ಸುಮಗಳು ನಾವೀ ಸುರನಂದನದ

Share Button

ಸುಮಗಳು ನಾವೀ ಸುರನಂದನದ

ಸುಮಗಳು ನಾವೀ ಸುರನಂದನದ ||ಪ||

ಇದೋ ಇದು ನಮ್ಮದೆ ಭೂಮಿ
ಜೊತೆಯಲೀ ಮಣ್ಣಲೆ ಜನಿಸಿಹೆವು
ದೊರೆತಿದೆ ಒಬ್ಬನೆ ಸೂರ್ಯನ ಬೆಳಕು
ತೊಯ್ದೆವು ಒಂದೇ ಮಳೆಯಲಿ ಮಿಂದು
ಜೋಕಾಲಿ ತೂಗುತಲಿತ್ತಿಂದತ್ತ
ಬೆಳೆದೆವು ಒಂದೆ ಉಸಿರನು ಕುಡಿದು
ಸುಮಗಳು ನಾವೀ ಸುರನಂದನದ ||೧||

ಅಂದದ ಬಣ್ಣದ ರೂಪವು ನಮ್ಮದು
ವಿಧ ವೈವಿಧ್ಯದ ಅಡುಗೆ ತೊಡುಗೆ
ಆದರು ಜೊತೆಯಲಿ ನಾವೆಲ್ಲ
ಈ ಬನದ ಸುಂದರ ಪುಷ್ಪಗಳು
ಇರುವನು ಒಬ್ಬನೆ ಮಾಲಿಕ ಮೇಲೆ
ಇರುವೆವು ಒಂದೆ ಬಾನಿನ ಕೆಳಗೆ
ಸುಮಗಳು ನಾವೀ ಸುರನಂದನದ ||೨||

ಒಬ್ಬನೆ ದಿನಕರ ಅವನದೆ ಕಿರಣ
ನಗುತಲಿ ಬಿರಿವೆವು ನಾವೆಲ್ಲ
ಒಬ್ಬನೆ ಚಂದಿರ ಅವನದೆ ತಿಂಗಳು
ಎಲ್ಲರು ಅದರಲೆ ಮಿಂದಿಹೆವು
ದುಂಬಿಯ ನಾದದೆ ದೊರೆತಿದೆ
ಒಂದೇ ಶ್ರುತಿಸ್ವರ ನಮಗೆಲ್ಲ
ಸುಮಗಳು ನಾವೀ ಸುರನಂದನದ ||೩||

ಕಲ್ಲು-ಮುಳ್ಳುಗಳ ನಡುವೆಯೆ ನಾವು
ಕಲಿತೆವು ಬಾಳಲು ನಗುನಗುತ
ಒಂದೆ ಸೂತ್ರದಿ ಬಂಧಿತರಾಗಿ
ಆದೆವು ಅಮ್ಮಗೆ ಪ್ರೀತಿಯ ಹಾರ
ಎಲ್ಲರಿಗಾಗಿಯೆ ಸುಗಂಧವ ಬೀರುವ
ಬಡವ-ಬಲ್ಲಿದ ಮುಕುಟಮಣಿ
ಸುಮಗಳು ನಾವೀ ಸುರನಂದನದ ||೪||

 

– ಕಾಕುಂಜೆ ಕೇಶವ ಭಟ್ಟ

1 Response

  1. Shruthi Sharma says:

    ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: