Author: Vijaya Subrahmanya
ಬದುಕಿನಲ್ಲಿ ಅತೀವ ಕಷ್ಟಕೋಟಲೆಗಳು ಎದುರಾದಾಗ ಹೇಳುವ ಮಾತಿದೆ. ‘ನಾನು ಈ ಜನ್ಮದಲ್ಲಿ ಯಾರಿಗೂ ಯಾವ ದ್ರೋಹವನ್ನೂ ಮಾಡಿಲ್ಲ. ಆದರೂ ನನಗೆ ಯಾಕೆ ಇಂತಹ ಶಿಕ್ಷೆ?’ ಎಂದು ಪರಿತಪಿಸುವವರನ್ನು ಕಾಣುತ್ತೇವೆ. ಹೌದು, ಜನ್ಮಾಂತರದ ಒಂದಿನಿತು ಪಾಪದ ಲೇಶವಿದ್ದರೂ ಈ ಜನ್ಮದಲ್ಲಿ ಅದಕ್ಕನುಗುಣವಾಗಿ ಕಷ್ಟಪಡಬೇಕಾದ ಸಂದರ್ಭ ಬರಬಹುದು. ಹಾಗೆಯೇ ‘ಋಣಾನುಬಂಧ...
‘ವಿದ್ಯಾವಿಹೀನಃ ಪಶುಃ’ ವಿದ್ಯೆ ಇಲ್ಲದವನು ಪಶುವಿಗೆ ಸಮಾನನೆಂಬ ಸೂಕ್ತಿ ಇದೆ. “ವಿದ್ಯೆ ಉಳ್ಳವನ ಮುಖವು ಮುದ್ದು ಬರುವಂತಿಕ್ಕು. ‘ವಿದ್ಯೆ ಇಲ್ಲದವನ ಬರಿಮುಖವು ಹಾಳೂರ ಹದ್ದಿನಂತಿಕ್ಕು’ ಎಂಬುದು ಸರ್ವಜ್ಞನ ವಚನ. ಮೇಲಿನ ಮಾತುಗಳೆಲ್ಲ ವಿದ್ಯೆ ಮಹತ್ವ, ಅಗತ್ಯಗಳನ್ನು ಸಾರುವ ಹಿತೋಕ್ತಿಗಳು. ಕಾರಣ ವಿದ್ಯೆ ಇಲ್ಲದವನು ಅನ್ಯರಿಂದ ಅಪಮಾನಿಸಲ್ಪಡುತ್ತಾನೆ. ವಂಚಿಸಲ್ಪಡುತ್ತಾನೆ....
ಈ ಜಗತ್ತಿನಲ್ಲಿ ಉತ್ತಮರು, ಮಧ್ಯಮರು, ಅಧಮರು (ರಾಕ್ಷಸ ಪ್ರವೃತ್ತಿಯವರು) ಹೀಗೆ ಮಾನವರು ಆವರವರ ಗುಣಧರ್ಮಕ್ಕನುಸಾರ ಆಗಿ ಹೋಗಿದ್ದಾರೆ. ಯಾವುದೋ ಸನ್ನಿವೇಶದಿಂದ ಒಳ್ಳೆಯವರು ಕೆಟ್ಟವರಾಗಬಹುದು ಕೆಟ್ಟವರು ಒಳ್ಳೆಯವರಾಗಬಹುದು. ಹಾಗೆಯೇ ಒಳ್ಳೆಯವರ ಹೊಟ್ಟೆಯಲ್ಲಿ ಕೆಟ್ಟವರು ಹುಟ್ಟಬಹುದು. ಕೆಟ್ಟವರಿಂದ ಒಳ್ಳೆಯವರ ಜನನವೂ ಆದ ದೃಷ್ಟಾಂತಗಳಿವೆ. ತಮ್ಮ ಒಳ್ಳೆಯತನದಿಂದ ಕೆಟ್ಟವರನ್ನು ಒಳ್ಳೆಯವರನ್ನಾಗಿಯೂ ಮಾಡಬಹುದು....
ಪುರಾಣ ಕಾಲದಲ್ಲಿ ದೇವತೆಗಳು ಹಾಗೂ ರಾಕ್ಷಸರಿಗೆ ಆಗಾಗ ಯುದ್ಧ ನಡೆಯುತ್ತಲೇ ಇತ್ತು. ಶುಕ್ರಾಚಾರ್ಯರಿಂದ ರಾಕ್ಷಸರಿಗೆ ಮೃತಸಂಜೀವಿನಿ ವಿದ್ಯೆ ತಿಳಿದಿತ್ತು. ಇದರಿಂದಾಗಿ ನಿಧನ ಹೊಂದಿದ ರಾಕ್ಷಸರು ಪುನರಪಿ ಬದುಕಿ ಬರುತ್ತಿದ್ದರು. ದಾನವರ ಮುಖಂಡನಾದ ವೃತ್ತಾಸುರನನ್ನು ಇಂದ್ರನು ವಧೆ ಮಾಡಿದ ಮೇಲೆ ಕಾಲೇಯರೆಂಬ ಕ್ರೂರ ಅಸುರರು ಅಡಗಿ ಕುಳಿತು ರಾತ್ರಿಯಾಗುತ್ತಲೇ...
ಯಾರೋ ಮೂರನೆ ವ್ಯಕ್ತಿಯ ವಿಷಯದಲ್ಲಿ ಇಬ್ಬರು ಪರಸ್ಪರ ವಾದ ಮಾಡುತ್ತಾರೆ. ಆ ವಾದ ವಿವಾದವಾಗಿ ವಿವಾದವಾಗಿ ಸಾಕಷ್ಟು ಚರ್ಚೆಯಾಗಿ ವಿಕೋಪಕ್ಕೆ ತಿರುಗಿ ಮೈಮನಸ್ಯ, ಹಳೆದ್ವೇಷ, ಪೂರ್ವಾಗ್ರಹಗಳಿಂದ ಪೀಡಿತರಾಗಿ ಕೆರಳಿ ಕೆಂಡವಾಗುವುದು, ಶಾರೀರಕ ಮಾನಸಿಕ ಪೆಟ್ಟುಗಳೂ ಆಗಿ ಕೊನೆಗೊಳ್ಳುವುದು ಇವುಗಳೆಲ್ಲ ಪ್ರಸ್ತುತ ಸಮಾಜದಲ್ಲಿ ಕಾಣಿಸುವ ವಿದ್ಯಮಾನಗಳೆಂದು ನಾವು...
ಎಲ್ಲಾ ಜೀವಿಗಳಿಗೂ ಹುಟ್ಟು ಸಾವುಗಳಿರುವ ಆದಿ-ಅಂತ್ಯಗಳೆಂಬ ಸ್ಥಿತಿಗಳಿವೆ. ಆದ್ಯಂತರವಿಲ್ಲದವನೆಂದರೆ ಪರಮಾತ್ಮನೊಬ್ಬನೇ. ಮಾನವ ಕುಲಕ್ಕೂ ಮೂಲ ಪುರುಷನೆಂಬ ಒಬ್ಬನಿದ್ದನು. ಆತನೇ ಮನು ಎಂಬ ಹೆಸರಿನಿಂದ ಕರೆಯಲ್ಪಡುವವನು. ಮನುವಿನ ಅಧಿಕಾರ ಕಾಲವನ್ನು ಮನ್ವಂತರಎಂದು ಕರೆಯಲಾಗುತ್ತದೆ. ಮನ್ವಂತರಗಳನ್ನು ನಡೆಸಿದ ಹಲವು ಮನುಗಳಿದ್ದಾರೆ. ಯಾವ ಮನುವಿನ ಕಾಲವೋ ಆತನ ಹೆಸರಿನಿಂದ ಮನ್ವಂತರಗಳನ್ನು ಗುರುತಿಸಲಾಗುತ್ತದೆ....
ನಮಗೆ ಯಾವುದೇ ಕಾಯಿಲೆ ಬಂದಾಗ ವೈದ್ಯರಲ್ಲಿಗೆ ಧಾವಿಸುತ್ತೇವೆ. ವೈದ್ಯ ನಾರಾಯಣೋ ಹರಿ: . ವೈದ್ಯರೊಡನೆ ನಮ್ಮ ರೋಗದ ಮಾಹಿತಿ ಒಪ್ಪಿಸಿದ ಮೇಲೆ ವಿಶ್ವಾಸದಿಂದ ಸಂಪೂರ್ಣ ಭಾರವನ್ನು ಅವರ ಮೇಲೆ ಹಾಕುತ್ತೇವೆ. ಅಂತೆಯೇ ಯಾವುದೇ ಶುಭಾಶುಭ ಕಾರ್ಯಗಳಿಗೆ ಕುಲಪುರೋಹಿತರು ಬೇಕು. ಅವರನ್ನು ಗುರುಗಳೆಂದು ಮೊದಲ ಆದ್ಯತೆ ಕೊಡಲಾಗುತ್ತದೆ....
ಪುರಾಣ ಕಾಲದಲ್ಲಿ ಋಷಿಮನಿಗಳು ಕಾನನದಲ್ಲಿ, ನದೀ ತೀರದಲ್ಲಿ ಆಶ್ರಮ ಅಥವಾ ಕುಟೀರ ಕಟ್ಟಿಕೊಂಡು ತಪಸ್ಸನ್ನಾಚರಿಸುತ್ತಿದ್ದರಂತೆ ಇಂತಹ ತಪಸ್ಸು ಕುಳಿತು, ನಿಂತು, ಒಂಟಿಕಾಲಿನಲ್ಲಿ ಹೀಗೆ ವಿವಿಧ ಭಂಗಿಗಳಲ್ಲಿ ಅವರ ಗುರಿ ಸಾಧಿಸುವ ತನಕ ಹಲವಾರು ವರ್ಷಗಳೇ ಮುಂದುವರಿಸುತ್ತಿಸ್ಸರಂತೆ. ವಾಲ್ಮೀಕಿ, ಚ್ಯವನ ಮೊದಲಾದ ಋಷಿಗಳು ಹೀಗೆ ಘೋರ ತಪಸ್ಸಿನಿಂದ ತಮ್ಮ...
ಋಷಿ ಮುನಿಗಳು ತಪಸ್ಸು ಮಾಡುತ್ತಾರೆ. ತಪಸ್ಸು ಮಾಡುವುದೆಂದರೆ ಕಣ್ಣು ಮುಚ್ಚಿ, ಮೂಗು ಹಿಡಿದು ಕೂರುವುದಲ್ಲ, ಸತ್ಕಾರ್ಯಕ್ಕಾಗಿ, ಸತ್ ಚಿಂತನೆಯಲ್ಲಿ, ಗುರಿಸಾಧಿಸುವ ಯಜ್ಞ (ಕೆಲಸ)ವೇ ತಪಸ್ಸು, ಋಷಿಗಳಲ್ಲಿ ದೇವರ್ಷಿ, ಬ್ರಹ್ಮರ್ಷಿ, ರಾಜರ್ಷಿ ಎಂಬುದಾಗಿ ಮೂರು ವಿಧ .ದೇವಲೋಕದ ಋಷಿಗಳನ್ನು ದೇವರ್ಷಿಗಳೆಂದೂ, ಬ್ರಾಹ್ಮಣ ಋಷಿಮುನಿಗಳನ್ನು ಬ್ರಹ್ಮರ್ಷಿ ಎಂದೂ ಕ್ಷತ್ರಿಯ ಕುಲದ...
ರಾತ್ರಿವೇಳೆ ಆಕಾಶದಲ್ಲಿ ಏಳು ನಕ್ಷತ್ರಗಳ ಸಮೂಹವನ್ನು ಕಾಣುತ್ತೇವೆ. ಈ ಸಪ್ತಋಷಿ ಮಂಡಲವನ್ನು ನೋಡುವುದರಿಂದ ಅಂದಿನ ಪಾಪ ಪರಿಹಾರ ಎಂದು ಹಿರಿಯರಿಂದ ಕೇಳಿದ್ದೇವೆ. ಅಲ್ಲಿ ಕಾಣುವ ಸಪ್ತಋಷಿಗಳೆಂದರೆ ಯಾರೆಲ್ಲ.?.. ಅವರೇ ಕಶ್ಯಪ, ಅತ್ರಿ, ಭಾರದ್ವಾಜ, ವಸಿಷ್ಠ, ವಿಶ್ವಾಮಿತ್ರ, ಜಮದಗ್ನಿ, ಗೌತಮ, ಇವರು ಗೋತ್ರ ಪ್ರವರ್ತರು, ಸಪ್ತಋಷಿಗಳ ಹೆಸರಿನಲ್ಲಿ ಸಪ್ತಗೋತ್ರಗಳು,...
ನಿಮ್ಮ ಅನಿಸಿಕೆಗಳು…