ಯುಗಾದಿ ಹಾರೈಕೆ

Share Button

 

ಮಾವು ಚಿಗುರಿ
ಹಸಿರು ತೊನೆದು
ಮತ್ತೆ ಬಂತು ಯುಗಾದಿ,

ಹಸಿರು ಕೆಂಪು ನೀಲಿ ಬೂದು ಬಣ್ಣಗಳ ಹೊದೆದು ಸಾಲು ಹಾದಿ,
ಮನಸಿನ ಅಂಗಳದ ಅಭಿಸಾರಿಕೆಯ ಭಾವ ಭಂಗಿಗೆ ತೆರೆದು ಯಾದಿ,
.
ಚೈತ್ರನ ಸಂಭ್ರಮಕ್ಕೆ
ವಿಕಾರಿಯ ಆಗಮನ
ಲಗ್ಗೆಯಿಡುತ ಹಿಗ್ಗಲಿ,
.
ಬೇವು-ಬೆಲ್ಲ ಚಿವುಟುತ ಕನಸ ಕಣ್ಣು ತೆರೆಯುತ
ಭಾಷೆ ಬೆರಗ ಮೀರುತ
ಒಳಿತ ನಿಜದಿ ಹರಸುತ
ಬಂತಿದೋ ಯುಗಾದಿ!

– ರೂಪಶ್ರೀ ನಾಗರಾಜ್ ,  ಬೆಂಗಳೂರು.
.

3 Responses

  1. Nayana Bajakudlu says:

    ಸುಂದರ ಶುಭಾಶಯ.

  2. Ranganath Nadgir says:

    ಸುಂದರ ಹಾಗು ಸಕಾಲಿಕ ಕವನ .ಬೇವು ಬೆಲ್ಲಗಳ ಚಿತ್ರವು ಮನಕ್ಕೆ ಮುದ ನೀಡಿದವು . ಇದೆ ರೀತಿ ನಿಮ್ಮ ಸಾಹಿತ್ಯ ಸೇವೆ ಮುಂದುವರೆಯಲಿ. ಕವನ ಬರೆದ ನಿಮಗೂ ಹಾಗು ಪ್ರಕಟಣೆ
    ಮಾಡಿದ ಶ್ರೀಮತಿ ಹೇಮಾ ಅವರಿಗೂ ಯುಗಾದಿ ಶುಭಾಶಯಗಳೊಂದಿಗೆ ನಮನಗಳು.
    ಹುಬ್ಬಳ್ಳಿಯ ನಾಡಗೀರ ದಂಪತಿಗಳು .

  3. Shankari Sharma says:

    ಸುಂದರ ಕವನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: