ಭಾವ ಸಾಗರದಲಿ… …
ಭಾವ ಸಾಗರದಲಿ
ಅರಳಿದ ತಾವರೆ
ಪ್ರೀತಿ ಅದರ ಹೆಸರು
ಹನಿ ಹನಿ ನಗೆಯ
ಬೆಳದಿಂಗಳ ಶಶಿ
ಒಲವೇ ಅದರ ಉಸಿರು
ಮಣ್ಣ ವಾಸನೆಯಲಿ
ಕಲಸಿದ ನೆನಪುಗಳು
ಇಳೆಯ ಬಿರಿದು ಮೊಳಕೆ
ಹಸಿರ ಮರೆಯಲ್ಲಿ
ನಾಚಿದ ಮಲ್ಲಿಗೆ
ಬೇರೆ ಹೆಸರು ಬೇಕೆ
ಕಡಲ ನೊರೆಯೊಡನೆ
ನಕ್ಕ ಕನಸುಗಳು
ಮೀಟಿ ಎದೆಯ ತಂತು
ಮುಗಿಲ ಮೋಡಗಳ
ಮೆತ್ನೆ ಹಾಸಿಗೆ
ಹಗಲು ಜ್ವರವ ತಂತು
ಕಾಡು ಕತ್ತಲೆಗೆ
ಮತ್ತು ಏರಿಸಿದ
ರಾತ್ರಿ ರಾಣಿ ಕಂಪು
ಸುಳಿವ ಗಾಳಿಗೆ
ಒಲವು ಸವರಿದ
ಹಕ್ಕಿ ಕೊರಳ ಇಂಪು.
– ಉಮೇಶ ಮುಂಡಳ್ಳಿ
ಕವನ ಸೊಗಸಾಗಿದೆ ..