ಕೃಷ್ಣಾ ನೀ ಬೇಗನೇ ಬಾರೋ
ಭಾವನೆಗಳು ಮನದೊಳುಕ್ಕಿ
ನೆನೆಯಲೊಂದು ಸುದಿನ ಸಿಕ್ಕಿ
ಕಾದಿಹರಲ್ಲಲ್ಲಿ ಹಿಡಿದವಲಕ್ಕಿ
ಬಾಲ್ಯದಿನಗಳ ನೆನಪುಗಳ ಹೆಕ್ಕಿ
ಇತ್ತಿದ್ದನಂದು ಅವಲಕ್ಕಿ ಮೊಸರು
ಗೆಳೆತನಕ್ಕೆ ಮುದ್ದುಕೃಷ್ಣ ಉಸಿರು
ಸ್ನೇಹವಲ್ಲಿ ಶಾಶ್ವತವಾಗಿ ಹಸಿರು
ಅಮರವಿಲ್ಲಿ ಕುಚೇಲನ ಹೆಸರು
ರಾಧೆಯೊಡಗೂಡಿ ಬಂದ
ಕೃಷ್ಣನೆನುವುದೇ ಚೆಂದ
ಕೊಳಲನೂದುವ ಅಂದ
ಭಕುತರಿಗೆ ಬಲವನು ತಂದ
ರುಕ್ಮಿಣಿ-ಭಾಮೆ ಹದಿಬದೆ
ಪ್ರೀತಿಗೊಲಿಸಲಲ್ಲಿ ರಾಧೆ
ನಲಿದು ಮುಗಿವವರೆದೆ
ಒಲುಮೆಗೆ ಭಕುತಿ ಸುಧೆ
ಬಂತು ಮತ್ತೊಂದು ಅಷ್ಟಮಿ
ವಸುದೇವ ಸುತ ನಮಾಮಿ
ಯಶೋದಾಕುವರ ಗೋಪ್ರೇಮಿ
ಪದತಲದಲ್ಲಿಹೆ ರಕ್ಷಿಸು ಸ್ವಾಮಿ
.’
– ಗಣೇಶಪ್ರಸಾದ ಪಾಂಡೇಲು
ಕವನ ಚೆನ್ನಾಗಿದೆ