ಸಹ ಜೀವನ
‘
ಅಕ್ಕಯ್ಯ ಮೈಮೇಲೆ ಫಕ್ಕನೆ ಹಾರುವ
ಸೊಕ್ಕಿನ ನೊಣಗಳ ಕಂಡೆ
ಕುಕ್ಕಿ ತಿನ್ನಲೆ ನಾನು ? ಲೆಕ್ಕವು ಬೇಕೇನು ?
ಮುಕ್ಕಿ ಮುಗಿಸುವೆ ನಾನಿಂದೆ ॥
.
ಕೊಕ್ಕರೆ ನೀನೀಗಳಕ್ಕರೆ ಮಾತೊಂದ
ಸಕ್ಕರೆ ಸಿಹಿಯಂತೆ ನುಡಿದೆ
ಮಿಕ್ಕೆಲ್ಲ ಸಿಪ್ಪೆಯ ಹೆಕ್ಕಿ ನಾ ಮುಗಿಸಲು
ದಕ್ಕಲಿ ನಿನ್ನಾನು ತಡೆಯೆ ॥
– ಭಾಗ್ಯಲಕ್ಷ್ಮಿ, ಮೈಸೂರು
‘
ಪ್ರಕೃತಿಯಲ್ಲಿರುವ ಪ್ರಾಣಿ-ಪಕ್ಷಿಗಳ ನಡುವೆ ಉತ್ತಮ ಸಹಜೀವನವಿರುತ್ತದೆ!
ಹಸುವಿನ ಜೊತೆ ಕೊಕ್ಕರೆಯೂ ತನ್ನ ಉದರ ಪೋಷಣೆ ಮಾಡುತ್ತಿರುತ್ತದೆ