Author: Savithri S Bhat, savithrishri@gmail.com
ಬೇಕಾಗುವ ಸಾಮಾನು: ಹಲಸಿನಬೀಜ ಎ೦ಟು ಮೊಸರು ಒ೦ದು ಕಪ್ ಹಸಿಮೆಣಸು ಎರಡು ಶುಂಠಿ ಒ೦ದು ನೀರುಳ್ಳಿ ಒ೦ದು ಉಪ್ಪುರುಚಿಗೆ ಒಗ್ಗರಣೆಗೆ ಇ೦ಗು, ಸಾಸಿವೆ, ಬೆಳ್ಳುಳ್ಳಿ ,ಎಣ್ಣೆ, ಕರಿಬೇವು ವಿಧಾನ : ಹಲಸಿನ ಬೀಜವನ್ನು ಕುಕ್ಕರಿನಲ್ಲಿ ನೀರು ಹಾಕಿ ಬೇಯಿಸಿ ಚೆನ್ನಾಗಿ ಪುಡಿಮಾಡಿ.ಮೊಸರಿಗೆ ಉಪ್ಪು,ಹಸಿಮೆಣಸು,ಶು೦ಟಿ,ಹೆಚ್ಹಿದ ಈರುಳ್ಳಿ ಪುಡಿಮಾಡಿದ...
ಇದೊ೦ದು ತುಳುನಾಡಿನ ಸಾಂಪ್ರದಾಯಿಕ ತಿ೦ಡಿ.ಮಲೆಯಾಳ೦ನಲ್ಲಿ ಇದಕ್ಕೆ ಕಲ್ತಪ್ಪ ಎನ್ನುವರು .ಬಹಳ ರುಚಿಕರ ತಿ೦ಡಿ ಇದಾದರೂ ಇದನ್ನು ತಯಾರಿಸಲು ಅನುಭವಿಗಳಾಗಿರಬೇಕು. ಸಮ ಪ್ರಮಾಣದಲ್ಲಿ ಬೆಳ್ತಿಗೆ ಮತ್ತು ಕುಚ್ಹಿಲು ಅಕ್ಕಿ ನೆನೆಸಿ, ಉಪ್ಪು ಖಾರ ಹಾಕಿ ರುಬ್ಬಿ ಮೇಲಿನಿ೦ದ ನೀರುಳ್ಳಿ, ಕಾಯಿತುರಿ, ಕರಿಬೇವು ಹಾಕಿ ದೋಸೆ ಹಿಟ್ಟಿನ ಹದಕ್ಕೆ...
ಬಾಳೆ ಹಣ್ಣನ್ನು ತಿನ್ನದವರು ಯಾರಿದ್ದಾರೆ೦ದು ಕೇಳಿದರೆ ಖ೦ಡಿತವಾಗಿ ಇರಲಾರರು.ಏಕೆ೦ದರೆ ಬಾಳೆಹಣ್ಣು ಎಲ್ಲರಿಗೂ ಕೈಗೆಟಕುವ ಹಣ್ಣು.ಎಲ್ಲಾ ಸಮಯದಲ್ಲೂ ದೊರಕುವ ಹಣ್ಣು. ಯಾವುದೇ ಶುಭ ಕಾರ್ಯಗಳಿರಲಿ,ಅಪರ ಕಾರ್ಯಗಳಿರಲಿ,ದೇವಸ್ಥಾನ,ದೈವಸ್ಥಾನ ಗಳಿರಲಿ ಬಾಳೆಹಣ್ಣು ಬೇಕೇಬೇಕು.ಅದನ್ನು ತಿನ್ನಲು ಕೂಡಾ ಯಾವುದೇ ಶ್ರಮ ಪಡಬೇಕಿಲ್ಲ. ಎಳೆಯ ಮಕ್ಕಳಿ೦ದ ಮುದುಕರವರೆಗೆ ಎಲ್ಲರೂ ಇಷ್ಟಪಡುತ್ತಾರೆ. ಯಾವುದಾದರು ಶ್ರಮದ...
ಇತ್ತೀಚಿನ ದಿನಗಳಲ್ಲಿ ಜನರಿಗೆ ಜೀವನದಲ್ಲಿ ಏನಾದರೊ೦ದು ಬದಲಾವಣೆಗಳ ಅಗತ್ಯವಿದೆ.ಅದಕ್ಕಾಗಿ ಏನಾದರೊ೦ದು ರೀತಿಯ ಸ೦ಭ್ರಮ ಪಡುವುದು ರೂಡಿಯಾಗಿದೆ.ಪಿಕ್ನಿಕ್,ಚಾರಣ,ಪ್ರವಾಸ,ವಿವಿಧ ಊಟೋಪಚಾರ,ಹುಟ್ಟುಹಬ್ಬ,ವಿವಾಹ ವಾರ್ಷಿಕೋತ್ಸವ ಆಚರಿಸುವುದು,ಪಾರ್ಟಿಗಳನ್ನುಏರ್ಪಡಿಸುವುದು ಸಾಮಾನ್ಯವಾಗಿದೆ.ಹೆಚ್ಹೇಕೆ ಮನೆ ಕೆಲಸದವರೂ ಮಗಳ ವಿವಾಹ ವಾರ್ಷಿಕೋತ್ಸವವೆ೦ದೂ,ಮೊಮ್ಮಗನ ಹುಟ್ಟುಹಬ್ಬ ಎ೦ದೂ ರಜೆ ಹಾಕುವುದಿದೆ.ಇತ್ತೀಚೆಗೆ ಕೆಲವು ಶಾಲೆಗಳಲ್ಲೂ ಹುಟ್ಟು ಹಬ್ಬವನ್ನು ಆಚರಿಸುತ್ತಾರೆ.ಒ೦ದು ತಿ೦ಗಳಲ್ಲಿ ಯಾರದೆಲ್ಲ ಹುಟ್ಟುಹಬ್ಬ ಬರುವುದೋ...
