Author: Jessy PV, jessypv77@gmail.com
ಪರೀಕ್ಷೆಯೆಂದರೆ ವಿದ್ಯಾರ್ಥಿಗಳಿಗೆ ಭಯ, ಕಳವಳ. ಎಸ್ ಎಸ್ ಎಲ್ ಸಿ ಪರೀಕ್ಷೆ ಬಂತೆಂದರೆ ನನಗೂ ಕಳವಳ. ಶಿಕ್ಷಕಿಯಾಗಿ ನನ್ನ ವಿದ್ಯಾರ್ಥಿಗಳು ಹೇಗೆ ಪರೀಕ್ಷೆ ಬರೆಯುವರೋ ಎಂಬುದು ನನ್ನ ಕಳವಳದ ಒಂದು ಕಾರಣವಾದರೆ ಇನ್ನೊಂದು ಬಲವಾದ ಕಾರಣ, ಕೊಠಡಿ ಮೇಲ್ವಿಚಾರಣೆ ಎಂಬ ಆ ಮೂರು ಗಂಟೆಗಳು ನನಗೆ ಜೈಲೊಳಗಿದ್ದಂತೆ...
‘ ಗುಡ್ ಫ್ರೈಡೆ ದಿನ ಕ್ರಿಶ್ಚಿಯನ್ನರಿಗೆ ವಿಶೇಷ ದಿವಸವಲ್ಲವೇ? ಆ ದಿನ ಶುಭಾಶಯ ಹೇಳಲಿಕ್ಕಿಲ್ಲ ಎಂದು ಯಾರೋ ಅಂದರು. ಯಾಕೆ ಎಂದು ನನ್ನ ಮಿತ್ರರೊಬ್ಬರು ಕೇಳಿದರು. ಶುಭಾಶಯ ಹೇಳಿದರೆ ಅಪರಾಧವೇನೂ ಅಲ್ಲ. ಆದರೆ ಇದು ಸಂಭ್ರಮಿಸುವ ಹಬ್ಬವಲ್ಲ. ದುಃಖದಿಂದ, ಅತೀವ ಭಕ್ತಿಯಿಂದ ಆಚರಿಸುವ ಅತಿ ಮಹತ್ವದ ಹಬ್ಬ....
. ಖಗೋಳವೆಂಬ ವಿಷಯವೇ ಅಂಥದ್ದು. ಸ್ವಲ್ಪ ಆಸಕ್ತಿ ಬೆಳೆಸಿಕೊಂಡರೆ ಅದು ಮಹಾ ಕುತೂಹಲವಾಗಿ ಬೆಳೆದುಬಿಡುತ್ತದೆ. ನನ್ನ ಬಾಲ್ಯದಲ್ಲಿ ರಾತ್ರಿ ಆಕಾಶ ನೋಡುವುದೆಂದರೆ ನನಗೆ ಬಹಳ ಅಚ್ಚುಮೆಚ್ಚಿನ ವಿಷಯವಾಗಿತ್ತು. ಅನಂತಕೋಟಿ ನಕ್ಷತ್ರಗಳು ಮಿನುಗುವ ಆಕಾಶ, ಬೆಳ್ಳಿ ಬೆಳಕಿನ ಚಂದಿರ ಹೊಳೆವ ಆಕಾಶ ನೋಡಿ ನಾನು ಮಂತ್ರಮುಗ್ಧಳಾಗಿ ನಿಂತುಬಿಡುತ್ತಿದ್ದೆ. ನನ್ನ ವಿವಾಹದ...
ನಿಮ್ಮ ಅನಿಸಿಕೆಗಳು…