ಬದುಕುತ್ತೇನೆ ನಾನು..

Share Button

 

ನೀರು ತುಂಬಿದಾಗ ಕೆಸರು,
ಬರಬಡಿದಾಗ ಗೋಡು.
ಆಗುವುದೆಲ್ಲವೂ ಹಣೆಬರಹವೆ..
ಬದುಕುತ್ತೇನೆ ನಾನು      |1|
ಬದುಕನ್ನು ಅರಿತುಕೊಳ್ಳಲು.

ಚಳಿ ಮಳೆ ಬಿಸಿಲಿಗೆ ತೋಯ್ದು,
ಒಣಗಿ ನನ್ನ ನಾ ಒಡ್ಡಿಕೊಳುತ್ತೇನೆ.
ನಾನು ಏನಾಗಬೇಕೋ ನಾನೆ ನಿರ್ಣಯಿಸುತ್ತೇನೆ.
ಬದುಕುತ್ತೇನೆ ನಾನು      |2|
ಬದುಕನ್ನು ಬದುಕುತ್ತಲೇ ಹೋಗುತ್ತೇನೆ.

ಮಿಶ್ರಣದಲಿ ಹದವಾಗಿ ಬೆರೆತು,
ಅಚ್ಚಿನಲಿ ಅಚ್ಚಾಗಿ ಅರಳುತ್ತೇನೆ.
ನಾಳೆ ನನಗಾಗಿಯೇ ಬರಲಿದೆ.
ಬದುಕುತ್ತೇನೆ ನಾನು |3|
ಬದುಕಿನ ನಾಳೆಗಾಗಿ ಕಾಯುತ್ತೇನೆ.

ಕಠೋರ ಶಾಖ ಚಿತೆಯಲಿ
ಸುಟ್ಟು ಕರಕಲಾದವುಗಳೆಷ್ಟೋ.
ಅಂತರಂಗದಲಿ ಕೆಂಡ ಕೌಸ್ತುಭವ ಧರಿಸದೇ ಚಿತೆ ಏರಬಾರದು.
ಸುಟ್ಟಿಸಿಕೊಂಡಮೇಲೆ ಗಟ್ಟಿ ಇಟ್ಟಿಗೆಯಾಗೋದು. |4|
ನಿಂತು ನೋಡೊ ಚಂದ ಸ್ಮಾರಕದ ಅಂಗವಾಗೋದು.

ಬದುಕುತ್ತೇನೆ ನಾನು ನನ್ಯಾಕೆ
ಬದುಕಬೇಕು ಎಂಬುದನ್ನು ಬದುಕಿ ತೋರಿಸಲು.
.

 

-ಶರತ್ ಪಿ.ಕೆ.

 

12 Responses

  1. Shruthi Sharma says:

    Very nice 🙂

  2. Nishkala Gorur says:

    ಭಾವಪೂರ

  3. Raghavendra says:

    Super

  4. CHIRANTH PK says:

    ಬದುಕಿನ ಬದುಕಲ್ಲಿ ನೆಲೆಗೊಳ್ಳುವ ಬದುಕು

  5. Prakruthi says:

    ಅಭಿನಂದನೆಗಳು

  6. devu says:

    Super sharu

  7. Punith says:

    Superb

  8. Manujain says:

    Nice

  9. prabhamaninagaraj says:

    ಬದುಕುತ್ತೇನೆ ನಾನು ನನ್ಯಾಕೆ
    ಬದುಕಬೇಕು ಎಂಬುದನ್ನು ಬದುಕಿ ತೋರಿಸಲು’
    ಅರ್ಥಪೂರ್ಣ ಸಾಲುಗಳ ಸುಂದರ ಕವನ ಅಭಿನಂದನೆಗಳು ಶರತ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: