ಪ್ರೇಮರೂಪಿ ಮಾಧವ
ರಾಧೆಯೊಲವಲಿ ಮಗ್ನ ನೀನು
ಪ್ರೇಮರೂಪಿ ಮಾಧವ
ದಿವದ ಒಲವಿನ ಧಾರೆ ಹರಿಸುವೆ
ಎಂಥ ಮೋದವು,ಸೋಜಿಗ
ನೋಡುತಿರುವುದು ಹೇಗೆ ನಿಮ್ಮನು
ದೃಷ್ಟಿಯಾಗದೆ ಒಲುಮೆಗೆ
ಲಜ್ಜೆ ಸುಳಿಯಲಿ ನಮ್ಮ ನೂಕಿದೆ
ಹೇಗೆ ಇರುವುದು ಬಳಿಯಲೆ
ಬಿಟ್ಟು ತೆರಳಲಿ ಹೇಗೆ ನಿನ್ನನು
ಬಿಡಲೆ ಒಲವಿನ ಪಾಲನು
ಗಾಳಿ ಬೀಸುತ ಸೇವೆಗೈಯುತ
ಕಣ್ಣ ಹೊರಳಿಸಿ ನಿಲುವೆನು
ಚಣವೆ ಸಾಕು ನೋಡು ನನ್ನನು
ಸಫಲವೆನ್ನಯ ಜೀವನ
ಉಸಿರಿನುಸಿರಲಿ ತುಂಬಿಕೊಳುವೆನು
ಜನುಮಜನುಮವು ಪಾವನ
(ಮೇಲಿನ ಚಿತ್ರಕ್ಕೆ ನುಡಿ ಕುಚ್ಚು..ಕಲಂಕಾರಿ ಶೈಲಿಯ ಚಿತ್ರ. ಕಲಾವಿದೆ-ವೀಣಾ ಹೆಗಡೆ )
– ಡಾ.ಗೋವಿಂದ ಹೆಗಡೆ
ಚಿತ್ರ, ಕವನ ಎರಡೂ ಒಂದಕ್ಕೊಂದು ಪೂರಕ, ಚೆಂದ 🙂
ಚಿತ್ರ…ಕವನ..ಎರಡೂ ತುಂಬಾ ಚೆನ್ನಾಗಿವೆ…