ಕಾಡುವ ನೆನಪು
ದಿಬ್ಬಣದ ಸಾಲಿನಂತೆ
ಸಾಗುತಿದೆ ನೆನಪುಗಳು
ಮನವೆಂಬ ಪುಟದಲ್ಲಿ
ಅಚ್ಚಳಿಯದ ನೆನಪುಗಳು.
ಮಾತಾಗದ ಮಾತುಗಳು
ಹೇಳಲಾಗದ ಮಾತುಗಳು
ಮೌನದೊಳಗೆ ಮಾತಾಗಿ
ಮೌನಕೂ ಭಾರವಾಗುವ
ನೂರೆಂಟು ನೆನಪುಗಳು.
ಏಕಾಂತ ಬಯಸಿ ಬಂದರಿಲ್ಲಿ
ಸಾಗರದ ಅಲೆಯಂತೆ
ಸುಳಿದೇಳುತಿರುವ ನೆನಪು
ಮತ್ತೆ ಕಾಡುತಿದೆ ಮನವ.
ಹೊರಗೆಡವಲಾರದೆ ಒಳಗಿಳಿಸಿ
ಅರಗಿಸಲಾಗದೆ ಕ್ಷಣಕ್ಷಣವು
ರಣರಂಗವಾಗುತಿದೆ ಮನದಂಗಳವು.
ಉಲ್ಲಾಸದಿ ನಲಿಯಬೇಕೆಂಬ
ನನ್ನ ಮನದ ಬಯಕೆಗಳ
ಚಿವುಟಿ ಮೊಟಕಾಗಿಸುವಿರೇಕೆ
ಬಂದೇ ಬರುವಿರಾದರೆ ಬನ್ನಿ
ಉಲ್ಲಸಿತ ತಂಗಾಳಿಯಾಗಿ.
– ಅನ್ನಪೂರ್ಣ, ಕುಂಬಳೆ
ಚೆಂದ ☺️
ಧನ್ಯವಾದ ಶೃತಿ
ಚೆನ್ನಾಗಿದೆ ಕವನ …excellent pic..
Thanks for ur encouragement
Nice poetry n beautiful painting.
ಮೆಚ್ಚುಗೆಗಾಗಿ ಧನ್ಯವಾದಗಳು
ನೆನಪುಗಳು ಹುಟ್ಟುಹಾಕುವ ತಳಮಳಗಳ ವರ್ಣನೆ. Nice 🙂
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು
Supper
Thanks