ರಾಘವೇಂದ್ರ ಗುರುರಾಯಾ…
ರಾಘವೇಂದ್ರ ಗುರುರಾಯಾ ನೀ ಬಾರೋ
ನಂಬಿಹ ಭಕ್ತಗೆ ನೀ ದಯೆ ತೋರೋ,
ನಂಬಿಹ ಭಕ್ತಗೆ ನೀ ದಯೆ ತೋರೋ,
ರಾಘವೇಂದ್ರ ಗುರುರಾಯಾ…
.
ಮಂತ್ರಾಲಯದಲಿ ನೆಲೆಸಿಹ ಗುರುವೆ
ಮಂತ್ರಾಲಯದಲಿ ನೆಲೆಸಿಹ ಗುರುವೆ
ಬೇಡಿದ ವರವಾ ಕೊಡುವಾ ಪ್ರಭುವೆ
ನಿನ್ನನೇ ನಂಬಿ ಸೇವಿಪ ಭಕ್ತರಾ
ಬಿಡದೆ ನೀ ಸಲಹಯ್ಯಾ ದೊರೆಯೆ
ರಾಘವೇಂದ್ರ ಗುರುರಾಯಾ…1
.
ಭವರೋಗದ ಪರಿಹಾರಕ ನೀನು
ಭವರೋಗದ ಪರಿಹಾರಕ ನೀನು
ಭಕ್ತರ ಪಾಲಿಗೆ ನೀ ಕಾಮಧೇನು
ನಮ್ಮ ರಕ್ಷಣೆಗೆ ಇರಲು ನೀನು,
ಬೇರೆ ಏನನು ಬೇಡೆವು ನಾವು
ರಾಘವೇಂದ್ರ ಗುರುರಾಯಾ…2
.
ಬೃಂದಾವನದಾ ನೋಟವೆ ಚೆಂದಾ
ಬೃಂದಾವನದಾ ನೋಟವೆ ಚೆಂದಾ
ನಿನ್ನಯ ನಾಮಾ ಮನಕಾನಂದಾ
ಅನವರತವು ನಿನ್ನ ನಾಮಸ್ಮರಣೆಯಾ
ಮಾಡುವ ಭಾಗ್ಯವ ಕೊಡು ಹೇ ಪ್ರಭುವೆ..3
ರಾಘವೇಂದ್ರ ಗುರುರಾಯಾ….
-ಮಾಲತೇಶ ಹುಬ್ಬಳ್ಳಿ
‘
‘
ನಿಮ್ಮ ನಿವೃತ್ತಿಯ ನಂತರವೂ ನೀವು ಹಾಗೂ ಶ್ರೀಮತಿ ಶಂಕರಿ ಪುತ್ತೂರರವರ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂದಿದ್ದು ನಮಗೆ ಸ್ಪೂರ್ತಿ ಸರ್. ಕವನ ತುಂಬಾ ಚನ್ನಾಗಿದೆ ಹೀಗೆ ಸಾಗಲಿ ನಿಮ್ಮ ಸಾಹಿತ್ಯಾರಾಧನೆ.