ಮತ್ತೆ ಬಂತು ಹೋಳಿ
ಬಣ್ಣಗಳೊಳಗಿಳಿದ
ಭಾವನೆಗಳ ಚಿತ್ತಾರ
ಬೆಡಗಿನ ಲೋಕದಲಿ
ವಯ್ಯಾರದ ನವರಾಗ
ಬಣ್ಣ ಬೇಡವೆಂದರೆ ಹೇಗೆ
ಹೊಂಗಸುಗಳಂತೆ ಹಾಗೆ
ರಂಗಿನಂತೆ ಹಲವು ಬಗೆ
ಇರಬೇಕದಕೆ ನಾವು ಹೀಗೆ
ಬಣ್ಣದೋಕುಳಿಯಲಿ
ಭಾವಸಮುದ್ರದ ಅಲೆಗೆ
ಎರಚಿಯೆರಚುವ ಖುಷಿ
ಮನದೊಳಗೆ ಹೊಸಗೀತೆ
ಬಣ್ಣ ಬಳಿದವರಿಗೂ
ಬಾನಗಲದ ಬಯಕೆ
ಮುಗಿಲಬಿಲ್ಲಿನೊಳು
ತಣಿಯದ ಉತ್ಸಾಹ
ಮತ್ತೆ ಬಂದ ಹೋಳಿ ಗೆ
ಮೆಲ್ಲುತ ಸವಿ ಹೋಳಿಗೆ
ಹಾರೈಸುತೆಲ್ಲರ ಏಳಿಗೆ
ಸಂಭ್ರಮಿಸೋಣ ಘಳಿಗೆ
-ಗಣೇಶಪ್ರಸಾದ ಪಾಂಡೇಲು