ಅಜಾತಶತ್ರು
ವಿಶ್ವಕಂಡ ಧೀಮಂತ ನಾಯಕ
ದೇಶಸೇವೆಯೇ ಇವರ ಕಾಯಕ
ಪ್ರಖರ ವಾಗ್ಮಿ,ಕವಿ ಹೃದಯಿ
ಇವರೇ ನಮ್ಮ ವಾಜಪೇಯಿ
ದೇಶದ ಭವಿಷ್ಯಕೆ ದೂರದೃಷ್ಟಿತ್ವದ ಚಿಂತಕ
ವೈರಿರಾಷ್ಟ್ರದ ಬಾಂಧವ್ಯಬೆಸೆದ ಕರುಣಾಜನಕ
ಉಸಿರುಉಸಿರುವಿನಲಿ ಚೈತನ್ಯದ ಚಿಲುಮೆ
ಉಸಿರು ನಿಂತಿದೆ ಈಗ ಬೇಕಿದೆಯೊಂದು ಪ್ರತಿಮೆ
ಸರ್ವಶಿಕ್ಷಣ ಅಭಿಯಾನದ ರೂವಾರಿ
ಪೋಖ್ರಾನ್ ಅಣ್ವಸ್ತ್ರದ ಕ್ರಾಂತಿಕಾರಿ
ವೀರ ಅರ್ಜುನ ಪಾಂಚಜನ್ಯದ ವರದಿಗಾರ
ಪಾಕಿಸ್ತಾನ ವಿರುದ್ಧದ ಕಾರ್ಗಿಲ್ ಗೆಲುವಿನ ನೇತಾರ
ರಾಜಕಾರಣದಲ್ಲಿನ ಅಜಾತಶತ್ರು
ವಿರೋಧಿ ಗುಂಪಲೂ ಇರುವರು ಮಿತ್ರರು
ಮುತ್ತು ಮಾಣಿಕ್ಯದ ಭಾರತ ರತ್ನ
ನಿನಗಿದೋ ನನ್ನ ನುಡಿನಮನ
-ರಾಮ ಹೆಬಳೆ,ಶೇಡಬರಿ,ಭಟ್ಕಳ
ಮಾನ್ಯ ವಾಜಪೇಯಿ ಅವರ ಬಗ್ಗೆ ಎಲ್ಲ ಸಾರ್ಥಕತೆಯನ್ನು ತಮ್ಮ ಕವನದಲ್ಲಿ ಪಡಿಮೂಡಿಸುವ ಪ್ರಯತ್ನ ಮಾಡಿದ್ದೀರಿ.ತುಂಬಾ ಸುಂದರ ಕವನ ಅಭಿನಂದನೆಗಳು ಗೆಳೆಯ