ಮನವಿ
ನೆನಪಿನ ಬಾಣಗಳ
ಹಿಂಪಡೆದುಕೋ
ನಾನು ಇನ್ನಷ್ಟು ದಿನ
ಜೀವಿಸಬೇಕು
ಹೂಮನ
ದೇವರಿಗಾಗಿಯೇ ಅರಳುವ
ಹೂವಿನಂತೆ
ನಿನ್ನನ್ನೇ
ನೆನಪಿಸಿಕೊಳ್ಳುವೆ
ಶೋಕ
ಊರಿಗೆಲ್ಲ ತೋರಣ
ಮನೆ ಮಂದಿಗೆಲ್ಲ
ಸಂಭ್ರಮ
ಬೋಳಾದ ಮಾವಿನ
ಮರಕಷ್ಟೇ ಶೋಕ
ಬೆಸುಗೆ
ನಾವಿಬ್ಬರೂ
ಅಂಗೈ ಬೆಸೆದುಕೊಂಡು
ನಡೆದ ಮೇಲಲ್ಲವೇ ?
ಆ ರಸ್ತೆಯ ಇಕ್ಕೆಲಗಳ
ಮರಗಳಲ್ಲಿ
ಹೂವುಗಳು ಅರಳಿದ್ದು!
– ನವೀನ್ ಮಧುಗಿರಿ