ನೆರಳು
by
Sumana Devananda, sumanadevananda@gmail.com
·
September 20, 2018
ನಮ್ಮಿಬ್ಬರ ನೆಲವೊಂದೆ
ನಮಗೆರೆವ ಜಲವೊಂದೆ
ನಾವಾಡುವ ಉಸಿರೊಂದೆ,,
ನಮ್ಮಿಬ್ಬರ ಆಟವೊಂದೆ
ನಮ್ಮಿಬ್ಬರ ನೋಟವೊಂದೆ
ಎದುರಾದ ಪರಿಸ್ಥಿತಿಯೊಂದೆ,,
ನಾನೂ ತಬ್ಬಲಿ, ನೀವೂ ತಬ್ಬಲಿ,
ನಮಗಾರು ಆಸರೆ
ನಾ ನಿಮಗೆ, ನೀವು ನನಗೆ,
ಬನ್ನಿ ನೆರಳ ಹುಡುಕೋಣ
ಬನ್ನಿ ಗೂಡ ಕಟ್ಟೋಣ
ಪಯಣದಿ ಜೊತೆ ಸಾಗೋಣ.
-ಸುಮಿ