ಧಾರವಾಡದ ಸಾಹಿತ್ಯ ಸಂಭ್ರಮ – ಭಾಗ 2

Share Button

Ranganna Nadagir

ಎರಡನೆಯ ದಿನ ಮುಂಜಾನೆ ಎದ್ದಾಗ ಹಿಂದಿನ ದಿನದ ಗುಂಗು  ಇನ್ನು ತಲೆಯಲ್ಲಿ ಕೊರೆಯುತ್ತ ಇತ್ತು.   ಸ್ನೇಹಿತರೊಂದಿಗೆ  ಸಂಭ್ರಮದ ಸ್ಥಳಕ್ಕೆ  ಪಯಣಿಸಿ . ನಾಷ್ಟಾ ಮುಗಿಸಿಕೊಂಡು  ಹಾಲನಲ್ಲಿ ಆಸೀನರಾದೆವು. ಎಂದಿನಂತೆ ಬೆಳಿಗ್ಗೆ 10-00  ಘಂಟೆಗೆ 6 ನೆಯ ಗೋಷ್ಠಿ ಪ್ರಾರಂಭ.

ವಿಷಯ— ಮಾಧ್ಯಮಗಳಲ್ಲಿ(T.V )ಸತ್ಯ ನೈತಿಕತೆ,,ಮತ್ತು ಸಾಮಾಜಿಕ  ಹೊಣೆಗಾರಿಕೆ  ಶ್ರೀ ಬಿ. ಸುರೇಶ ಅವರ  ಮುಂದಾಳ್ತನದಲ್ಲಿ ಜರುಗಿದ   ಗೋಷ್ಠಿಯಲ್ಲಿ ಭಾಗವಹಿಸಿದವರು ಶ್ರೀ  ಮಹಾದೇವ ಪ್ರಕಾಶ್, ಶ್ರೀ ರವೀಂದ್ರ  ರೇಷ್ಮೆ ಮತ್ತು ಸ್ವಲ್ಪ ತಡವಾಗಿ ಆಗಮಿಸಿದ (ಹೀರೋ  ಇನ್ ಫುಲ್ ಸೂಟ ) ಶ್ರೀ ರಂಗನಾಥ್ ಭಾರದ್ವಾಜ  ಎಲ್ಲರೂ  ತಮ್ಮ ತಮ್ಮ ಚನ್ನೆಲ್ಲಗಳ  T R P  ಹೆಚ್ಚಿಸುವ ಬಗ್ಗೆ ,ಮತ್ತು ಬಿಸಿ ಬಿಸಿ ಸುದ್ದಿಯನ್ನು ತೀವ್ರ ನಿಟ್ಟಿನಲ್ಲಿ( ಸತ್ಯಾಸತ್ಯಗಳನ್ನು ವಿಚಾರಿಸದೇ) ಪ್ರಸಾರ  ಮಾಡಲು ತವಕಿಸುವದನ್ನು, ಸಾರ್ವಜನಿಕರು ಖಂಡಿಸಿದರು. ಅಲ್ಲದೆ ಕನ್ನಡ ಶಬ್ದಗಳಲ್ಲಿ  ಪ್ರಯೋಗಿಸುವ  ಕಾಗುಣಿತಗಳಲ್ಲಿ  ಅಕ್ಷರಗಳು  ತಪ್ಪಾಗಿರುತ್ತವೆ.  ಎಂಬುದನ್ನು ಗಮನಕ್ಕೆ ತಂದಾಗ,  ಒಪ್ಪಿಕೊಂಡು ಮುಂದೆ ಸುಧಾರಿಸುವದಾಗಿ , ತಿಳಿಸಿದರು, ವಿಷಯ ಗಂಭೀರವಾಗಿದ್ದು,ಸ್ವಲ್ಪ ಸಮಯ ವಿಪರೀತ ಗದ್ದಲವಾಗಿ
ಯಾರು ಏನು ಹೇಳುತ್ತಾರೆ  ಎನ್ನುವದೇ ತಿಳಿಯಲಾರದೆ,ಸಭಿಕರ ಪ್ರಶ್ನೆಗಳಿಗೆ ಹಾರಿಕೆ ಉತ್ತರ ನೀಡಿ ಗೋಷ್ಠಿ ಮುಕ್ತಾಯ  ಮಾಡಿದರು.
ಸುದ್ದಿ ಮಾಧ್ಯಮದವರಿಗೆ  ಇಲ್ಲಿ ಸುಡುತ್ತಿರುವ ಬಾಣಲೆಯಿಂದ  ಬೆಂಕಿಗೆ ಬಿದ್ದ ಅನುಭವವಾಗಿರಬೇಕು.
ಗೋಷ್ಠಿ 6 ರಲ್ಲಿ   ಹಳಗನ್ನಡ ಕಾವ್ಯದ  ಓದು . ಭಾಗವಹಿಸಿದವರು 3 ಜನ, ಮೊದಲ್ನೆಯವರಾಗಿ  ತಮಿಳು,ಮತ್ತು ಕನ್ನಡದ ಭಾಷೆಗಳ ಸೇತುವೆಯಾಗಿರುವ ಶ್ರೀಮತಿ ತಮಿಳ್  ಸೆಲ್ವಿ  ತಮ್ಮದೇ ಗತ್ತಿನಲ್ಲಿ ನಿರೂಪಿಸಿದ ಕಾವ್ಯ  “ಯಶೋಧರ ಚರಿತೆ” ಚರಿತೆಯ  ಸಾಲುಗಳನ್ನು  ಉದ್ದಕ್ಕೆ ಓದುತ್ತ  ಹೋಗದೆ.ನಾಯಕಿಯರು, ಅಭಯಮತಿ ಮತ್ತು ಅಭಯರುಚಿ , ಬಲಿಯಾಗುವ ಕಥೆಯನ್ನು, ಛಂದಸ್ಸುಗಳ  ಸಹಿತ ಪ್ರಸ್ತುತ ಪಡಿಸಿದ ರೀತಿಗೆ  ಸಭಿಕರು ತನ್ಮಯರಾದರು.  ರನ್ನನ  ಕಾವ್ಯದಲ್ಲಿ ಪೂರ್ಣ ಒಳ ಹೊಕ್ಕು ಭಾವಾರ್ಥವನ್ನು  ಸಮಸ್ತರಿಗೂ ತಿಳಿಯುವಂತೆ  ಹಾವ-ಭಾವ ಗಳೊಂದಿಗೆ ನೀಡಿದ ಶೈಲಿ. ಹಳಗನ್ನಡ ಪದ್ಯಗಳ ಬಗ್ಗೆ ಕುತೂಹಲ
ಉಂಟಾಗುವಂತೆ  ವಾಚನಗೈದ,  ಶ್ರೀಮತಿ  ಶೆಲ್ವಿ ಅವರು  ಪ್ರತಿ ವರ್ಷದ ಸಂಭ್ರಮದಲ್ಲಿ ಭಾಗವಹಿಸಲಿ. ಎರಡನೆ ವಾಚನ ಶ್ರೀ ಕೃಷ್ಣಮೂರ್ತಿ   ಹನೂರ , ಅವರಿಂದ ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ ಇದರಲ್ಲಿ ಬರುವ ವಿಶ್ವಾಮಿತ್ರನ  ಹಠ, ನಕ್ಷತ್ರಕನ ಕಾಟ, ಕುಮಾರನ ನಿಧನ ಹಾಗು ಸ್ಮಶಾನದಲ್ಲಿ ತಾರಾಮತಿ  ಶೋಕ. ಮುಂತಾದ ಮನಕಲಕುವ  ಸನ್ನಿವೇಶಗಳು   ಕಣ್ಣ  ಮುಂದೆ ನಡೆಯುತ್ತಿರುವಂತೆ  ಭಾಸವಾಯಿತು .ಮೂರನೆಯದ್ದು ಮುದ್ದಣ -ಮನೋರಮೆಯರ ಸರಸ ಸಲ್ಲಾಪ.,ರಂಗಾಯಣದ ಆದ್ಭುತ ನಟ ಶ್ರೀ ಹುಲುಗಪ್ಪ ಕಟ್ಟಿಮನಿ ಯವರಿಂದ ಆಂಗಿಕ ಅಭಿನಯ, ಸ್ಪಷ್ಟ  ಉಚ್ಚಾರಗಳಿಂದ, ವಿಷಯದಲ್ಲಿದ್ದ ದಂಪತಿಗಳ ಮದ್ಯದ ರಸವತ್ತಾದ ,ಸುಂದರ,ಸನ್ನಿವೇಶಗಳು  ಮರೆಯದಂತಾಗಿವೆ.
=
ಗೋಷ್ಠಿ 8 ರ,  ವಿಷಯ –ಇಂದೂ   ಕಾಡುವ   ಅಂದಿನ ಕೃತಿ.  ಗೋಷ್ಠಿ ನಿರ್ದೇಶಕರಾಗಿದ್ದ  ಶೂದ್ರ ಶ್ರೀನಿವಾಸರು , ಇಡೀ ರಾಷ್ಟ್ರವನ್ನು ಒಂದು ಗೂಡಿಸಿದ್ದು ರಾಮಾಯಣ  ಹಾಗು ಮಹಾಭಾರತ   ಸಾಹಿತ್ಯ ಹಾಗು ಸಂಭ್ರಮವಂದರೆ ಎಲ್ಲರೂ  ಸಮಾಲೊಚಿಸಿ. ಚರ್ಚಿಸಿ  ಸಂಯೋಜಿತ ಕಾರ್ಯಕ್ರಮ ನೋಡುವದು ಮತ್ತು ಸಂತೋಷ ಪಡುವ  ಸಾರ್ವಜನಿಕ ಹಬ್ಬ  ಎಂದು ಗೋಷ್ಠಿಯ  ಕೊನೆಯಲ್ಲಿ ತಿಳಿಸಿದರು ಇದಕ್ಕೂ ಪೂರ್ವದಲ್ಲಿ ಟಾಪ್-10 ಕೃತಿಗಳಲ್ಲಿ ಒಂದಾದ  ಅರ್ ಬಿ .ಕುಲ್ಕರ್ಣಿ ಯವರ “ಗಾಳಿ ಪಟ “. ಕೃತಿ ಯ ಸಾರಾoಶ ವನ್ನು ಮನ ತಲುಪುವಂತೆ ವಿವರಿಸಿದರು. ಪ್ರೇಕ್ಷಕರ ನಗೆಗೆ ಕಾರಣವಾದ ಶ್ರೀ ವಿಕ್ರಮ ವಿಸಾಜೆ ಅವರ ಮಾತು. ವಿಷಯದ ಬದಲಾಗಿ “ಇಂದೂ ಕಾಡುವ ಫ್ರೆಯಸಿ” ಎಂಬ ವಿಷಯ ಇದ್ದಿದ್ದರೆ ಒಳಿತಾಗುತ್ತಿತ್ತು, ಮುಂದುವರೆಯುತ್ತಾ  ಹಲಸಂಗಿಯ ಲಾವಣಿ  ಸರದಾರ ಖಾಜಾಭೈ ಕುರಿತಾಗಿ ಶ್ರೀ ಮಧುರಚೆನ್ನರ  ವಿರಚಿತ “ರಮ್ಯ ಜೀವನ “ಪುಸ್ತಕದ  ಮುಖ್ಯ ಘಟನೆಗಳನ್ನು ಅದ್ಭುತವಾಗಿ ನಿರೂಪಿಸಿದರು,ಮೂರನೆಯವರಾಗಿ ಶ್ರೀ ಸಿರಾಜ್ ಅಹಮದ ಅವರು,ಕೊಡಗಿನ ಗೌರಮ್ಮನವರ “ವಾಣಿ ಸಮಸ್ಯೆ “ಕಾದಂಬರಿ ಯಲ್ಲಿಯ ದ ರತ್ನ, ವಾಣಿ ದಂಪತಿಗಳು, ಮತ್ತುಪಕ್ಕದ ಮನೆಯ ಇಂದು(ವಿಧವೆ) ಇವರ ಮನದ ತಳಮಳ, ಸ್ನೇಹ ಪ್ರಸಂಗ,ಬಾಳಿನಲ್ಲಿ  ಒಂಟಿತನ ಇತ್ಯಾದಿಗಳನ್ನು ವಿವರಿಸಿದರು. ಕೊನೆಯದಾಗಿ ಶ್ರೀ ಬಸವರಾಜ್ ವಕ್ಕುಂದ  ಮಾವಿನ ತೋಪಿನ (ಶ್ರೀ ಎಚ್ . ಪಿ . ಜೋಷಿ ಯವರ ಕೃತಿ) ನಿರೂಪಣೆ  ಮಾಡುತ್ತಾ ” ಬನು” ಳ  ಮದುವೆ ವೃದ್ಧನಿಗೆ ಮೂರನೆಯ ಲಗ್ನ ಮಾಡಿಕೊಡುತ್ತಾರೆ, ಅವನು ಸತ್ತಾಗ.– ಅವಳು ಸೋಮಾಪುರದ ಮಾವಿನ ತೋಪಿಗೆ  ಹೋದದ್ದು ನಂತರ ಮಾಜಿ ಪ್ರಿಯಕರ  ಭುಜಗರಾಯನ  ಪ್ರವೇಶ ಆಗೀ, ಕಥೆ ಮುಂದುವರೆಯುತ್ತೆ,ಮನದಾಳದ ಆಶೆ,ಕಾಮ ಅರ್ಥ ಗಳ ಕುರಿತಾಗಿ ಬರೆದ ಕೃತಿ ಮನಕ್ಕೆ ತಾಕುತ್ತದೆ,ನಾಲ್ಕು ಜನರು ನೀಡಿದ ಉಪನ್ಯಾಸಗಳಿಂದ , ನಮ್ಮಲ್ಲಿ ಕಾದಂಬರಿಗಳನ್ನು ಓದಬೇಕೆಂಬ   ಹವ್ಯಾಸಉಂಟಾಯಿತು, ಸದರೀ  ಗೋಷ್ಠಿ  ಅರ್ಥಪೂರ್ಣವಾಗಿತ್ತು.
 .
ಗೋಷ್ಠಿ 9– ಲಾವಣಿಯ  ಲಾವಣ್ಯ. 
ಮಧ್ಯಾಹ್ನದ   ಸವಿ ಸವಿ ಭೋಜನದ ನಂತರ ಕುರ್ಚಿಗಳಲ್ಲಿ ಆಸೀನರಾದ ಕೆಲವೊಬ್ಬರು, ನಿದ್ರೆಗೆ ಜಾರಿದ್ದರು. ರುಮಾಲು ಸುತ್ತಿಕೊಂಡು  ಶ್ರೀ ಅನಿಲ ದೇಸಾಯಿ ಯವರು,  ಲಾವಣಿ ಕುರಿತಾಗಿ ವಿವರಣೆ ನೀಡುತ್ತ,ಬಸವರಾಜ ಹಡಗಲಿಯವರನ್ನು ಪರಿಚಯಿಸುತ್ತಾ ಅವರಿಂದ ದೇವರ ಸ್ತುತಿ, ಸಾಹಿತ್ಯ ಸಂಭ್ರಮದ ನಿರ್ವಾಹಕರು, ಕೂಡಿದ ಜನರಿಗೆ ಸ್ವಾಗತ ಗೀತೆಯನ್ನು ಲಾವಣಿ ಧಾಟಿಯಲ್ಲಿ ಹಾಡಿದಾಗ ಅವರ ಲಯಬದ್ಧವಾಗಿ ಬಾರಿಸಿದ  ಡಪ್ಪು  ಹಾಗು ಏಕತಾರಿ ವಾದ್ಯಗಳ ಸದ್ದು ಎಲ್ಲರನ್ನು ಬಡಿದೆಬ್ಬಿಸಿತು.  ಸ್ವಾತಂತ್ರ  ಪೂರ್ವದಲ್ಲಿ ನಡೆದ ಚಳುವಳಿ ವೇಳೆಯಲ್ಲಿ  ಥ್ಯಾಕರೆಯ  ಕಪಟತನ  , ಕಿತ್ತುರ ಚೆನ್ನಮ್ಮಳ ಶೌರ್ಯ ಕುರಿತಾಗಿ  ಶ್ರೀಮತಿ ಯಲ್ಲವ್ವ ಮಾದರ ಪ್ರಸ್ತುತ ಪಡಿಸಿದ ಲಾವಣಿ ವರ್ಣಿಸುವದು ಅಸಾಧ್ಯ , ಅದನ್ನು ಕೇಳಿಯೇ  ಆನಂದಿಸಬೇಕು.
 .
ಸವಾಲ್-ಜವಾಬ ಹರದೇಶಿ  ಮತ್ತು ನಾಗೇಶಿ ಪ್ರಾಕಾರದಲ್ಲಿ   ಗಂಡು ಹೆಚ್ಚೋ? ಹೆಣ್ಣು ಹೆಚ್ಚೋ ? ಕುರಿತಾಗಿ ಇಬ್ಬರೂ  ಹಾಡಿ  ಕೊನೆಗೆ  ಗಂಡು ಹಾಗು ಹೆಣ್ಣು  ಒಬ್ಬರಿಗೊಬ್ಬರು ಪರಿಪೂರಕ ಎಂದು ಸಾರುತ್ತಾ  ನಮ್ಮನ್ನು  ಯಾವುದೋ ಲೋಕಕ್ಕೆ  ಒಯ್ದು ಬಿಟ್ಟರು. ಕಾರ್ಯಕ್ರಮದಲ್ಲಿ ಕಲಾವಿದರಿಗೆ  ಕೆಲವೊಬ್ಬ ರೂ  500 /-ಅಹೇರ  ಮಾಡಿದಾಗ ಇಬ್ಬರೂ ಕಲಾವಿದರು ಕೃತಜ್ಞತೆ ಸಲ್ಲಿಸುತ್ತಾ ಆಹೇರ  ನೀಡಿದವರಿಗೆ ಇನ್ನು ಹೆಚ್ಚಿನ  ಆಹೇರ  ನೀಡುವ  ಮನಸ್ಸು ಅವರಿಗೆ ಬರಲಿ  ಎಂದರು. ಇಲ್ಲಿ ನಿರ್ದೇಶನ ಮಾಡಿದ ಶ್ರೀ ಅನಿಲ ದೇಸಾಯಿ ಯವರು “ಲಾವಣಿ” ಹೇಗೆ ಬಂತು?ಗೀ ಗೀ  ಪದಗಳ  ಮೂಲಕ ಶೃಂಗಾರ,ಕಥಾ ಸಂಗ್ರಹಗಳ ನಿರೂಪಣೆ ಇತ್ತ್ಯದಿಗಳ ಕುರಿತು ಚೆನ್ನಾಗಿ ವಿವರ ನೀಡಿ  ತಮಗೆ ನೀಡಿದ ಸಮಯವನ್ನು ಪರಿಪಾಲಿಸಿದರು.
 .
Sahitigalondige naavu
 .
ಎರಡನೆಯ ದಿನದ  10  ಗೋಷ್ಠಿ — ಸಾಹಿತಿಗಳೊಂದಿಗೆ ನಾವು 
ನಾವೆಲ್ಲ ಇನ್ನೊಂದು ಅಪೂರ್ವ ಗೋಷ್ಠಿಗೆ  ಸಾಕ್ಷಿ ಯಾಗಲು  ತಯಾರಾಗಿ ಕುಳಿತಂತೆ ವೇದಿಕೆಯ ಮೇಲೆ ಘಟಾನುಘಟಿಗಳು ಆಗಮಿಸುತ್ತಿದ್ದಂತೆ  ಸಭಿಕರ ಕರತಾಡನ ಸುರಿಮಳೆ  ಆಯಿತು. ಭಾಗವಹಿಸಿದ 8 ಜನ ಸಂಪನ್ಮೂಲ ಜನರು ತಮ್ಮದೇ ಆದ ರೀತಿಯಲ್ಲಿ  ಸಾಹಿತಿಗಳೊಡನೆ  ಅನುಭವಿಸಿದ ಪ್ರಸಂಗಗಳೆಲ್ಲ ಹಾಸ್ಯಪೂರಿತವಗಿದ್ದವು ಸದರೀ ಕಾರ್ಯಕ್ರಮದ ನಿರ್ದೇಶನಕ್ಕಾಗಿ ಸೂಕ್ತ ವ್ಯಕ್ತಿಯನ್ನು ನಿಯೋಜಿಸಲಾಗಿತ್ತು,, ಅವರೇ  ಶ್ರೀ ಯಶವಂತ ಸರದೇಶಪಾಂಡೆ .ಈ ಮನುಶ್ಯಾ , ಯಾವ ಮುಹೂರ್ತದಾಗ   ಹುಟ್ಟಿದ್ದಾನೋ  ಏನೋ?  ಇಂವಾ  ಏನು ಮಾಡಿದರೂ ,ಏನು ಮಾತಾಡಿದರೂ ನಗೀ ಬರ್ತದ, ಯಶವಂತ್ ಒಂದು ಐಡಿಯಾ ಮಾಡಿ ಉಪ್ಪಿನಕಾಯಿ ಭರಣಿ ತರಸಿ  ಅದರಲ್ಲಿ ಎಲ್ಲರ ಹೆಸರಿನ ಚೀಟಿ ಬರೆದು ಹಾಕಿ ಒಂದೊಂದೇ ಚೀಟಿ ತಗೆದು ಅವರನ್ನು ವೇದಿಕೆಗೆ ಆಹ್ವಾನಿಸುತ್ತಾ ಇದ್ದ ರೀತಿ ವಿಶೇಷ ಅನಸ್ತು.. “ಮ” ಕಾರ ಪ್ರೀಯರಾದ ಮಾಯಾಮೃಗ ನಿರ್ದೇಶಕ ಟಿ. ಎನ್ . ಸೀತಾರಾಮ  ಆಗಮಿಸುತ್ತಿದ್ದಂತೆಯೇ ನಾವೇನು ಅಷ್ಟು ದೂರದಿಂದ ರಾಂಪ್ ವಾಕಿಂಗ್ ಮಾಡಲು ಬಂದಿದ್ದೆವೆಯೇ ?ಕೇವಲ ಐದುವರೆ  ನಿಮಿಷಗಳಲ್ಲಿ ನಾವೇನು ಮಾತಾಡಬೇಕು?? ಎಂದು ಖಾರವಾಗಿ ನುಡಿದರು . ಮುಂದಿನ ವರ್ಷ ಮಿನಿಮಂ 20 ನಿಮಿಷ ಕೊಡಬೇಕೆಂದು ಪ್ರತಿಪಾದಿಸಿದಾಗ, ಸಂಘಟಕರು  ಅಸ್ತು  ಎಂದರು.   ದೇವರು  ಇದ್ದಾನೋ  ಇಲ್ಲೋ ?ಎಂಬ ವಿಷಯದ  ಕುರಿತು ಸಿದ್ದಲಿಂಗಯ್ಯ ಅವರೊಡನೆ ಚರ್ಚಿಸುತ್ತಿರುವಾಗ  ಸಿದ್ದಲಿಂಗಯ್ಯ   ದೇವರನ್ನು  ಸಿಕ್ಕ ಪಟ್ಟೆ  ಬಯ್ದರಂತೆ, ಸ್ಕೂಟಾರ್  ನಲ್ಲಿ ಅವರನ್ನು ರಾತ್ರಿ ಕರೆತರುವಾಗ ಒಂದು ನಾಯಿ ಅವರನ್ನು ಕಚ್ಚಿತಂತೆ,ತಕ್ಷಣ  ಅವರು ಏನು  ಎಂದರು ಗೊತ್ತ ? ನೋಡಿ ನಾವು ಅಲ್ಲಿ   God  ಗೆ ಬಯ್ದೆವು ಅದು ಉಲ್ಟಾ  Dog  ಆಗಿ ನಮಗೆ ಕಚ್ಚಿ ಬಿಟ್ಟಿತು ಎಂದಾಗ ಸಭೆಯಲ್ಲಿ  ನಗೆ  ಚಿಮ್ಮಿತು.
 .
ಶ್ರೀ   ಶ್ರೀನಿವಾಸ ವೈದ್ಯ ,ಬ್ಯಾಂಕ್ ಮ್ಯಾನೇಜರ್   ಇದ್ದಾಗ ನಡೆದ ಘಟನೆ ಸಹ ಹಾಸ್ಯದ ತೆರೆ ಗಳನ್ನು ಎಬ್ಬಿಸಿತು, ಡಾ , ಬೇಂದ್ರೆಯವರಿಗೆ  ಜ್ಞಾನಪೀಠ ಪ್ರಶಸ್ತಿ ಯೊಡನೆ ರೂ 50,000/-ಹಣ  ಬಂದಿತ್ತು, ಅದರಲ್ಲಿ ಅವರ  ಬ್ಯಾಂಕಿಗೆ ಡಿಪೊಜಿಟ್ ಗಾಗಿ  ರೂ  25,000/. ಚೆಕ್ಕು ಕೊಟ್ಟರಂತೆ. ಆಗ ಬೇಂದ್ರೆಯವರ ಗಂಗಾವತರಣ ಕವನ ಕುರಿತು ಮಾತಾಡಲು ಹೋದಾಗ  “ಚೆಕ಼  ಒಯ್ಯಕಾ  ಬಂದೀ, ಸುಮ್ಮನ ತೊಗೊಂಡು ಹೋಗು,, ನಿನಗೇ ನು ತಿಳಿತದ  ಸಾಹಿತ್ಯ’  ಎಂದು ಬಯ್ದು ಕಳಿಸಿದರಂತೆ. ಶ್ರೀ  ಕೊಡ್ಲ ಕೆರೆ ಯವರು ಶ್ರೀ ಲಂಕೇಶ್ ಒಡನಾಟ ಹಂಚಿಕೊಂಡರು. ದಕ್ಷ  ಪೋಲಿಸ ಅಧಿಕಾರಿ  ಶ್ರೀ ರವಿಕಾಂತೆ ಗೌಡ ಧಾರವಾಡದ   ರಾತ್ರಿ ಗಸ್ತಿನ ರಹಸ್ಯ  ಬಯಲು  ಮಾಡುತ್ತ ದಿವಂಗತ ಕಲಬುರ್ಗಿ ಯವರ ನೆನಪು ಮಾಡಿಕೊಂಡರು,ಕಲ್ಬುರ್ಗಿಯವರಿಗೆ ನೀಡಿದ ಪೋಲಿಸ್ ಭದ್ರತೆಗಾಗಿ ಅವರಿಗೆ ಅಸಮಾಧಾನ   ಇತ್ತಂತೆ, ಪೊಲೀಸ ವೃತ್ತಿಯ ಬಗ್ಗೆ ಅವರಿಗಿದ್ದ ಅಂಥಕರಣವೇ ಜೀವಕ್ಕೆ ಮುಳುವಾಯಿತು
 .
ಗೋವಾದ ಕೃಷ್ಣರಾವ್ ವೇದಿಕೆಗೆ   ಭರುತ್ತಲೆ  ನಾವು ಗೋವಾ ಮಂದಿ , ನಮಗ ಬಾಟಲಿ  ಬೇಕ  ಬೇಕು ,(ಬರುವ ಮುನ್ನ ಯಶವಂತರಿಗೆ  ನೀರು ಕೇಳಿದಾಗ  “ಏನು ಬಾಟಲಿ ಬೇಕಾ ” ಎಂಬ ಪ್ರಶ್ನೆಗೆ ಉತ್ತರ)  ಬೀಚಿಯವರೊಡನೆ  ಜರುಗಿದ ಪ್ರಸಂಗ ಹೇಳಿದರು. ಬೀಚಿ ಯವರ ಮನೆಗೆ ಹೋದಾಗ . ಬೀಚಿ ತಮ್ಮ ಹೆಣ್ತಿನ್ನ ಕರದು “ಇಂವಾ  ಗೋವಾ ಬ್ರಾಹ್ಮಣ,. ತೀರ್ಥ ಕುಡದು ಇವನ ಅಂತರಂಗ ಹಾಗು ಬಹಿರಂಗ ಎರಡೂ ಶುದ್ಧ ಆವ, ಪ್ಹುಕಟ್  ಬ್ರಾಹ್ಮಣ ಸಿಕ್ಕನ ಸೋವಿಯೋಳಗ ನಿನ್ನ ಶ್ರಾದ್ಧಾ  ಮುಂಚಿತವಾಗಿ ಮುಗಿಸಿ ಬಿಡೋಣ” ಎಂದಾಗ  ಸಭಿಕರು ನಕ್ಕದ್ದೇ, ನಕ್ಕದ್ದು.
 .
ಎತ್ತಣ ಮಾಮರ ಎತ್ತಣ ಕೋಗಿಲೆ  ಎಂಬಂತೆ, ಕವಿಗೂ ,ರಾಜಕಾರಣಿಗೂ ಹೇಗೆ ಸಂಭಂದ , ಶ್ರೀ Y . S .V ದತ್ತಾ ತಮ್ಮ ಹಾಗು  ಅಡಿಗರ   ನಂಟಿನ  ಕುರಿತಾಗಿ ವಿವರಿಸುತ್ತಾ , 1978 ರಲ್ಲಿ ಜನತಾ ಪಾರ್ಟಿ ವತಿಯಿಂದ ಆರಿಸಿ ಹೋದ ಶಾಸಕನೊಬ್ಬ ಒಂದೇ ತಿಂಗಳಲ್ಲಿ ಪಕ್ಷಾಂತರ ಮಾಡಿದ್ದನ್ನು ಖಂಡಿಸಿ  ಅವನನ್ನು ಆರಿಸಿ ಬಂಡ ವಾರ್ಡಿನಿಂದ ಗಡೀಪಾರು ಮಾಡುವ ಬಗ್ಗೆ ಅಡಿಗರನ್ನು ಭಾಷಣ ಮಾಡಲು ಕರೆದರಂತೆ, ಅಡಿಗರೊಡನೆ,ಕಡಿದಾಳ್ ಮಂಜಪ್ಪ, ಶ್ರೀರಂಗರೂ  ಬಂದರು,   ಅಡಿಗರು ಆ ಶಾಸಕನನ್ನು  ಗಡೀಪಾರು ಮಾಡಿ  ಎಂದು  ಪ್ರಬುದ್ಧ ಪೂರ್ವಕ ಭಾಷಣದ ಮೂಲಕ ಗುಡುಗಿದಾಗ , ಓಡಿ  ಹೋದ ಶಾಸಕ ಇನ್ನೂ ಬಂದಿಲ್ಲವಂತೆ ಆಗ ಸಾಹಿತಿಗಳ ಕರೆಗೆ ಬೆಲೆ ಇತ್ತು ಎಂದು ಉದಾಹರಿಸಿದರು.
ಕೊನೆಗೆ ಹಾಸ್ಯ ಬ್ರಹ್ಮ ಯಶವಂತ,  ಸಭೆ ಮುಕ್ತಾಯ ಮಾಡಲು ಹೊರಟಾಗ  ಸಭಿಕರು ಒಕ್ಕೊರಲಿನಿಂದ ,ಅವರ ಅನುಭವ ತಿಳಿಸಲೇ ಬೇಕೆಂದು ಕೂಗಿಕೊಂಡಾಗ ವಾರ್ತಾ ಹಾಗು ಸಮಾಜ ಕಲ್ಯಾಣ ಅಧಿಕಾರಿ ಶ್ರೀ ವಸ್ತ್ರದ ಮತ್ತು   ಶ್ರೀ ವಾಮನ ಬೇಂದ್ರೆಯವರ ನಡುವೆ ಆದ  ಸಂಭಾಷಣವನ್ನು ಆಂಗಿಕ ರೂಪದಲ್ಲಿ ನಗೆಮಾತುಗಳನ್ನು ಸೇರಿಸಿ ಹೊಟ್ಟೆ ಹುಣ್ಣಾಗುವಂತೆ ನಗಿಸಿ  ಸಮಾರಂಭವನ್ನು ಮುಕ್ತಾಯಗೊಳಿಸಿದರು.
 .
ಗೋಷ್ಠಿ 11, ಶ್ರೀ ಡಿ.ಕೆ ರಾಜೇಂದ್ರ ಹಾಗು ಲೇಖಕ  ಶ್ರೀ   . ಕೃಷ್ಣ ಕುಮಾರ್  ಅವರ ಸಂವಾದ  ಶ್ರೀ ಕೃಷ್ಣಕುಮಾರ ಅವರು , ತಮ್ಮ ಕೃತಿಗಳಿಗೆ ವಸ್ತು ನಿಷ್ಠ ವಿಮರ್ಶೆಗಳು ಬಂದಿಲ್ಲ, ಬಂಡ ವಿಮರ್ಶೆಗಳು ಸರಿಯಾಗಿಲ್ಲ, ಹಾಗು  ದಕ್ಕಬೇಕಾದ ಬೆಲೆ, ಗೌರವ ಸಿಕ್ಕಿಲ್ಲ  ಎಂದು ಖೇದ ವ್ಯಕ್ತ ಪಡಿಸಿದರು,  ಮತ್ತು  ರಾಮಾಯಣ ದರ್ಶನದಂಥ  ಮಹಾಕಾವ್ಯ ಬರಲೇ  ಇಲ್ಲ ಎನ್ನುತ್ತಾ ತಾವೀಗ ” ಮಹಾ ಕಾವ್ಯ’  ಭಾರಾವತಾರ ”  ರಚನೆಗೆ ತೊಡಗಿದ್ದನ್ನು ಪ್ರಸ್ತಾವಿಸಿದರು,. ರಾಜೇಂದ್ರ ಅವರ ಪ್ರಶ್ನೆಗೆ ಉತ್ತರಿಸುತ್ತ, ನನ್ನ ಕಾವ್ಯ ಸಮೃದ್ಧವಾಗಿದೆ  ಆದರೆ ತಕ್ಕ ಮನ್ನಣೆ ದೊರೆತಿ  ಅದಕ್ಕೆ ವ್ಯಾವಹಾರಿಕ  ಕಾರಣಗಳು ಉಂಟೆಂದು
ತಿಳಿಸಿದರು.
Rangageete B Jayashree
 .
ಇಂದಿನ ಕೊನೆಯ ಹಾಗು ಎಲ್ಲರೂ  ಆಸ್ಥೆಯಿಂದ  ಕಾಯ್ದು ಕುಳಿತಿರುವ  ಕಾರ್ಯಕ್ರಮ ಶ್ರೀಮತಿ  ಜಯಶ್ರೀ  ಹಾಗೂ ಅವರ  ತಂಡದಿಂದ  ರಂಗಗೀತೆಗಳ ಪ್ರಸ್ತುತಿ
ಗಜಾನನ ಸ್ತ್ರೋತ್ರದಿಂದ  ಪ್ರಾರಂಭಿಸಿ , ನಾಟಕ ರಂಗದ ವಿವಿಧ ಮಜಲುಗಳ  ವಿವರಣೆ ನೀಡುತ್ತಾ  ಸಾಗಿದ ಯಾತ್ರೆ ಸುಲಲಿತವಾಗಿತ್ತು.   ಸದಾರಮೆ ನಾಟಕದ ಗೀತೆ,ಸೀತೆ ಆರಣ್ಯದಲ್ಲಿ   ತೊಟ್ಟಿಲು ತೂಗುತ್ತ  ಜೋಗುಳ ಹಾಡುತ್ತ  ಲವ-ಕುಷರನ್ನು ಮಲಗಿಸಿದ ಭಾವನೆ, ಶ್ರೀ ಲಂಕೇಶ್ವರನಾದ  ,  ರಾವಣನು   ಆರ್ಭಟ ಪೂರ್ವಕವಾಗಿ ರಂಗ ಮಂಚಕ್ಕೆ  ಆಗಮಿಸಿದ ರೀತಿ, .ಮೀಸೆ  ತಿರುವುತ್ತ ಗತ್ತಿನಲ್ಲಿ ನಡೆದು ಬರುವ ಅವನ ನಡಿಗೆ  ಇತ್ತ್ಯದಿಗಳನ್ನು  ಹಾವ – ಭಾವಗಳೊಂದಿಗೆ ಶ್ರೀಮತಿ ಜಯಶ್ರೀ ಯವರು ತೋರಿಸಿದರು.ನಮಗೆಲ್ಲ ರಾವಣನೆ  ಮುಂದೆ ಬಂದು ನಿಂತಂತಾಗಿತ್ತು ಇವಲ್ಲದೆ. ಕಂದ  ಪದ್ಯ, ಶೀಶ್ ಪದ್ಯ ಗಳು. ತಬಲಾ ಮತ್ತು ಪೇಟಿ ಅವರೊಡನೆ  ಹಾಡಿನ  ಮೂಲಕ ಸಂವಾದ  ನಡಿಸಿದ್ದು ಅಪೂರ್ವ ದೃಶ್ಯಗಳಾಗಿದ್ದವು ಇವರ ರಂಗಗೀತೆಗಳನ್ನು  ಬೆಳತನಕ ಕೇಳಿದರು. ಸಮಾಧಾನವಾಗೂದಿಲ್ಲ .
.
ಅಂತೂ ಎರಡನೆಯ ದಿನದ ಎಲ್ಲ ಕಾರ್ಯಕ್ರಮಗಳು  ಸಾಂಗವಾಗಿ ಜರುಗಿ,  ಎಲ್ಲವನ್ನು ಮೆಲಕು ಹಾಕುತ್ತ ಗೂಡಿನೆಡೆಗೆ  ಸಾಗಿದೆವು.
( ಮುಂದುವರಿಯುವುದು)
‘ 
– ರಂಗಣ್ಣ ಕೆ. ನಾಡಗೀರ್ 
ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ :      ಧಾರವಾಡದ ಸಾಹಿತ್ಯ ಸಂಭ್ರಮ – ಭಾಗ 1
,

1 Response

  1. Shruthi Sharma says:

    ಸುಂದರ ನಿರೂಪಣೆ. ಸಾಹಿತ್ಯ ಸಂಭ್ರಮದ ಎರಡನೆಯ ದಿನಕ್ಕೂ ಸಾಕ್ಷಿಯಾದ ಅನುಭವ, ಹಾಸ್ಯದ ಪ್ರಸ್ತುತಿ ಓದಿದ್ದು ನಗು ತರಿಸಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: