ಉ-ಉಗಿಬಂಡಿ ? ಇಲ್ಲಿದೆ..

Share Button

ಒಂದನೆ ತರಗತಿಯಲ್ಲಿ ಅ-ಅರಸ, ಆ- ಆನೆ….ಹೀಗೆ ಮುಂದುವರಿದು ಉ-ಉಗಿಬಂಡಿ ಎಂದು ಉರು ಹಾಕಿಯಾಗಿದೆ. ಆದರೆ ಈಗಿನ ಲೊಕೊಮೋಟಿವ್ ಚಾಲಿತ ಟ್ರೈನ್ ಗಳ ಮಧ್ಯೆ ನೀರಿನ ಉಗಿಯಿಂದ ಚಲಿಸುವ ‘ಉಗಿಬಂಡಿ’ ನೋಡಲು ಸಿಗುವುದು ಬಲು ಅಪರೂಪ. ಊಟಿ ಮತ್ತು ಮೆಟ್ಟುಪಾಳ್ಯಂ ಮಧ್ಯೆ ಒಂದು ಉಗಿಬಂಡಿ ಓಡುತ್ತದೆ. ಇದು ಊಟಿಯಿಂದ ಮಧ್ಯಾಹ್ನ 2 ಗಂಟೆಗೆ ಹೊರಡುತ್ತದೆ. ಮುಂಗಡ ಬುಕ್ಕಿಂಗ್ ಇಲ್ಲದೆ ಸೀಟು ಸಿಗುವುದಿಲ್ಲ. 1908 ರಲ್ಲಿ ಬ್ರಿಟಿಷರಿಂದ ಆರಂಭಿಸಲ್ಪಟ್ಟು, ಆಮೇಲೆ ಅಂದಿನ ಮದ್ರಾಸು ರೈಲ್ವೇ ವಲಯಕ್ಕೆ ಸೇರಿದ ಈ ರೈಲು ಮಾರ್ಗವು ಈಗ ಪರಂಪರೆಯ Mountain Railways ಎಂದು ಗುರುತಿಸಲ್ಪಟ್ಟಿದೆ.

ಊಟಿ ಮತ್ತು ಮೆಟ್ಟುಪಾಳ್ಯಂ ನಡುವಿನ ಒಟ್ಟಾರೆ 46 ಕಿ.ಮಿ ದೂರವನ್ನು ಪ್ರಯಾಣಿಸಲು ಈ ಉಗಿಬಂಡಿ ತೆಗೆದುಕೊಳ್ಳುವ ಸಮಯ ಸುಮಾರು 5 ಗಂಟೆ! ಈ ರೈಲು ಮಾರ್ಗದಲ್ಲಿ 10 ಕ್ಕೂ ಹೆಚ್ಚು ಸುರಂಗಗಳು ಮತ್ತು ನೂರಾರು ಸೇತುವೆಗಳು ಎದುರಾಗುತ್ತವೆ. ಈ ರೈಲು ಮಾರ್ಗವನ್ನು ನಿರ್ಮಿಸಲು ಅದೆಷ್ಟು ಕಷ್ಟವಾಗಿರಬಹುದು!

 

 

 

 

ದಾರಿಯಲ್ಲಿ ಕಾಣಸಿಗುವ ಪ್ರಕೃತಿ ಸೊಬಗು ಅದ್ಭುತ. ಕೆಲವು ಸ್ಟೇಶನ್ ಗಳಲ್ಲಿ ರೈಲು ನಿಲ್ಲಿಸಿ, ಅದರ ಇಂಜಿನ್ ನಿರ್ವಹಣೆಗಾಗಿ ಕಲ್ಲಿದ್ದಲು-ನೀರು ತುಂಬಿಸುವುದು ಪ್ರಯಾಣಿಕರಿಗೆ ಹೊಸ ಅನುಭವೆ. ಹೊಗೆ ಚಿಮ್ಮಿಸುತ್ತಾ ಹೋಗುವ ಉಗಿಬಂಡಿಯ ಪ್ರಯಾಣ ಆರಂಭದಲ್ಲಿ ಮುದ ಕೊಡುತ್ತದೆ. ಕೊನೆಕೊನೆಗೆ ಇದರ ನಿಧಾನ ಗತಿಯ ಬದಲು, ನಾವು ಕೆಳಗೆ ಇಳಿದು ನಡೆಯೋಣವೇ ಎನಿಸುತ್ತದೆ! ಏನಿದ್ದರೂ ಇದೊಂದು ಸುಂದರ ಪ್ರಯಾಣ.

 

– ಹೇಮಮಾಲಾ. ಬಿ,

2 Responses

  1. Shashibhushan Patil says:

    ನಿಜವಾಗಿಯೂ ಈ ಪಯಣ ಸುಂದರ ಒಳ್ಳೆಯ ಮಾಹಿತಿ

  2. Raghupathi Thamankar says:

    ನನ್ನ ಬಾಲ್ಯದಲ್ಲಿ ‘ ಜ್ಹುಕು ಬುಕು ಜ್ಹುಕು ಬುಕು ರೇಲ್ ಗಾಡಿ… ಮಾಮಾಚಾ ಗಾವಾಲಾ ಜಾವೂಯ ಎಂಬ ಹಾಡು ಹಾಗೂ ‘ ಗೆಳೆಯನೇ ಪೇಳುವೆ ಕೇಳಣ್ಣಾ ರೈಲು ಪ್ರ ವಾಸದ ಕನಸನ್ನ ‘ ಹಾಡು ಗಳು ಉಗಿಬಂಡಿಯ ಬಗ್ಗೆಯೇ ರಚಿತ ವಾಗಿದ್ದವು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: