ಇಲ್ಲ,ಇಲ್ಲ,ಇಲ್ಲವೇ ಇಲ್ಲ!

Share Button

 

ದು:ಖವಾಗಿತ್ತು,ಆಕಾಶದತ್ತ ನೋಡಿದೆ

ಮುನಿಸಿಕೊಂಡಂತಿದ್ದ ನಕ್ಷತ್ರಗಳು 

ಹೊಳೆಯಲೇ ಇಲ್ಲ!

 

ದು:ಖವಾಗಿತ್ತು,ಕಡಲಿನತ್ತ ನೋಡಿದೆ

ತೆಪ್ಪಗಾಗಿದ್ದವು ಅಲೆಗಳು

ಅಪ್ಪಳಿಸಲೇ ಇಲ್ಲ!

 

ದು:ಖವಾಗಿತ್ತು,ಬಯಲ ಕಡೆ ನೋಡಿದೆ

ಸತ್ತಪ್ರಾಣಿ ಕುಕ್ಕುತ್ತಿದ್ದವು

ಹಸಿದ ಹದ್ದುಗಳು!

 

ದು:ಖವಾಗಿತ್ತು,ಕವಿತೆಯ ಕಡೆ ನೋಡಿದೆ

ಬಚ್ಚಿಟ್ಟುಕೊಂಡಿತ್ತು

ಅವಳ ಸೆರಗಿನೊಳು!

 

 

 – ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

 

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: