ಪ್ರಕೃತಿ-ಪ್ರಭೇದ

ಕುದನೆಕಾಯಿ ನಾಮಾವಳಿ!

Share Button

ಕೆಲವೊಮ್ಮೆ ಗುಡ್ಡಗಾಡು, ಹಳ್ಳಿಮಾರ್ಗಗಳಲ್ಲಿ ನಡೆಯುವಾಗ ಹಲವಾರು ಔಷಧೀಯ ಸಸ್ಯಗಳು, ಅಡುಗೆಗೆ ಬಳಸಬಹುದಾದ ಕಾಡು ಸೊಪ್ಪು,ಹೂ ಗಳು, ಕಾಯಿ-ಹಣ್ಣುಗಳು, ಹೂಗಳು ಕಾಣಸಿಗುತ್ತವೆ. ಹೀಗೆ ಹಲವಾರು ಬಾರಿ ಚಾರಣ ಮುಗಿಸಿ ಬರುವಾಗ ನನ್ನ ಬ್ಯಾಗ್ ನಲ್ಲಿ ಕುದನೆಕಾಯಿ ಇರುತ್ತದೆ!

ಹೀಗಾಗಿ “ನೀವು ಬಿಡಿ, ನಾರು, ಬೇರು,ಸೊಪ್ಪು, ಹೂ, ಕಾಯಿ, ತಿರುಳು, ಸಿಪ್ಪೆ,ಬೀಜ ಎಲ್ಲವನ್ನೂ ತಿಂತೀರಲ್ರಿ, ಕಾಡು ಪ್ರಾಣಿ/ಪಕ್ಷಿಗಳು ಏನು ತಿನ್ಬೇಕು ” ಅಂತ ನನ್ನನ್ನು ರೇಗಿಸುವವರೂ ಇದ್ದಾರೆ!

ಕುದನೆಕಾಯಿಯು ಹಸಿರು ಗುಂಡು ಬದನೆಕಾಯಿಯ “ಮಿನಿಯೇಚರ್ ಮೋಡೆಲ್” ನಂತೆ ಇದೆ. ಗಿಡದಲ್ಲಿ ಪುಟ್ಟ ಹಸಿರು ಕಾಯಿಗಳ ಗೊಂಚಲುಗಳು ಕಂಗೊಳಿಸುತ್ತವೆ. ಆ ಪುಟ್ಟ ಕಾಯಿಗಳಲ್ಲಿ ಅಸಂಖ್ಯಾತ ಚಿಕ್ಕ ಬೀಜಗಳು. ಈ ಕಾಯಿಗಳನ್ನು ಹುರಿದು, ಜಜ್ಜಿ, ಹುಣಸೇಹಣ್ಣು,ಉಪ್ಪು, ಬೆಲ್ಲ, ಸಾರಿನ ಪುಡಿ ಸೇರಿಸಿ ಸೇರಿಸಿ ಕುದಿಸಿ, ಒಗ್ಗರಣೆ ಹಾಕಿ ‘ಗೊಜ್ಜು’ ತಯಾರಿಸಿದರೆ ಅನ್ನದೊಂದಿಗೆ ಉಣ್ಣಲು ರುಚಿಯಾಗಿರುತ್ತದೆ. ರಕ್ತಹೀನತೆಯಿಂದ ಬಳಲುವವರಿಗೆ ಕುದನೆಕಾಯಿ ಪ್ರಯೋಜನಕಾರಿಯಂತೆ.

ಕುದನೆಕಾಯಿಯ ಬಗ್ಗೆ ಸ್ವಲ್ಪ ತಿಳಿಯೋಣವೆಂದು ವಿಕಿಪಿಡಿಯಾದ ಮೊರೆ ಹೊಕ್ಕರೆ, ಅದರ ನಾಮಾವಳಿಯನ್ನು ನೋಡಿ ತಬ್ಬಿಬ್ಬಾದೆ.

ಪುಟ್ಟ ಕುದನೆಕಾಯಿಗೆ ಅದೆಷ್ಟು ಹೆಸರು…ಬಹುಶ: ಅದರ ಅಸಂಖ್ಯಾತ ಬೀಜಗಳಷ್ಟು! ನಾಮಾವಳಿ ಹೀಗಿದೆ ನೋಡಿ:
1. Solanum torvum ( Botanical name)
2.Turkey Berry
3. Devil’s Fig
4. Prickly Nightshade
5. Wild Eggplant
6. Pea Eggplant
7. Pea Aubergine
8. Shoo Shoo
9. Terongan
10.Tekokak
11.Berenjena cimarrona
12.Berenjena de gallina
13.Berenjena silvestre
14.Sundaikkai ( Tamil)
15.Thibbatu (Sinhala)
16.Makhua phuang (Thailand)
17.Suzume nasu (Japan)..
18.Susumber (in Jamaica)

