ಹಿಂಗದೇವಿ ನೋಡರಿ ನಾವು
ಹಿಂಗದೇವಿ ನೋಡರಿ ನಾವು ಉತ್ತರ ಕರ್ನಾಟಕ ಮಂದಿ ಹಿಂಗದೇವಿ…
ಯಾವ ದೇಶೀ ಆಟಾ ಆಡೂದನ್ನೂ ನಾವು ಬಿಟ್ಟಿಲ್ಲರಿ,ಗು಼ಂಡಾ ಆಡಿದಿವಿ.ಬಗರಿ ಆಡಿಸಿದಿವಿ,ಪಗಡಿ ಆಡಿದಿವಿ,ಒಟ್ಟಪ್ಪಾ ಲಗೋರಿ ಚಿಣಿದಾಂಡು ಕಬಡ್ಡಿ ಒಂದ ಎರಡ,ಈ ಎಲ್ಲಾ ಆಟಾ ಆಡೆ ನಾವು ದೊಡ್ಡವರಾಗೇವರಿ,ಹಿಂಗದೇವಿ ನೋಡರಿ ನಾವು ಉತ್ತರ ಕರ್ನಾಟಕ ಮಂದಿ ಹಿಂಗದೇವಿ..1.ಜೋಳದ ರೊಟ್ಟಿ ಅಂದರ ನಮಗ ಭಾಳ ಪ್ರೀತಿರಿಅದರಾಗ ಕಟಗ ರೊಟ್ಟಿ ಅಂದರ ಇನ್ನೂ ಪ್ರೀತಿರಿಮಿರ್ಚಿಭಜಿ ಮೀಸಳ ಮಂಡಕ್ಕಿ ಮ್ಯಾಲಿಂದಮ್ಯಾಲ ಬೇಕಬೇಕರಿ,ದಿನಕ್ ಮೂರ್ನಾಕ್ ಸಲಾ ಚಹಾ ಕೆಟಿ ಅಂತೂ ಸೈಯ್ಯ ಸೈರಿ,ಹಿಂಗದೇವಿ ನೋಡರಿ ನಾವು ಉತ್ತರ ಕರ್ನಾಟಕ ಮಂದಿ ಹಿಂಗದೇವಿ..2.ಗಾಯನಾ ಇದ್ದರ ಜರೂರ ಕೇಳತೇವರಿ,ಸಾಹಿತ್ಯ ಗೋಷ್ಠಿಗಳಿಗೆ ತಲಿ ಬಾಗತೇವರಿ,ಛಲೋ ಸಿನಿಮಾ ಬಂದರ ಥೇಟರಿಗೆ ಹೋಗಿ ನೋಡತೇವರಿ,ಒಟ್ ಕಲೆಗೆ/ಕಲಾವಿದರಿಗೆ ಸೀಟಿ/ಚಪ್ಪಾಳೆ ಹೊಡದು ಪ್ರೋತ್ಸಾಹಾ ನೀಡತೇವರಿ,ಹಿಂಗದೇವಿ ನೋಡರಿ ನಾವು ಉತ್ತರ ಕರ್ನಾಟಕ ಮಂದಿ ಹಿಂಗದೇವಿ..3.ಅದ ಅನಲಿಕ್ಕೆ ಐತಿ ಅಂತೇವರಿ,ತನಕಾ ಅನಲಿಕ್ಕೆ ಮಟಾ ಅಂತೇವರಿ,ತಂಬಿಗೀಗೆ ಚರಿಗಿ ಅಂತೇವರಿ, ಹಂಗ ಗೆಳೆಯಾ ಭೆಟ್ಟಿ ಆದರ ಯಾಕ್ಲೆ ಏನಲೆ ಅಂತ ಮಾತಾಡಸ್ತೇವರಿ,ಇದು ನಮ್ ಕಡೇ ಭಾಷಾದ್ದು ಸೊಗಡುರಿ,ಹಿಂಗದೇವಿ ನೋಡರಿ ನಾವು ಉತ್ತರ ಕರ್ನಾಟಕ ಮಂದಿ ಹಿಂಗದೇವಿ…4.ನಮ್ ಕಡೆ ಗೀಗೀ ಪದಾ ಕೇಳಾಕ ಭಾಳ ಛಂದರಿ.ಶರಣರ ತತ್ವಪದಾ ಅಂತೂ ಇನ್ನೂ ಛಂದರಿ,ಡೊಳ್ಳು ಜಗ್ಗಲಿಗಿ ಬಾರಸೂದನ್ನ ನೋಡಬೇಕರಿ,ನಮ್ ಜಾನಪದದ ಸೊಗಡು ಹೆಂಗದ ಅಂಬೂದು ಗೊತ್ತಾಗತದರಿ,ಹಿಂಗದೇವಿ ನೋಡರಿ ನಾವು ಉತ್ತರ ಕರ್ನಾಟಕ ಮಂದಿ ಹಿಂಗದೇವಿ…5.ಒಳಗೊಂದು ಹೊರಗೊಂದು ಅಂಬೂದು ನಮ್ಮೊಳಗಿಲ್ಲರಿ,ಏನ ಆದರು ನಮ್ಮದು ಖಂಡ್ ತುಂಡ್ ಮಾತರಿ,ಸ್ವಲ್ಪ ರಫ್ & ಟಫ್ ಅನಸ್ತೇವಿ ಖರೇರಿ,ಆದರ ನಮ್ ಹೃದಯಾ ಮಾತ್ರ ಸ್ವೀಟ್ & ಸಾಫ್ಟರಿ,ಹಿಂಗದೇವಿ ನೋಡರಿ ನಾವು ಉತ್ತರ ಕರ್ನಾಟಕ ಮಂದಿ ಹಿಂಗದೇವಿ…6.
– ಮಾಲತೇಶ ಹುಬ್ಬಳ್ಳಿ
‘
ಪ್ರೀಯ ಮಾಲತೇಶಣ್ಣ,
ಕೊಡದಲ್ಲ್ಲಿ ಸಮುದ್ರ ತೋರಿಸಿದ ನಿಮ್ಮ ಕವನ ಮನಸ್ಸಿಗೆ ಮುದ ನೀಡಿತು ,
ಉತ್ತರ ಕರ್ನಾಟಕದ ಭಾಷೆ , ರೀತಿ, ನೀತಿ, ಕಲೆ,, ಸಾಹಿತ್ಯ ,ತಿಂಡಿ ತಿನಿಸುಗಳ
ಪರಿಪೂರ್ಣ ಮಾಹಿತಿಯನ್ನು ಕೇವಲ 6×5 +1 =31 ಸಾಲುಗಳಲ್ಲಿ ಅಳವಡಿಸಿ ತೋರಿದ
“ಪದ್ಯ ” ನಿಮ್ಮ ಪಾಂಡಿತ್ಯಕ್ಕೆ ಹಿಡಿದ ಕೈಗನ್ನಡಿ , ಹೀಗೆಯೇ ಸಾಹಿತ್ಯ ಕೃಷಿ ಮುಂದುವರೆಯಲಿ.
ರಂಗಣ್ಣ ನಾಡಗೀರ್ , ಕುಂದಗೋಳ್, ಹಾಲಿವಸ್ತಿ,ಹುಬ್ಬಳ್ಳಿ
,
ಹುಬ್ಬಳ್ಳಿ-ಧಾರವಾಡದ ಸ್ಥಳೀಯ ಸೊಗಡಿನ ಕವನ ಸೊಗಸಾಗಿದೆ…..’ಇದು ಭಾಳ ಚಲೋ ಐತ್ರಿ’ ಅಂದರೆ ಸರಿಯಾ?
ನಮ್ಮ ಜಾಲತಾಣದಲ್ಲಿ ಭಾಷಾ ವೈವಿಧ್ಯತೆಯನ್ನು ಪ್ರಸ್ತುತಪಡಿಸಿದ ಶ್ರೀ ಮಾಲತೇಶ್ ಅವರಿಗೆ ಧನ್ಯವಾದಗಳು .
ತಮ್ಮ ಪ್ರೋತ್ಸಾಹ ಕ್ಕೆ ಧನ್ಯವಾದಗಳು,
“ಭಾಳ ಛಲೋ ಐತ್ರಿ ” ಅಂದರೆ ಸರೀನಾ ಅಂತ ಕೇಳಿದಿರಿ, ಹೌದು ಸರಿ …
“ಅಗ್ ದಿ ಬರೋಬರಿ” ರಿ….