ನವಸಂವತ್ಸರದ ಹಾದಿಯಲ್ಲಿ..
.
ಹೊಸ ಸಂವತ್ಸರದ ಆದಿಯಾಗಿದೆ
ಹೊಸ ಮಾಸವು ಉದಿಸಿದೆ
ಪ್ರಕೃತಿಯು ಹಿಗ್ಗಲಿ ನಲಿದಿದೆ
ಮಲ್ಲಿಗೆ ಹೊಗಳು ಪನ್ನೀರ ಚೆಲ್ಲಿದೆ
ಕನಸುಗಳೇ ಏಳಿ ಸಾಕಿನ್ನು ನಿದಿರೆ …
.
ಹೊಸ ಹಸಿರ ತೋರಣ ಕಟ್ಟಿ
ಹೊಸ ಹಸಿರ ತೋರಣ ಕಟ್ಟಿ
ಹೊಸ ಸಂಕಲ್ಪಗಳ ಮಡಿ ಹಾಸಿ
ಬೇವು ಬೆಲ್ಲದ ಹೂರಣಕೆ ಹೆಸರಿಕ್ಕಿ
ಸುಂದರ ಸ್ವಪ್ನಗಳ ಬರಮಾಡಿಕೊಳಿ
ಆಶೆಗಳೇ ತೋರಿ ಸಾಧನೆಯ ಹಾದಿ …
.
ಹೊಸ ಹುಟ್ಟು ಪ್ರತಿ ದಿನವು
ಹೊಸ ಹುಟ್ಟು ಪ್ರತಿ ದಿನವು
ಹೊಸ ಧಿರಿಸೆಂಬ ಅನು ಕ್ಷಣವು
ತೆರೆದಿರಲಿ ಮನದ ಕದವು
ನಡೆಯುತಿರಲಿ ಆತ್ಮ ಅವಲೋಕನವು
ಚಿಂತನೆಗಳೇ ನೀವೆ ನಮ್ಮ ನಾವಿಕರು …
.
ಹೊಸ ಸಿಹಿಯುಂಡು ಮುದ ಹಂಚೋಣ
ಹೊಸ ಸಿಹಿಯುಂಡು ಮುದ ಹಂಚೋಣ
ಹೊಸ ಕಹಿಯೊಳಗೊಂಡು ಬೆಳೆಯೋಣ
ಕಳೆಯ ಕಿತ್ತು ಫಲವ ಪಡೆಯೋಣ
ಗುರಿಯು ತಪ್ಪದಿರಲು ಶ್ರಮಿಸೋಣ
ಬದುಕೇ ನೀನೆಷ್ಟು ಸುಂದರವೆನ್ನೋಣ ..
– ಭಾರತಿ
ಎಲ್ಲಿಯೂ ಜಡಗಟ್ಟಿ ನಿಲ್ಲದಿರಿ, ನಿರಂತರವಾಗಿ ಸಾಗಿ ಬದುಕಿ ಎಂದು ಪ್ರೋತ್ಸಾಹ , ಉತ್ಸಾಹ ತುಂಬುವ ಸಾಲುಗಳು .
ಸಮಯೋಚಿತ ಕವನ ಸೊಗಸಾಗಿದೆ.