ಯುಗಾದಿ ಸಂಭ್ರಮ

Share Button

ಮತ್ತೆ ಮತ್ತೆ ಮರಳಿ ಬರೋ ಯುಗಾದಿ,
ತರಲಿ ಶಾಂತಿ, ನೆಮ್ಮದಿ,
ಚಿಂತೆಗಳ ದೂರವಾಗಿಸಿ ಮೂಡಿಸಲಿ ಸಂತಸವ ಮನದಿ,
ಉಕ್ಕೇರಿ ಹರಿಯಲಿ ಬಾಳ ತುಂಬಾ ಬೆಲ್ಲದಂತೆ ಸಿಹಿಯಾದ ಕ್ಷಣಗಳು ಆಗಿ ಶರಧಿ .

ಎದುರಿಸಬೇಕು  ಯಾವಾಗಲೂ ,
ತಿಳಿದು ಬದುಕೆಂದರೆ ಸವಾಲು,
ಹಾರೈಸುವೆನು ಬರುವ ಪ್ರತಿಯೊಂದು ದಿನಗಳು,
ಹೊತ್ತು ತರಲಿ ಯಶಸ್ಸಿನ ಹೊನಲು .

ಬೇವಿನ ಕಹಿಯನ್ನು ದೂರವಾಗಿಸಿ,
ಹರಸಲಿ ಎಲ್ಲರ ಕಾಲ ಒಳ್ಳೆಯದಾಗಲೆಂದು ಹಾರೈಸಿ,
ನೊಂದ ಮನವ ಸಂತಸ ಓಲೈಸಿ,
ಹೇಳಲು ಶುಭಾಶಯ ಕಾದಿಹುದು ಈ ಹಬ್ಬ ಹರಸಿ .

ಸಿಹಿ ಕಹಿಯಿಂದಾವೃತ ಜೀವನ ,
ಎಂಬ ಸಂಕೇತವೇ ಬೇವು-ಬೆಲ್ಲದ ಮಿಶ್ರಣ ,
ನೋವು ಸಂಕಷ್ಟಗಳ  ಮರೆತು ನಲಿಯಲಿ  ಮನ,
ಹಬ್ಬಿದಂತೆ ಎಲ್ಲೆಡೆ ಚಂದನ.

ಮನೆ ಮನೆಗಳಲ್ಲೂ ಸಂಭ್ರಮ , ಸಡಗರ,
ಹೊಸ ವರುಷವ ಸ್ವಾಗತಿಸಲು  ತಯಾರಿ ಸಾವಿರ,
ದೀಪಗಳಂತೆ ಬೆಳಗೋ ಮನ ಮಂದಿರ,
ಹೃದಯಗಳ ಬೆಸೆಯೋ ಈ ಹಬ್ಬ ಅದೆಷ್ಟೊಂದು ಸುಂದರ .

ದೂರವಾಗಿ ಎಲ್ಲಾ ನೋವು,
ಸಿಹಿಯಾಗಲಿ ಬೆಲ್ಲದಂತೆ ಕಷ್ಟಗಳೆಂಬ ಬೇವು,
ಮೂಡಲಿ ಮನಗಳಲ್ಲಿ ಒಲವು ,
ಇಂದು ಮನದಲ್ಲಿ ಎಲ್ಲರಿಗಾಗಿಯೂ  ಮೂಡುತ್ತಿರೋ  ನಲ್ವರಕೆಗಳು ಹಲವು.

 –  ನಯನ ಬಜಕೂಡ್ಲು.

1 Response

  1. Shankari Sharma says:

    ಸಕಾಲಿಕ ಸುಂದರ ಕವನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: