ಬೆಳಕು-ಬಳ್ಳಿ

ಮನುಜ ದೀಪ 

Share Button

ಅಮ್ಮ ಹಚ್ಚಿದೊಂದು ಹಣತೆ
ಅಪ್ಪ ತಂದನದಕೊಂದು ಘನತೆ
ಮಗುವೆಂಬ ಮನುಜ ದೀಪ
ಬೆಳಗುತಿಹುದು ನಗುವ ಬೀರಿ

ಹೆತ್ತವರ ಕನಸಿನ ಆಶಾಕಿರಣ
ಬಡತನದಲೂ ಬದುಕೋ ಪ್ರೇರಣ
ಭವಿಷ್ಯ ಕಟ್ಟಿಕೊಳ್ಳಲೊಂದವಕಾಶ
ಮಗುವು ನೀಡಿತವರಿಗೆ ಸುಖಸಂತಸ

ಎಲ್ಲ ನೋವುಗಳ ಮರೆತು
ಮಗುವಿನೊಂದಿಗೆ ಮಗುವಾಗಿ ಬೆರೆತು
ಬೇಕು ಬೇಡಗಳ ಪೂರೈಸಿ
ಸಂಭ್ರಮಿಸಿತು ಆ ಹೆತ್ತವರ ಮನಸ್ಸು

ಸಂಸಾರದಿ ಸಂಸ್ಕಾರವನಿತ್ತು
ತಾವೆಣ್ಣೆ ಬತ್ತಿಯಾಗಿ ಸುತ್ತಿಕೊಂಡು
ಹೆಣ್ಣೆಂಬ ದೀಪವನು ಹಚ್ಚಿದರು
ಮಗಳೆಂಬ ಜ್ಯೋತಿ ಬೆಳಗಿದರು

ಸಂಪ್ರದಾಯದ ತಿಮಿರ ಕಳೆದು
ಸಮತೆಯ ಹಣತೆಯಾಗಿ ಉರಿದು
ಸಮರ್ಥ ಬದುಕ ಕಟ್ಟಿದಳು
ಹೆತ್ತವರಿಗೆ  ಹೆಮ್ಮೆ ತಂದ ಮಗಳು

 – ಅಮುಭಾವಜೀವಿ 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *