Author: Ashok K G Mijar, ashokkg18@yahoo.in
ಹರೆಯದ ತುಂಬೆಲ್ಲಾ ಕಲ್ಪನೆಯ ಮಾಲೆ ನನ್ನವನು ಬರುತಾನೆ ಚಂದಿರನ ಹಾಗೆ ಸುಡುವನೆತ್ತಿಯ ತಂಪೆರೆದು ಕೊಡುತಾನೆ ಬಾಳುವೆ, ನಾ ಬಯಸಿದ ಹಾಗೆ..! ನನ್ನಂದಕೆ ಸೋತನೋ, ನಾನವಗೆ ಸೋತೆನೋ ಎನ್ನೊಡಲ ತುಂಬೆಲ್ಲಾ ಅವನದೇ ಹುಚ್ಚು ವರಿಸಿದಾತನೇ ಅನ್ನದಾತನು, ಪ್ರಾಣನಾಥನು ಪ್ರೀತಿಯಿಂದಲಿ ಪಡೆದೆ ನಮ್ಮದೇ ಪಡಿಯಚ್ಚು…! ಮದುವೆಯೆಂದರೆ ಒಂಟಿಜೀವನದಿಂದ ಹಾರಾಡುವ ಬಾನಾಡಿ ಜೋಡಿಅಂದಿದ್ದೆ; ಮೊದಮೊದಲು ತೇಲಾಡಿ ಬಿದ್ದುಬಿಟ್ಟೆ ಬಂಧನದಿಂದ ಚೌಕ್ಕಟ್ಟಿನೊಳಗೆ ಮರೆಯಾಗಿಬಿಟ್ಟೆ…! ಅತ್ತೆಯಗತ್ತು, ಮಾವನಶಿಸ್ತು ಪತಿಯೂ ಮರುಮಾತಿಲ್ಲದ ಸಿಪಾಯಿ ಧನಕನಕದ ರಾಶಿ, ಸಿರಿವಂತಿಕೆ ಶೋಕಿ ನಾನೋ ಪಂಜರದ ಹಕ್ಕಿ….! ಮತ್ತದೇ ಕನಸುಗಳ ಉಯ್ಯಾಲೆ ಬೇಲಿ ದಾಟುವ ಆಸೆ; ಮೌನ ಮುರಿಯುವ ತವಕ ಸ್ವತಂತ್ರಳಾಗುವ ತನಕ….! -ಅಶೋಕ್ ಮಿಜಾರ್ +120
ಸಾವಿರಾರು ಜನ ಸೇರಿರುವ ಒಂದು ಸನ್ಮಾನ ಸಮಾರಂಭ. ಕಾರ್‍ಯಕ್ರಮ ನಿರೂಪಕಿ ಹೇಳುತ್ತಾಳೆ, “ಇವತ್ತು ನಮ್ಮ ‘ತಿಪ್ಪೇ ಹಳ್ಳಿ’ ವಿಶ್ವದಾದ್ಯಂತ ಗುರುತಿಸಿಕೊಂಡಿದೆ. ಅದಕ್ಕೆ ಕಾರಣ ‘ಮಹದೇವಪ್ಪ’ ಅವರ ಸಮಾಜಸೇವೆ. ರಾಷ್ಟ್ರಪ್ರಶಸ್ತಿ ಪಡೆದ ಅವರ ಸಂಸ್ಥೆ ಇಂದು ಎಲ್ಲರಿಗೂ ಮಾದರಿಯಾಗಿದೆ. ಈಗ ನಮ್ಮನ್ನುದ್ದೇಶಿಸಿ ಅವರು ಕೆಲವು ಮಾತುಗಳನ್ನಾಡಬೇಕಾಗಿ ವಿನಂತಿಸುತ್ತೇನೆ.” ತಮಗೆ...
ಮಸುಕಾಗುತ್ತಿರುವ ನೇಸರನ ಎದುರಾಗಿ ಅಳಿಸಿ ಹೋಗುತ್ತಿರುವ ಹೆಜ್ಜೆಗಳ ಪಕ್ಕದಲ್ಲಿ ಹೆಜ್ಜೆ ಮೂಡಿಸುತ್ತಾ ದೊಡ್ಡ ಸವಾಲಾಗಿ ನಡೆಯುತ್ತಿದ್ದೆ. ತಣ್ಣನೆ ನೀರಿನಲ್ಲಿ ಪಾದಗಳು ಒದ್ದೆಯಾದರೂ ಮೊದಲಿನ ಪುಳಕವಿಲ್ಲ, ಪ್ರೀತಿ, ಪ್ರೇಮದ ಹಸಿ ವಾಸನೆಯೂ ಇಲ್ಲ. ಬೇಡಬೇಡವೆಂದರೂ ಸಿಹಿ ನೆನಪು ಕಹಿಯಾಗಿ ಕಾಡುತ್ತಿದೆ. ಇದೇ ತೀರದಲ್ಲಿ ನಾನು, ಅಲ್ಲಲ್ಲ ನಾವು, ಕಟ್ಟಿದ...
ನಿಮ್ಮ ಅನಿಸಿಕೆಗಳು…