ರಕ್ಷಾಬಂಧನ…
ಶ್ರಾವಣಮಾಸದ ಹಬ್ಬದ ದಿಬ್ಬಣ
ಹೊತ್ತು ತಂದಿರೆ ರಕ್ಷಾಬಂಧನ
ಭಾತೃಪ್ರೇಮದ ಸುಂದರ ಕವನ
ತನುಜೆ ಅನುಜರ ಸುಂದರ ಬಂಧನ
ತಂಗಿಗೆ ಅಣ್ಣನ ರಕ್ಷಾಕವಚವು
ಕಷ್ಟ ಸುಖಗಳಲಿ ಸಹಭಾಗಿತ್ವವು
ಪವಿತ್ರ ಪ್ರೇಮದ ಶುಭ ಸಂಕೇತವು
ಸಿಹಿ ಹಂಚಿ, ಆರತಿ ಬೆಳಗುವೆವು
ಭಾತೃಪ್ರೇಮವು ಎಲ್ಲೆಡೆ ಹರಡಲಿ
ಕ್ರೌರ್ಯ, ಹಿಂಸೆಗಳ ಪರಿಧಿಯ ಮೀರಲಿ
ಸೋದರತ್ವದ ಭಾವನೆ ಬೆಳಗಲಿ
ಶಾಂತಿ,ಸೌಹಾರ್ದತೆ ಜಗದಲಿ ತುಂಬಲಿ
ನಿಮಗೆಲ್ಲರಿಗೂ, ಸೋದರ ಪ್ರೇಮ ಪ್ರತೀಕ,ರಕ್ಷಾಬಂಧನ ಹಬ್ಬದ ಶುಭಾಶಯಗಳು…🙏🙏
-ಶಂಕರಿ ಶರ್ಮ, ಪುತ್ತೂರು.