ಬಿಡುಗಡೆಯ ಬೇಲಿ
ಹರೆಯದ ತುಂಬೆಲ್ಲಾ ಕಲ್ಪನೆಯ ಮಾಲೆ ನನ್ನವನು ಬರುತಾನೆ ಚಂದಿರನ ಹಾಗೆ ಸುಡುವನೆತ್ತಿಯ ತಂಪೆರೆದು ಕೊಡುತಾನೆ ಬಾಳುವೆ, ನಾ ಬಯಸಿದ ಹಾಗೆ..! ನನ್ನಂದಕೆ ಸೋತನೋ, ನಾನವಗೆ ಸೋತೆನೋ ಎನ್ನೊಡಲ ತುಂಬೆಲ್ಲಾ ಅವನದೇ ಹುಚ್ಚು ವರಿಸಿದಾತನೇ ಅನ್ನದಾತನು, ಪ್ರಾಣನಾಥನು ಪ್ರೀತಿಯಿಂದಲಿ ಪಡೆದೆ ನಮ್ಮದೇ ಪಡಿಯಚ್ಚು…! ಮದುವೆಯೆಂದರೆ ಒಂಟಿಜೀವನದಿಂದ ಹಾರಾಡುವ ಬಾನಾಡಿ ಜೋಡಿಅಂದಿದ್ದೆ; ಮೊದಮೊದಲು ತೇಲಾಡಿ ಬಿದ್ದುಬಿಟ್ಟೆ ಬಂಧನದಿಂದ ಚೌಕ್ಕಟ್ಟಿನೊಳಗೆ ಮರೆಯಾಗಿಬಿಟ್ಟೆ…! ಅತ್ತೆಯಗತ್ತು, ಮಾವನಶಿಸ್ತು ಪತಿಯೂ ಮರುಮಾತಿಲ್ಲದ ಸಿಪಾಯಿ ಧನಕನಕದ ರಾಶಿ, ಸಿರಿವಂತಿಕೆ ಶೋಕಿ ನಾನೋ ಪಂಜರದ ಹಕ್ಕಿ….! ಮತ್ತದೇ ಕನಸುಗಳ ಉಯ್ಯಾಲೆ ಬೇಲಿ ದಾಟುವ ಆಸೆ; ಮೌನ ಮುರಿಯುವ ತವಕ ಸ್ವತಂತ್ರಳಾಗುವ ತನಕ….! -ಅಶೋಕ್ ಮಿಜಾರ್ +120
ನಿಮ್ಮ ಅನಿಸಿಕೆಗಳು…