ಗೆಳತಿಗೊಂದು ಸಾಂತ್ವನ

Share Button

ದೂರದಲ್ಲೊಂದು ಪ್ರೀತಿಯ ಊರಿದೆ
ಸಾಗೋಣ ಬಾ ಜೊತೆಯಾಗಿ ,
ಕಣ್ಣಂಚಲಿ ಅವಿತಿರೋ ವ್ಯಥೆಯಿದೆ
ಹಂಚಿಕೊಳ್ಳುವೆ ನಾ ನಿನ್ನ ಗೆಳತಿಯಾಗಿ “.

ತೋರ್ಪಡಿಸದಿರು ನಿನ್ನ ಅಸಹಾಯಕತೆ
ಈ ಜಗದ ಮುಂದೆ ,
ನೋಡೊಮ್ಮೆ ಮೆಲ್ಲ ಹಿಂತಿರುಗಿ
ನಾನಿರುವೆ ಸಾಂತ್ವನಿಸಲು
ನಿನ್ನ ಹಿಂದೆ .

ನಾನರಿತಂತೆ ನೀ ಪರೋಪಕಾರಿ ,
ಹೋಗದಿರು ಜೀವವೇ ಹೀಗೆ
ನೋವಿನೊಳಗೆ ಜಾರಿ.

ನಿಲ್ಲದಿರು ಗೆಳತೀ ,
ಸಾಗು ನೀ ಕಷ್ಟಗಳಿಗೆ ಎಸೆಯುತ್ತಾ ಸವಾಲು,
ಸೋಲಲೇ ಬೇಕು ನೋವು,
ನಿನ್ನ ಆತ್ಮವಿಶ್ವಾಸ ತುಂಬಿದ ನಗುವ ನೋಡಲು.

ಹೊಸೆಯಲೇ ನಿನ್ನ ಮನವ ತಿಳಿಯಾಗಿಸಲು
ನಾನೊಂದು ಕವಿತೆ ,
ಆ ಕವಿತೆಗೆ ನೀ ಭಾವವಾಗಲು
ನನ್ನೇ ನಾ ಮರೆತೇ.

ಬಿಡದಿರು ಸದ್ದಿಲ್ಲದೇ ಸರಿದು ಹೋಗಲು
ನಿನ್ನ ಆತ್ಮವಿಶ್ವಾಸ ,
ಹಾಕಿ ಕಡಿವಾಣ ಬಿಗಿಗೊಳಿಸು
ಗೆಳತೀ ನಿನ್ನ ಮನಸಾ.

ಕಾಲಕ್ಕೇನು  ತೊಡುವುದು
ಕ್ಷಣಕ್ಕೊಂದು ಮುಖವಾಡ.
ನೀ ಗಟ್ಟಿಯಾಗಲು
ಕ್ಷಣದಲ್ಲಿ ಕರಗುವುದು ಮುಸುಕಿದ ಕಾರ್ಮೋಡ.

ನೋವಲ್ಲಿ ಮರುಗುವವರ ಅಳಿಸುವುದೇ
ಜಗದ ನಿಯಮ ,
ನೀ ತಲೆ ಬಾಗದೆ ನೋವ ಕಡೆಗಣಿಸಿ
ಪಡು ಜೀವವೇ ಸಂಭ್ರಮ.

ಕೈಯ್ಯೊಳಗೆ ಕೈ ಸೇರಿಸಿ
ಬರುವೆ ನಾ ತುಸು ದೂರ ,
ಹಂತ ಹಂತವಾಗಿ ಕೊನೆಗೊಳ್ಳುವುದು ನೋಡು
ನಿನ್ನ ಮನಸಿನ ಭಾರ.

ಆಗಸದ ತುಂಬಾ ಹಬ್ಬಿದಂತೆ
ಹಾಲ್ಬೆಳದಿಂಗಳು,
ಒಲವೇ ನೀ ನೋವ ಮರೆತು
ಹಿತವಾಗಿ ನಗಲು.

PC: ಅಂತರ್ಜಾಲ

–  ನಯನ ಬಜಕೂಡ್ಲು.

2 Responses

  1. Shankari Sharma says:

    ಹೌದು. ಒಳ್ಳೆಯ ಗೆಳತಿಯೇ ನಮ್ಮ ಮನಃಶ್ಶಕ್ತಿ. ಸುಂದರ ಕವನ.

  2. Hema says:

    ಸಂತಸದ ಸಮಯದಲ್ಲಿ ಸ್ನೇಹಿತರು ಜೊತೆಯಾಗಿರುತ್ತಾರೆ..ಆದರ್ ದು:ಖದ ಸಮಯದಲ್ಲಿ ‘ಜತೆಯಾಗಿರುವೆ’ ಎನ್ನುವುದು ನಿಮ್ಮ ಒಳ್ಳೆಯ ಮನಸ್ಸನ್ನು ಸೂಚಿಸುತ್ತದೆ..ವಂದನೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: