ಲೆಕ್ಕಾಚಾರದ ಗುಟುಕಾ
ಲೆಕ್ಕ ನೋಡಿದ್ದಲ್ಲ
ಟೀವೀಲಿ ಪಾಕಶಾಲೆ ;
ಬಗೆ ಬಗೆ ಸರಕು
ನೋಡಿ ಮಾಡಿದ್ದು..
ಭಾಷೆ ಕಲಿತಿದ್ದಲ್ಲ
ಶುಲ್ಕ ಕಟ್ಟಿ ಸ್ಕೂಲಲಿ;
ಬಗೆ ಬಗೆ ಮಾತು
ಕಲಿತು ಆಡಿದ್ದು…
ಕಿರಾಣಿ ತಂದಿದ್ದಲ್ಲ ಲೆಕ್ಕ
ಸರಕು ಸಾಲಾಸೋಲ;
ಬಗೆಬಗೆಯಡಿಗೆ ಬಳಕೆ
ತಂದು ಮಾಡಿದ್ದು, ಮಿಗಿಸಿದ್ದು..
ಪಟಪಟ ಬರೆದಿದ್ದಲ್ಲ ಲೆಕ್ಕ
ಬರವಣಿಗೆ ಮನೆಹಾಳ;
ಬರೆದ ಬಗೆಯಾ ಬರಹ
ಓದಿದ್ದೆಷ್ಟು ಅರಗಿ ಕರಗಿದ್ದೆಷ್ಟು..
ಸುರಿ ಮಾತು ಆಡಿದ್ದಲ್ಲ ಲೆಕ್ಕ
ಬರಿ ಮಾತು ಮನೆ ಹಾಳು;
ಬಣ್ಣದ ಮಾತು ಕರಗೆ
ಕೃತಿಯಲ್ಲೆಷ್ಟು, ವಿಕೃತಿ ಕಳೆದಿದ್ದೆಷ್ಟು..
– ನಾಗೇಶ ಮೈಸೂರು