Many more….

ref: (Wikipedia)

 

– ಹೇಮಮಾಲಾ.ಬಿ

13 Comments on “ಕುದನೆಕಾಯಿ ನಾಮಾವಳಿ!

  1. Idakke KUDANE endu DKyalli…mumbaiyalli ..Thai brinjal endu heluthaare……it is wildly grown at DK…but well sought after vegetable at high class society in mumbai…thinking it is imported from thailand…ha ha ha

  2. tamilalli chundekka anthare.dry madi sandige n melagara (vattal kulambu) madthare.bananthiyarige thumba uttama .

  3. ಇದು ನನಗೆ ಗೊತ್ತು. ಇದು ಹಣ್ಣಾದಾಗ ಕೆಲವು ತಳಿಗಳು ಕೆಂಪು….ಹಾಗು ಕೆಲವು ಹಳದಿ ಬಣ್ಣವಾಗುತ್ತವೆ……ಆದ್ರೆ ಇದರ ಉಪಯೋಗದ ಬಗ್ಗೆ ಗೊತ್ತಿರಲಿಲ್ಲ. ಥ್ಯಾಂಕ್ಸ್.

  4. ಇದರ ಪಲ್ಯ ಬಹಳ ರುಚಿ….. ಗುದ್ದಿ ನೀರಲ್ಲಿ ಹಾಕಿ ಬೀಜ ತೆಗೆದು ಉಪಯೋಗಿಸುವ ಪದ್ಧತಿ ಉಂಟು….

  5. Nammalli idanna sundekayi antare.idralli mado sambar thumba channagiruthe.e kayiyanna jajji onagisi est dinavadru use madbahudu.mathe bengalorali e thara jajjida kayige thumba bedike

  6. ಜಾಬದನೆ ಕಾಯಿ. ಇದರಿಂದ ಕುಂದಾಪುರ/ಕೋಟ ಆಸುಪಾಸಿನಲ್ಲಿ ಪಲ್ಯ ಮತ್ತು ಚಟ್ನಿ ಮಾಡುತ್ತಾರೆ. ಕಾಯಿಯನ್ನು ಗುದ್ದಿ, ಬೀಜ ಹೋಗುವಂತೆ ತೊಳೆದು ಇತರ ಅಡುಗೆಗಳಲ್ಲೂ ಬಳಸುತ್ತಾರಂತೆ

  7. ಕುದನೆಕಾಯಿ, ಹೆಸರನ್ನು ಮೊದಲ ಬಾರಿ ಕೇಳುತ್ತಿದ್ದೇನೆ…. ಮಾಹಿತಿಗೆ ಧನ್ಯವಾದಗಳು ಮ್ಯಾಮ್….

  8. ಉಸ್ಥಿಕಾಯಿ ಅಥವ ವುಸ್ಥಿಕಾಯಿ.ನಿಮ್ಮ ಮಾಹಿತಿಗೆ ಧನ್ಯವಾದಗಳು.

  9. ಮೇಡಂ ನಮ್ಮ ಕಡೆ ಸುಂಡೆಕಾಯಿ ಅಂತ ಕರೆಯುತ್ತಾರೆ. ಇದು ಗುಡ್ಡಗಾಡು ಪ್ರದೇಶದಲ್ಲಿ ಬೆಳೆಯುವ ಒಂದು ಕಾಯಿ ನಮ್ಮ ಕಡೆ ಮನೆಯ ಬಳಿ ಇದನ್ನು ಬೆಳಸುವ ರೂಢಿ. ಇದು ಉತ್ತಮ ಪಿತ್ತವನ್ನು ಕಡಿಮೆ ಮಾಡಲು ಬಳಸಲಾಗುತ್ತದೆ.

  10. ಇತ್ತೀಚಿಗೆ ಇದಕ್ಕೆ ಬದನೆ ಗಿಡದ ಕಸಿಕಟ್ಟುತ್ತಾರೆ .ಮತ್ತು ಈ ಗಿಡದಲ್ಲಿ ರೋಗ ಭಾಧೆ ಕಡಮೆ.ಮತ್ತು ಗಿಡ ಬಹು ದಿನ ಬಾಳ್ವಿಕೆ ಬರುತ್ತದೆ.

  11. ಕುದನೆ ಗೊಜ್ಜು ಉಣ್ಣದೆ ತುಂಬಾ ದಿನಗಳಾದುವು…ಈ ಸಲ ಕುದನೆ ಎಲ್ಲಾದರೂ ಸಿಗುವುದಾ ನೋಡಬೇಕು…!!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *