಿಬಾಳು
ತುಂಗಭದ್ರೆ,ಕೃಷ್ಣೆ ಗೋದಾವರಿಯರೂ
ಜಂಟಿಯಾದರೂ ಒಳಹರಿವಿಲ್ಲ,,
.
ಮೃಗ ಪಕ್ಷಿಗಳ ಗೋಳು ಕೇಳೋರಿಲ್ಲ
ಬಾವಿಗಳಲಿ ನೀರಿಲ್ಲ,ನದೀಪಾತ್ರಗಳು
ಬತ್ತಿರಲು ದನಕರುಗಳು ಮೀಯುವುದಿರಲಿ
ಕೆರೆಗಳಲಿ ಕುಡಿಯಲೂ ನೀರಿಲ್ಲ ,,
.
ಬೆಳೆಗಳಿಗೂ ನೀರಿಲ್ಲ
ರೈತರೂ ಕೈ ಚೆಲ್ಲಿಹರಲ್ಲ
ಇಳೆಗೂ ನೀರಿಲ್ಲ , ಅವಳ
ಕೊಳೆಯನು ತೊಳೆಯಲು ನೀರಿಲ್ಲ ,,
.
ನೀರಿಲ್ಲದ ಬೇಗೆಯಲ್ಲಿ ಅಲ್ಲಲ್ಲಿ
ಒಂದೇ ಬೊಗಸೆ ನೀರಿಡಿ ಎಲ್ಲಾ
ಬಾಯಿಲ್ಲದ ಪ್ರಾಣಿಪಕ್ಷಿಗಳ
ಜೀವಕೆ ಅವರ ಹಕ್ಕಿನ ನೀರಿಡಬೇಕಲ್ಲ,,

-ಸುಮಿ

2 Responses

  1. Nayana Bajakudlu says:

    ಈಗಿನ ಪರಿಸ್ಥಿತಿಗೆ ಹೊಂದುವಂತಿದೆ ಕವನ .
    ಓ ಮಳೆಯೇ ಮುನಿಸಿಕೊಳ್ಳದಿರು
    ನೀನಿಲ್ಲದಿರೆ ಧರೆಯೆ ಬಂಜರು .

  2. Shankari Sharma says:

    ಬರದ ಭೀಕರತೆಯು ಮನ ಮುಟ್ಟುವಂತಿದೆ..ಕವನ.

Leave a Reply to Shankari Sharma Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: