ಜೀವಗಂಗೆ
ಪ್ರೀತಿಯ ತಂಪೆರೆದು
ಭಾವಗಳ ಅರಳಿಸುವೆ
ಬತ್ತದ ಹೃದಯವದು
ಜೀವಗಂಗೆ.
ಬದುಕಿದ ಪ್ರತಿಗಳಿಗೆ
ಜೊತೆಗಿರುವೆನು ನಿನ್ನ
ಬದುಕು ಮುಗಿಸುವ ಗಳಿಗೆ
ನಗುತ ಕಳಿಸೆನ್ನ,
ಕಣ್ಣಿಗೂ ಕಣ್ಣಾಗಿ
ಒಳಗಿಹುದು ಪ್ರೀತಿ
ರೆಪ್ಪೆಯಾಗಿ ಕಾಯೋ
ಮಾತೇಕೆ ಗೆಳತಿ,
ಉಸಿರಿರುವ ತನಕ
ಜೊತೆಗೇ ಇರುವೆನಲ್ಲ
ಉಸಿರು ನಿಂತಾಗ ಮಾತ್ರ
ಕಳಿಸಿಕೊಡು ನಲ್ಲೆ.
ಮತ್ತೆಂದು ಯಾರಿಗೂ
ಭಾರವಾಗೆನು ನಾನು
ಹೆಗಲೇರುವ ಮುನ್ನ
ತೀರಿಸುವೆನು ಋಣವನು
– ಉಮೇಶ ಮುಂಡಳ್ಳಿ ಭಟ್ಕಳ