ನಾಗರಪಂಚಮಿ…
ಪಿತನ ಸಾವಿನ ಸೇಡು
ತೀರಿಸಲು ಯಾಗವನು
ಗೈದ ನೃಪನವನು ಜನಮೇಜಯನು
ತಕ್ಷಕನ ಬಲಿ ಪಡೆವ
ಪಣ ತೊಟ್ಟ ರಾಜನಿವ
ಸಕಲ ಸರ್ಪಗಳು ಬೀಳೆ ಯಜ್ಞಕುಂಡದಲಿ
ಪಂಚಮಿಯ ದಿನದಂದು
ತಡೆ ಬೀಳೆ ಯಾಗಕದು
ಜೀವದಾನವದಾಯ್ತು ನಾಗಗಂದು
ಈ ದೇವ ಭೂಮಿಯಲಿ
ನಮಿಸಿ ನಾಗ ಪೂಜೆಯಲಿ
ಬೇಡಿ ಬಾಗುವೆವಿಂದು… ಕ್ಷಮಿಸಿ ರಕ್ಷಿಸಲಿ .
ತಮಗೆಲ್ಲರಿಗೂ ನಾಗರಪಂಚಮಿ ಹಬ್ಬದ ಶುಭಾಶಯಗಳು..
-ಶಂಕರಿ ಶರ್ಮ, ಪುತ್ತೂರು.