ಸ್ನೇಹದ ಮರೆವು
ಇಂದೇಕೋ ನನಗೆ ಬಹಳ ಬೇಸರ ತರಸಿದೆ ತಂಡ ಅಣ್ಣಯ್ಯ ಹೆಂಗಪ್ಪ ಅಂತ ಕೇಳ್ತಾ ಹೋಗಿರುತ್ತಿದ್ದ ಇಂದು ಅವನ ಕುಶಲತೆ ಸಹ ಮಾಯವಾಗಿ ಬಿಟ್ಟಿದೆ. ಹಾಗೆ ಏನೋ ಇಂದು ಪರವಾಗಿಲ್ಲ ಅಂತ ತಿಳಿದರೆ ಮನಸ್ಸು ಬಿಕ್ಕಿ ನರಳುತ್ತಿದ್ದಂತೆ ಕಾಣುವುದು.
ಮನಸ್ಸಿನ ಲೋಕದಿ ದೂರವಾಗುವುದೆ ಎಂಬ ಪ್ರಶ್ನೆ ಉಲ್ಬಣಗೊಳ್ಳುವುದು ಸಾಮಾನ್ಯ ಆದರೂ ಗೊತ್ತಿಲ್ಲ .ಏಕೋ ಮನಸ್ಸಿನ ಭಾವಕ್ಕೆ ನೋವಿನ ರಸದೌತಣ ಉಣಬಡಿಸಿದರು.
ಅಂದು ನನ್ನ ಜೀವನದ ಆಶಾಕಿರಣವಾದ ಗೆಳೆಯರ ಬಳಗ ನೋವಿನ ಕಹಿ ಅನುಭವ ಉಂಟು ಮಾಡುತ್ತಿದೆ ಹಂಗೋ ಕಾಣದ ಕೈಗಳ ಕೆಲಸದಿಂದ ಎರಕವ ಹೊಯುವ ತರಹ ಕಷ್ಟಗಳನ್ನು ಕೊಡುತ್ತಿದೆ.
ಮುಂದಿನ ನನ್ನ ಬಾಳಿಗೆ ಆಶಾ ಭಾವನೆ ತುಂಬುವ ಸಹೋದರರು ಇಂದು ಸುಳ್ಳು ಲೋಕದಲ್ಲಿ ಸಿಲುಕಿಕೊಂಡು ಹೃದಯವನ್ನು ಘಾಸಿಗೊಳಿಸುತ್ತಿದೆ. ಅಷ್ಟೇ ಮನದ ಮರೆಯ ಕೊನೆಯ ಮಾತು ಮತ್ತೆ ಕೂಡುವುದೆ ನಮ್ಮ ಸ್ನೇಹ!
– ನಾಗಪ್ಪ.ಕೆ.ಮಾದರ