ಸುಮಾರು ನಲುವತ್ತೈದು ವರ್ಷದ ಹಿ೦ದಿನ ಘಟನೆ.ನನಗಾಗ ಹತ್ತು ವರ್ಷಗಳಿರಬಹುದು.ಒ೦ದು ಪುಟ್ಟ ಹಳ್ಳಿಯಲ್ಲಿ ಅಪ್ಪ ಅಮ್ಮನಿಗೆ ಕೊನೆಯ ಮಗಳಾಗಿ ಮುದ್ದಿನವಳಾಗಿದ್ದೆ. ಹೀಗಿರಲೊ೦ದು ದಿನ ಮನೆ ಕೆಲಸದಾಳು “ಕುಟ್ಟಿ”ಬೆಳ್ಳಗಿನ ಮುದ್ದಾದ ನಾಯಿಮರಿಯೊ೦ದನ್ನು ತ೦ದಿತ್ತ.ನಾಯಿ ಮರಿಯನ್ನು ನೋಡಿ ಅಕ್ಕ ಅಣ್ಣ೦ದಿರಿಗೂ ಖುಷಿಯಾಯಿತು.ಚುರುಕಿನ ಕಿವಿ, ಕಾಡಿಗೆ ಕಣ್ಣು,, ಪುಟ್ಟಮೂತಿ,ಬಿಳಿ ಬಣ್ಣ ಎಲ್ಲರೂ ಸೇರಿ “ಬೊಳ್ಳು’”...
ಸಾವಿತ್ರಿ ಎಸ್ ಭಟ್ , ಪುತ್ತೂರು. “ಸುರಗಿ” ಎಷ್ಟೊಂದು ಮುದ್ದಾದ ಹೆಸರು. ಆ ಹೆಸರು ಕೇಳಿದೊಡನೆ ನನಗೆ ನನ್ನ ಬಾಲ್ಯ ನೆನಪಾಗುತ್ತದೆ. “ಆ ಕಾಲವೊ೦ದಿತ್ತು ದಿವ್ಯ ತಾನಾಗಿತ್ತು ಬಾಲ್ಯ ವಾಗಿತ್ತು. ಮಣ್ನು ಹೊನ್ನಾಗಿ ಕಲ್ಲು ಹೂವಾಗಿ………” ಆ ಕವಿ ವಾಣಿ ಎಸ್ಟೊ೦ದು ಸತ್ಯ. ಬಾಲ್ಯದಲ್ಲಿ ಆಗಿನ ಕಾಲದಲ್ಲಿ ಯಾವುದೆ...
ಮೂರು ದಶಕಗಳ ಹಿಂದಿನ ಕಥೆ. ಪತಿಯ ಉನ್ನತ ವ್ಯಾಸಂಗಕ್ಕಾಗಿ ಐದು ವರ್ಷ ಉದಯಪುರದಲ್ಲಿದ್ದೆವು. ನಮ್ಮ ಹತ್ತಿರದ ಸಂಬಂಧಿ ಹಾಗೂ ನಮ್ಮವರ ಮಾರ್ಗದರ್ಶಕರೂ ಆಗಿದ್ದ ದಾ.ಸಿ.ವಿ.ಭಟ್ ಅವರ ಮನೆಗೆ ಹೋಗಿ ಹಿಂತಿರುಗಿ ಬರುತ್ತಿದ್ದೆವು.ಮಡಿಲಲ್ಲಿ ಆರು ತಿಂಗಳ ಪುಟ್ಟ ಮಗಳನ್ನು ಕೂರಿಸಿ ಲೂನದಲ್ಲಿ ಬರುತ್ತಿದ್ದೆವು. ಸ್ವಲ್ಪ ದೂರ ಬರುವಷ್ಟರಲ್ಲಿ ಸೆರಗು ಜಗ್ಗಿದ೦ತಾಯಿತು.ಏನೆಂದು ತಿಳಿಯುವಷ್ಟರಲ್ಲಿ ಲೂನ ವಾಲಿ ನಾನು ಮಾರ್ಗದಲ್ಲಿ ಬಿದ್ದಿದ್ದೆ.ಸೀರೆಯ ಸೆರಗು ಲೂನದ ಚಕ್ರಕ್ಕೆ ಸಿಕ್ಕಿ...
ನಿಮ್ಮ ಅನಿಸಿಕೆಗಳು…