ಅಜ್ಜ -ಅಜ್ಜಿ
ಕೈ ನಡುಗುತಿದ್ದರು
ಸಕ್ಕರೆ ಬದಲು ಅಕ್ಕರೆ
ತುಂಬಿ
ಅಜ್ಜಿ ಮಾಡಿಕೊಡುತಿದ್ದ ಕರದಂಟು
ನೆನೆದು
ಈಗಲೂ ಕನಸೊಳಗೆ ಬಾಯಿ
ಚಪ್ಪರಿಸುತ್ತೇನೆ
ಅಜ್ಜ
ಅವನಿಗೊಂದು ಕನಸು
ನನಗೆ
ರೇಶಿಮೆ ಅಂಗಿ ತೊಡಿಸಿ
ಕಣ್ತುಂಬಿಕೊಳ್ಳುವುದು
ಕಾಲ ಕೂಡಿ ಬರಲಿಲ್ಲ
ಕರುಣೆ ತುಂಬಿದ ಕರುಳು ಅದು
ಗುಡಿ ಕಟ್ಟಿಸಿ
ಅವರನ್ನು ದೇವರಾಗಿಸಿದ್ದಾರೆ
ನಾ ಕಂಡ ನನ್ನ ಪಾಲಿನ
ನಡೆದಾಡುತಿದ್ದ ದೇವರುಗಳನ್ನು
ಸುಮ್ಮನೆ ಮಲಗಿಲ್ಲ ಅವರು
ನನ್ನ ಆಶಿರ್ವದಿಸುತ್ತಿರುವರು
.
– ಮಾಳಿಂಗ ಹಾದಿಮನಿ ಗಂಗನಾಳ
ಅಕ್ಕರೆಯ ಆಪ್ತ ಭಾವದ ಕವನ ಇಷ್ಟವಾಯಿತು.
ದನ್ಯವಾದಗಳು
ಆಪ್ತವಾಗಿದೆ ಕವನ..
Thumba arthapoornavagide kavana