ಆ ಮನವು ನನ್ನದಲ್ಲ…!
ಇದೇನಿದು?
ದಿಗಿಲಾಗಿದೆ ನಿಜವ ತಿಳಿದು!!
ಮಗುವಾಗಿ ಆಡುವಾಗ
ಖುಷಿಯಲ್ಲಿದ್ದೆ ಓಡುವಾಗ ಬೀಳುವಾಗ
ಆಟಿಕೆಯೋ, ಅಮ್ಮನ ಪಾಠವೋ..!
ಆ ಮನವು ನನ್ನದಲ್ಲ …. ಅದೂ ನನ್ನಲಿಲ್ಲ…!
ಬೆಳೆಯುವಾಗ ಹರೆಯ
ಮರೆತೆ ನಾನು ದುನಿಯಾ
ಕಾರಣ ಎನ್ನ ಗೆಳೆಯಾ…!
ಅದೇ ಖುಷಿಯ ಲೋಕ!
ಆ ಮನವು ನನ್ನದಲ್ಲ …. ಅದೂ ನನ್ನಲಿಲ್ಲ…!
ಅದೆಷ್ಟು ಚೆಂದದ ಸಂಸಾರ
ಸುಖಮಯ ಜೀವನದ ಸಾರ
ಇಲ್ಲೂ ಖುಷಿಯ ಮಹಾಪೂರ
ಆದರೂ ಅದಕೆ ಕಾರಣ ನಾನಲ್ಲ..!
ಆ ಮನವು ನನ್ನದಲ್ಲ …. ಅದೂ ನನ್ನಲಿಲ್ಲ…!
ವಯಸು ಕರಗುವ ಹೊತ್ತು
ಊರುಗೋಲಿನ ಆಸರೆಯನಿತ್ತು
ಮನವು ಚಿಂತಿಸುತಲಿತ್ತು
ಸುಖದ ಮನವು ಪರರಲ್ಲಿತ್ತು
ದ್ವೇಷ-ವೇಷ ಮರೆತು ಬೆರೆತು…!
– ಅಶೋಕ್ ಕೆ. ಜಿ. ಮಿಜಾರ್.
ಕವನ ಚೆನ್ನಾಗಿದೆ
NICE
ಇಷ್ಟವಾಯಿತು.. 🙂
ಚೆನ್ನಾಗಿದೆ..
ಚೆನ್ನಾಗಿದೆ !
ಅರ್ಥಪೂರ್ಣ kavite