ಬಿಡುಗಡೆಯ ಬೇಲಿ
ಹರೆಯದ ತುಂಬೆಲ್ಲಾ ಕಲ್ಪನೆಯ ಮಾಲೆ
ನನ್ನವನು ಬರುತಾನೆ ಚಂದಿರನ ಹಾಗೆ
ಸುಡುವನೆತ್ತಿಯ ತಂಪೆರೆದು ಕೊಡುತಾನೆ
ಬಾಳುವೆ, ನಾ ಬಯಸಿದ ಹಾಗೆ..!
ನನ್ನಂದಕೆ ಸೋತನೋ, ನಾನವಗೆ ಸೋತೆನೋ
ಎನ್ನೊಡಲ ತುಂಬೆಲ್ಲಾ ಅವನದೇ ಹುಚ್ಚು
ವರಿಸಿದಾತನೇ ಅನ್ನದಾತನು, ಪ್ರಾಣನಾಥನು
ಪ್ರೀತಿಯಿಂದಲಿ ಪಡೆದೆ ನಮ್ಮದೇ ಪಡಿಯಚ್ಚು…!
ಮದುವೆಯೆಂದರೆ ಒಂಟಿಜೀವನದಿಂದ
ಹಾರಾಡುವ ಬಾನಾಡಿ ಜೋಡಿಅಂದಿದ್ದೆ;
ಮೊದಮೊದಲು ತೇಲಾಡಿ ಬಿದ್ದುಬಿಟ್ಟೆ
ಬಂಧನದಿಂದ ಚೌಕ್ಕಟ್ಟಿನೊಳಗೆ ಮರೆಯಾಗಿಬಿಟ್ಟೆ…!
ಅತ್ತೆಯಗತ್ತು, ಮಾವನಶಿಸ್ತು
ಪತಿಯೂ ಮರುಮಾತಿಲ್ಲದ ಸಿಪಾಯಿ
ಧನಕನಕದ ರಾಶಿ, ಸಿರಿವಂತಿಕೆ ಶೋಕಿ
ನಾನೋ ಪಂಜರದ ಹಕ್ಕಿ….!
ಮತ್ತದೇ ಕನಸುಗಳ ಉಯ್ಯಾಲೆ
ಬೇಲಿ ದಾಟುವ ಆಸೆ;
ಮೌನ ಮುರಿಯುವ ತವಕ
ಸ್ವತಂತ್ರಳಾಗುವ ತನಕ….!
ಕವಿತೆ ಚೆನ್ನಾಗಿದೆ .-ಸ್ಮಿತಾ
excellent Ashok. You have great amount of compassion and empathy.
ನಾನೋ ಪಂಜರದ ಹಕ್ಕಿ .-ಬೇಲಿ ದಾಟುವ ಆಸೆ.ಮೌನ ಮುರಿಯುವ ತವಕ .ಸಾಲುಗಳು ಮನ ಮುಟ್ಟುತ್ತದೆ .ಆಸೆಗಳೆಲ್ಲ ಮುರಿದಾಗ ಕನಸು ಮಾತ್ರ ಉಳಿಯುತ್ತದೆ .ಒಳ್ಳೆಯ ಹಿಡಿತವಿದೆ ಭಾಷೆಯ ಮೇಲೆ .ಇನ್ನೂ ಓದಬೇಕು ಹೊಸತು ಕವನ. ಬರೆಯುತ್ತೀರಲ್ಲವಾ ?
Very well written…