ನಿನ್ನ ನೆನಪುಗಳ ಕೆಂಡ
ನಿನ್ನ ನೆನಪುಗಳ ಕೆಂಡ
ಹಾಯುತ್ತಿರುವೆ
ಅಗ್ನಿದಿವ್ಯದ ಆಚೆ
ಇರುವುದೇನೆ ?
ಇರುವೆಯೇನೇ ?
**
ನಿನ್ನ ನೆನಪನ್ನೆಲ್ಲ
ಗುಡಿಸಿ ಹಾಕಿದ್ದೇನೆ
ಈ ಮರಳ ಕಣ ಮಾತ್ರ
ಹೀಗೆ
ಕಣ್ಣಲೊತ್ತಿದೆ..
**
ಭಾಗ್ಯಶಾಲಿ ನೀನು
ಎದೆಯಲ್ಲಿ
ಮನೆ ಮಾಡಿರುವೆ.
ನಾನೋ ಅನಾಥ
ತಾವಿಲ್ಲದೇ ಹೀಗೆ
ಅಲೆಯುತ್ತಿರುವೆ..
– ಡಾ.ಗೋವಿಂದ ಹೆಗಡೆ