.
ಮತ್ತೆ ಬಂದಿತು ಯುಗಾದಿ
ಹೊಸ ಸಂವತ್ಸರದ ಪ್ರಾರಂಭಕಿದು ನಾಂದಿ,
ಚೈತ್ರಮಾಸದ ಈ ಪ್ರಥಮ ಶುಭದಿನದಿ,
ಆಚರಿಸುವರು ಹಬ್ಬವನು
ಉಲ್ಲಾಸದಿ ಉತ್ಸಾಹದಿ..
.
ಹಸಿರು ಹೂವಿನ ಎಲೆಮಧ್ಯೆ ಬೇವಿನೆಲೆ ಗೊಂಚಲಿರಿಸಿ
ಹಸಿರು ಹೂವಿನ ಎಲೆಮಧ್ಯೆ ಬೇವಿನೆಲೆ ಗೊಂಚಲಿರಿಸಿ
ಕಟ್ಟುವರು ತಳಿರು ತೋರಣಾ.
ಎಲ್ಲರ ಮನೆಮುಂದೆ ಕಂಗೊಳಿಸುವದಂದು ಬಣ್ಣ ಬಣ್ಣದ ರಂಗೋಲಿಯ ಚಿತ್ರಣಾ..
.
ಬೆಳಿಗ್ಗೆ ಬೇಗನೆದ್ದು ಮಾಡುವರಂದು ಅಭ್ಯಂಜನ ಸ್ನಾನ,
ಬೆಳಿಗ್ಗೆ ಬೇಗನೆದ್ದು ಮಾಡುವರಂದು ಅಭ್ಯಂಜನ ಸ್ನಾನ,
ನಂತರ ಹೊಸ ವಸ್ತ್ರಧಾರಣ.
ಮಹಿಳೆಯರು ದೇವಿಗುಡಿಗೆ ತೆರಳಿ ಪಾದಗಟ್ಟೆಗೆ ನೀರೆರೆದು ಪಡೆಯುವರು ದರುಶನ,
ಕೋರುವರು ಮನೆಮಂದಿಯ ಒಳಿತನ್ನ…
.
ದೇವರ ಪೂಜೆಗೈದು ಅಂದು ಹಿರಿಯರು ಮಾಡುವರು ಪಂಚಾಂಗ ಪಠಣಾ,
ದೇವರ ಪೂಜೆಗೈದು ಅಂದು ಹಿರಿಯರು ಮಾಡುವರು ಪಂಚಾಂಗ ಪಠಣಾ,
ನಂತರ ಮನೆಮಂದಿಯಿಂದ ಅದರ ಶ್ರವಣಾ,
ಕಷ್ಟಸುಖಗಳೆರಡೂ ಜೀವನದ ಸಿಹಿಕಹಿ ಎಂದು ಅರಿತು ಸೇವಿಸುವರಂದು ಬೇವುಬೆಲ್ಲದ ಮಿಶ್ರಣಾ,
ಸವಿಯುವರು ನಂತರ ಹೋಳಿಗೆ ಪಾಯಸದ ಸಿಹಿ ಭೋಜನ..
.
ಯುಗಾದಿ- ದೇಶೀ ವರ್ಷಾಚರಣೆಯ ಹಬ್ಬವೆಂದು ನಮಗೆ ಅಭಿಮಾನ,
ಅಂದು ಎಲೆಗಳು ಚಿಗುರೊಡೆಯುವ ದಿನ.
ವಸಂತಕಾಲ ಆಗಮನದ ದಿನ,
ಸಂತಸ ಸಂಭ್ರಮ ಸಡಗರದ ದಿನ,
ಬೇಂದ್ರೆಯವರ ಯುಗಾದಿ ಕವಿತೆಯನ್ನು ನೆನೆಪಿಸಿಕೊಳ್ಳುವ ದಿನ,
ಈ ದಿನ- ಮೂಡಿಸುವದು ಎಲ್ಲರಲಿ ಅದಮ್ಯ ಚೇತನ…
.
ಅಂದು ಮಕ್ಕಳೊಂದಿಗೆ ತೆರಳಿ ಗುರುಹಿರಿಯರನು ಭೇಟಿಯಾಗೋಣಾ,
ಪಡೆಯೋಣಾ ಆಶೀರ್ವಾದ ಮುಟ್ಟಿ ಅವರ ಚರಣಾ.
.
ಹೊಸ ವರ್ಷದ ನಿರ್ಣಯ ಕೈಗೊಳ್ಳೋಣಾ,
ಅದರ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸೋಣಾ..
.
– ಮಾಲತೇಶ ಎಂ ಹುಬ್ಬಳ್ಳಿ
– ಮಾಲತೇಶ ಎಂ ಹುಬ್ಬಳ್ಳಿ
ಬ್ಯೂಟಿಫುಲ್. ಮನೆಯ ಆಪ್ತ ವಾತಾವರಣ ಇಲ್ಲಿ ಅನಾವರಣ ಗೊಂಡಿದೆ. ಹಬ್ಬದ ಸಂಭ್ರಮ , ಸಡಗರ, ಆಚರಣೆ ಎಲ್ಲವೂ ಸುಂದರವಾಗಿ ವರ್ಣಿಸಿದ್ದೀರಿ ಸರ್
ಹಬ್ಬದ ಹೋಳಿಗೆ ಸವಿದ ಅನುಭವದ ಸುಂದರ ಕವನ